25 ರಿಂದ ಪ್ರವಚನ ಕಾರ್ಯಕ್ರಮ

0
13
loading...

ಕನ್ನಡಮ್ಮ ಸುದ್ದಿ-ನರಗುಂದ: ಪಟ್ಟಣದ ದಂಡಾಪೂರ ಬಡಾವಣೆಯ ಗ್ರಾಮದೇವತೆ ಉಡಚಾ ಪರಮೇಶ್ವರಿ ಜಾತ್ರಾಮಹೋತ್ಸವದ ಅಂಗವಾಗಿ ಜ. 25 ರವರೆಗೆ ನಿತ್ಯ ಸಂಜೆ 7.30 ರಿಂದ 8.30 ರವರೆಗೆ ಸುಕ್ಷೇತ್ರ ಪತ್ರಿವನಮಠದ ಮಹಾತ್ಮೆ ಕುರಿತು ಪ್ರವಚನ ಆರಂಭಗೊಳಿಸಲಾಗಿದೆ. ಪತ್ರಿವನಮಠದ ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯರು ಹಾಗೂ ಪಂಚಗ್ರಹ ಗುಡ್ಡದ ಸಿದ್ದಲಿಂಗ ಶಿವಾಚಾರ್ಯರ ಸಾನಿಧ್ಯದಲ್ಲಿ ನಿತ್ಯ ಪ್ರವಚನವನ್ನು ಬನಹಟ್ಟಿಯ ಶೇಖರಯ್ಯ ಸ್ವಾಮಿಗಳು ನೀಡಲಿದ್ದಾರೆ. ಭಕ್ತರು ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಉಡಚಾ ಪರಮೇಶ್ವರಿ ಮಂದಿರದ ಭಕ್ತಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

loading...