ಗೋಟುರಿನಲ್ಲಿ ಸಂಭ್ರಮದ ೬೯ ನೇ ಗಣರಾಜೋತ್ಸವ ಆಚರಣೆ

0
27
loading...

ಗೋಟುರಿನಲ್ಲಿ ಸಂಭ್ರಮದ ೬೯ ನೇ ಗಣರಾಜೋತ್ಸವ ಆಚರಣೆ

ಕನ್ನಡಮ್ಮ ಸುದ್ದಿ

ಸಂಕೇಶ್ವರ ೨೬ :ಸಮೀಪದ ಗೋಟುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿ ವಿಜ್ರಂಭನೆಯಿಂದ ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಯಿತು.

ಶುಕ್ರವಾರ ಶಾಲೆಯ ಆವರಣೆಯಲ್ಲಿ ರಾಷ್ಟ್ರ ಧ್ವಜಕ್ಕೆ ಶಾಲಾ ಸುಧಾರಣೆ ಸಮೀತಿ ಅಧ್ಯಕ್ಷರಾದ ನಾನಾಸಾಹೇಬ ಶೇಖನವರ ಧ್ವಜಾರೋಹಣ ನೇರವೇರಿಸಿದರು .

ಗಣರಾಜೋತ್ಸವ ಅಂಗವಾಗಿ ಶಾಲಾ ವಿಧ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ, ಭಾಷಣ ಸ್ಪರ್ಧೆ, ರಾಷ್ಟ್ರ ಭಕ್ತಿ ಗೀತೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ವಿಧ್ಯಾರ್ಥಿಗಳು ಅತಿ ಉತ್ಸಾಹದಿಂದ ಭಾಗವಹಿಸಿ ದೇಶ ಭಕ್ತಿಯ ಕುರಿತು ವಿಧ್ಯಾರ್ಥಿನಿಗಳು ಹಾಡು ಗಮನ ಸೇಳೆಯಿತು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿಗೆ ನೂತನವಾಗಿ ಅಧ್ಯಕ್ಷೆಯಾಗಿ ಆಯ್ಕೆಯಾದ ಶ್ರೀಮತಿ ದೀಪಾ ರವಿಂದ್ರ ಮಾಶೇವಾಡಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಹನುಮಂತ ಕ ಶೇಖನವರ ಅವರನ್ನ ಸತ್ಕರಿಸಲಾಯಿತು .

ಕಾರ್ಯಕ್ರಮದಲ್ಲಿ ಶಾಲಾ ಸುಧಾರಣೆ ಸಮೀತಿ ಅಧ್ಯಕ್ಷರಾದ ನಾನಾಸಾಹೇಬ ಶೇಖನವರ,ಸದಸ್ಯರಾದ ಗುರುನಾಥ ಶಿಂಧೆ,ರುದ್ರಗೌಡ ಮ ಪಾಟೀಲ, ಗ್ರಾಮ ಪಂಚಾಯತಿ ಸದಸ್ಯರಾದ ರವಿಂದ್ರ ಮಾಶೇವಾಡಿ,ಕಲಗೌಡ ಕಮತೆ,ಶಾಲೆಯ ಮುಖೋಪಾಧ್ಯಯರಾದ ಶ್ರೀಮತಿ ಎಸ್.ಆರ್. ಸವಣೂರ ,ಶಿಕ್ಷಕಿಯರಾದ ಶ್ರೀಮತಿ ಎಚ್.ಎಸ್.ಬಾಳಗುಂಡಿ,ಎಸ್.ಬಿ.ವಾಂದಾಳೆ,ಎಸ್.ಎಮ್.ದೇಬಾಜಿ, ಶಿಕ್ಷಕರಾದ ಹೆಚ್.ಡಿ ಹಬೀಬ,ವಾಜೆಂತ್ರೆ,ಎಸ್ .ಕೆ. ಕಾಂಬಳೆ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದು ಶಿಕ್ಷಕರಾದ ವಾಜಂತ್ರೆ ಅವರು ನಿರೂಪಿಸಿ ವಂದಿಸಿದರು .

loading...