0
23
loading...

ನವೀಕೃತ ಪತ್ರಕರ್ತರ ಭವನದ ಉದ್ಘಾಟನೆ
ಜಿಲ್ಲೆಯ ಎಲ್ಲ ಜನವಸತಿಗಳಿಗೆ ನದೀ ನೀರು ಶೀಘ್ರ ಲೋಕಾರ್ಪಣೆ
ಗದಗ 8: ಗದಗ ಜಿಲ್ಲೆಯ ಅತ್ಯಂತ ಮಹತ್ವಪೂರ್ಣ ನೀರು ಪೂರೈಕೆ ಯೋಜನೆ 1049 ಕೋಟಿ ರೂ. ವೆಚ್ಚದ ಜಿಲ್ಲೆಯ ಎಲ್ಲ ಜನವಸತಿಗಲೀಗೆ ನದೀ ನೀರು ಪೂರೈಕೆ ಯೋಜನೆ ಫೆಬ್ರುವರಿ ಮೊದಲ ವಾರದೊಳಗಾಗಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ತಿಳಿಸಿದರು.
ಗದಗ ಮುಳಗುಂದ ರಸ್ತೆಯಲ್ಲಿರುವ ಪತ್ರಿಕಾ ಭವನವನ್ನು ತಮ್ಮ ಶಾಸಕರ ಅನುದಾನದಲ್ಲಿ ಸುಸಜ್ಜಿತ ಸೌಲಭ್ಯದ ನವೀಕೃತ ಪತ್ರಿಕಾ ಭವನವನ್ನು ಉದ್ಘಾಟಿಸಿ ಅದರ ಪ್ರಥಮ ಪತ್ರಿಕಾಗೋಷ್ಟಿಯಲ್ಲಿ ಅವರಿಂದು ಮಾತನಾಡಿದರು. ಗದಗ ಬೆಟಗೇರಿ ಅವಳಿ ನಗರದಲ್ಲಿ ಕಳಸಾಪುರ ರಸ್ತೆಯಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಭರದಿಂದ ಸಾಗಿದ್ದು ಫೆಬ್ರುವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಗದಗ-ಬೆಟಗೇರಿ ನಗರದ ವೃತ್ತ ಹಾಗೂ ರಸ್ತೆಗಳಿಗೆ ತೋಂಟದಾರ್ಯ, ಶಿವಶರಣ ಹರಳಯ್ಯ, ಅಂದಾನೆಪ್ಪ ದೊಡ್ಡಮೇಟಿ, ಸೇವಾಲಾಲ್ ಮಾಚಿದೇವ ಮುಂತಾದ 9 ಮಹನೀಯರ ಹೆಸರಿಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಅಭಿವೃದ್ಧಿ ಪರ್ವದ ಸಂಭ್ರಮದಲ್ಲಿರುವ ಗದಗ ಜಿಲ್ಲೆ ಹಾಗೂ ಗದಗ ಬೆಟಗೇರಿ ಅವಳಿ ನಗರಕ್ಕೆ ಕಳಸಪ್ರಾಯವಾಗಿ ಮೂರು ದಿನ ಗದಗ ಉತ್ಸವ ಅತೀ ವಿಶಿಷ್ಟವಾಗಿ ಜನಾನುರಾಗಿಯಾಗಿ, ಜನಸಾಗರದ ಸಮೂಹದೊಂದಿಗೆ ಜರುಗಿದ್ದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಉತ್ಸವಕ್ಕೆ ತಡರಾತ್ರಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಪ್ರೋತ್ಸಾಹಿಸಿದ ಜನತೆ ಇದರೊಂದಿಗೆ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಇದಕ್ಕೂ ವಿಶೇಷವಾಗಿ ಗದಗ ಉತ್ಸವ ಪ್ರತಿಯೊಂದು ವೈಶಿಷ್ಟ್ಯ ಕುರಿತು ಫಲಪುಷ್ಪ ಪ್ರದರ್ಶನ, ಸರಸ ಮೇಳ, ಹೆಲಿರೈಡ್ , ಸಾಹಸ ಕ್ರೀಡೆ , ಮುಸ್ಸಂಜೆ ಸಾಂಸ್ಕøತಿಕ ಸಂಗೀತ ಕಾರ್ಯ ಕ್ರಮ ಕುಮಾರವ್ಯಾಸನ ಕುರಿತ ವಿದ್ವತ್ ಪೂರ್ಣ ಗೋಷ್ಟಿ ಹೀಗೆ ಪ್ರತಿಯೊಂದು ಜನರಿಗೆ ಮಾಹಿತಿ ತಲುಪಿಸಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆ ಪಾಲ್ಗೊಳ್ಳುವಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ ಮಾಧ್ಯಮದ ಮಿತ್ರರನ್ನು ಛಾಯಾಗ್ರಾಹಕರನ್ನು ವಿಶೇಷವಾಗಿ ಅಭಿನಂದಿಸುವುದಾಗಿ ಸಚಿವ ಎಚ್.ಕೆ.ಪಾಟೀಲ ನುಡಿದರು.
ಜಲಸಂಪನ್ಮೂಲ ಇಲಾಖೆ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ರಾಮಕೃಷ್ಣ ದೊಡ್ಡಮನಿ , ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ , ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಬಿ.ಬಿ. ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭು ಬುರಬುರೆ , ಜಿಲ್ಲಾಧಿಕಾರಿ ಮನೋಜ್ ಜೈನ್ , ತಾ.ಪಂ. ಉಪಾಧ್ಯಕ್ಷ ಎ.ಆರ್. ನದಾಫ್ , ಜಿ.ಪಂ. ಸದಸ್ಯ ಸಿದ್ದು ಪಾಟೀಲ, ಜನಪ್ರತಿನಿಧಿಗಳು, ಮುದ್ರಣ ಹಾಗೂ ಟಿವಿ ಮಾಧ್ಯಮದ ಸರ್ವ ಪ್ರತಿನಿದಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

 

loading...