ಅಂಧಾನುಕರಣೆ ತಿದ್ದಲು ಕಾಲಕಾಲಕ್ಕೆ ಕಾಲಜ್ಞಾನಿಗಳು ಜನ್ಮಿಸಿದ್ದಾರೆ: ಮೊಗವೀರ

0
25
loading...

ಕನ್ನಡಮ್ಮ ಸುದ್ದಿ-ಶಿರಸಿ: ಆತ್ಮಾಭಿಮಾನಕ್ಕೆ, ಅಸ್ಮಿತೆಗೆ ಕುಂದು ಬಂದಾಗ ಸಂಘಟಿತವಾಗಿ, ಸತ್ವಯುತವಾಗಿ, ಶಕ್ತಿ ಸಂಪನ್ನನಾಗಿ ದೇಶ ಕಟ್ಟಿದ ವೀರ. ಅವರ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಶಿರಸಿ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಹೇಳಿದರು.
ನಗರದ ಮಿನಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ, ಕವಿ ಸರ್ವಜ್ಞ, ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದಲ್ಲಿರುವ ಅಂಧಾನುಕರಣೆಯನ್ನು ತಿದ್ದಲು ಕಾಲಕಾಲಕ್ಕೆ ಕಾಲಜ್ಞಾನಿಗಳು ಜನ್ಮಿಸಿದ್ದಾರೆ. ಅಂಥವರ ಸಾಲಿನಲ್ಲಿ ಶಿವಾಜಿ, ಸರ್ವಜ್ಞ ಸೇರಿದಂತೆ ಹಲವರು ತಮ್ಮ ಕೊಡುಗೆ ನಡಿದ್ದಾರೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ಮಾತನಾಡಿ, ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ಎಂದಿದ್ದ ಶಿವಾಜಿ ಅವರ ಜೀವನಾದರ್ಶ ಇಂದಿನ ಯುವಕರಿಗೆ ಮಾದರಿ ಎಂದರು. ಶಿವಾಜಿ ಅವರ ತ್ಯಾಗ, ಪರಾಕ್ರಮ ಹಾಗೂ ಆದರ್ಶ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಸಮಾಜದಲ್ಲಿರುವ ಅವ್ಯವಸ್ಥೆ ಸರಿ ಮಾಡಲು ನಿರಂತರ ಹೋರಾಟ ಮಾಡಿದ ಸರ್ವಜ್ಞ ಕವಿ ಸಮಾಜವನ್ನು ಪರಿಶುದ್ಧತೆಯತ್ತ ಕೊಂಡೊಯ್ಯಲು ಶ್ರಮಿಸಿದರು ಎಂದರು. ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ ಇದ್ದರು.

loading...