6 ಕೋಟಿ ವೆಚ್ಚದ ಹೈಟೆಕ ರಸ್ತೆ ಕಾಮಗಾರಿಗೆ ಶಾಸಕ ಉಮೇಶ ಕತ್ತಿ ಚಾಲನೆ

0
29
loading...

ಸಂಕೇಶ್ವರ 03 : ಲೋಕೋಪಯೋಗಿ ಇಲಾಖೆಯ ವತಿಯಿಂದ ಸಂಕೇಶ್ವರ ನಗರದ ರಾಣಿಚನ್ನಮ್ಮ ವೃತ್ತದಿಂದ ಹಿರಣ್ಯಕೇಶಿ ಬೈಪಾಸ್‌ ರಸ್ತೆ ವರೆಗಿನ 2 ಕಿ.ಮೀ. ಹೆದ್ದಾರಿಯ ಕಾಂಕ್ರೀಟ ದ್ವಿಪಥ ರಸ್ತೆಯು 4 ಕೋಟಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ಅಲ್ಲದೇ ಅಂಚೆ ಕಚೇರಿ ವೃತ್ತದಿಂದ ಸೊಲ್ಲಾಪೂರ ಬೈಪಾಸ್‌ ರಸ್ತೆ ವರೆಗಿನ 1 ಕೋಟಿ 70 ಲಕ್ಷ ವೆಚ್ಚಿದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಹುಕ್ಕೇರಿ ಶಾಸಕ ಉಮೇಶ ಕತ್ತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಉಮೇಶ ಕತ್ತಿ ಅವರು, ಮುಂಬರುವ 10 ವರ್ಷಗಳ ಕಾಲ ಈ ರಸ್ತೆಯು ಬಾಳಿಕೆ ಬರಲಿದ್ದು ತಾಲೂಕಿನಲ್ಲಿಯೇ ಈ ರಸ್ತೆ ಹೈಟೆಕ್‌ವಾಗಲಿದೆಯೆಂದರು. ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ಧನಶ್ರೀ ಕೋಳೇಕರ, ಉಪಾಧ್ಯಕ ಅಪ್ಪಾಸಾಹೇಬ ಹೆದ್ದೂರಶೆಟ್ಟಿ, ಹಿರಣ್ಯಕೇಶಿ ಸಕ್ಕರೆ ಕಾರಖಾನೆ ಚೇರಮನ್‌ ಅಪ್ಪಾಸಾಹೇಬ ಶಿರಕೋಳಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಈರಣ್ಣಾ ಹಾಲದೇವರಮಠ, ಎ.ಪಿ.ಎಂ.ಸಿ.ಅಧ್ಯಕ್ಷ ಪ್ರಶಾಂತ ಪಾಟೀಲ, ಪಿ.ಎಲ್‌.ಡಿ.ಬ್ಯಾಂಕ ಅಪ್ಪಾಸಾಹೇಬ ಸಂಕಣ್ಣವರ, ಸಂಗಮ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಅಮರ ನಲವಡೆ, ಅಭಿಜಿತ ಕುರಣಕರ, ಗಂಗಾರಾಮ ಭೂಸಗೇಳ, ಶ್ರೀಕಾಂತ ಹತನೂರೆ, ಸಂಜಯ ಶಿರಕೋಳಿ, ಬಿಜೆಪಿ ಯುವ ಧುರೀಣ ಮಾರುತಿ ಅಷ್ಟಗಿ, ಸುನೀಲ ಪರ್ವತರಾವ, ಹಾರೂಣ ಮುಲ್ಲಾ ಹಾಗೂ ಪುರಸಭೆ ಸದಸ್ಯರು, ಪವನ ಪಾಟೀಲ, ಅಶೋಕ ಹಿರೇಕೂಡಿ, ಗುತ್ತಿಗೆದಾರ ಕೆ.ದೊರೈಸ್ವಾಮಿ, ಕಾರ್ಯಕಾರಿ ಅಭಿಯಂತ ವಿ.ಎನ್‌.ಪಾಟೀಲ, ಎಚ್‌.ಗಿರಿರಾಜ, ಮುಖ್ಯಾಧಿಕಾರಿ ಜಗದೀಶ ಈಟಿ ಉಪಸ್ಥಿತರಿದ್ದರು.

loading...