ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ನೀಡಿ

0
48
loading...

ಶಿರಹಟ್ಟಿ: ಇತ್ತೀಚೆಗೆ ಬೀದರ ಜಿಲ್ಲೆ ಬಾಲ್ಕಿ ತಾಲೂಕಿನ ಕೋಸಂ ಗ್ರಾಮದ ವಿದ್ಯಾರ್ಥಿನಿ ಪೂಜಾ ಹದಪದ ಅವರ ಮೇಲೆ ಅತ್ಯಾಚಾರವೆಸಗಿ ಕೋಲೆಗೈದ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಹಡಪದ ಅಪ್ಪಣ್ಣ ಹಾಗೂ ಸವಿತಾ ಸಮಾಜದಿಂದ ಆಗ್ರಹಿಸಿದರು.
ಹಡಪದ ಅಪ್ಪಣ್ಣ ಹಾಗೂ ಸವಿತಾ ಸಮಾಜದ ವತಿಯಿಂದ ಅತ್ಯಾಚಾರವೆಸಗಿದ ಆರೋಪಿಗೆ ಗಲ್ಲುಶಿಕ್ಷ ನೀಡಬೇಕೆಂದು ಒತ್ತಾಯಿಸಿ ತಹಶೀಲ್ದಾರ ಕಾರ್ಯಲಯಕ್ಕೆ ತೆರಳಿ ತಹಶೀಲ್ದಾರ ಎ.ಡಿ. ಅಮರಾವದಗಿ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಸಿದರು.
ನಂತರ ಕ್ಷೌರಿಕ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ ಅರಿಪಲ್ಲಿ ಮಾತನಾಡಿ. ರಾಜ್ಯದಲ್ಲಿ ದಿನೇ ದಿನೇ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಲ್ಲದೆ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದಂತ್ತಾಗಿದ್ದು. ಶಾಲಾ ಕಾಲೇಜು ವಿದ್ಯಾರ್ಥಿನಿಯರು ಮನೆ ಬಿಟ್ಟು ಹೊರ ಬರಲು ಅಂಜುವಸ್ಥಿತೀ ನಿರ್ಮಾಣವಾಗಿದೆ. ಆದ್ದರಿಂದ ಇಂತಹ ಪೈಶಾಚಿಕ ಕೃತ್ಯವೆಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ಸಂತ್ರಸ್ಥೆಯಾದ ಪೂಜಾಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಮೂಲಕ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಸರಕಾರಿ ನೌಕರಿಯನ್ನು ಕೊಡಬೇಕೆಂದು ರಾಜ್ಯ ಹಡಪದ ಅಪ್ಪಣ್ಣ ಹಾಗೂ ಸವಿತಾ ಸಮಾಜದ ವತಿಯಿಂದ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಶ್ರೀನಿವಾಸ ಬಾರಬಾರ, ಕುರುಮಯ್ಯ ಬಾರಬಾರ, ನಾಗರಾಜ ಅರೆಪಲ್ಲಿ, ನಾಗರಾಜ ಡಂಬಳ, ಚನ್ನವೀರಪ್ಪ ನಾವಿ, ಯಲ್ಲಪ್ಪ ಮಾಗಡಿ, ಬಾಲಕೃಷ್ಣ ಬಾರಬಾರ, ಬಲರಾಮ ಕಲವರ, ಬಸವರಾಜ ಮಾಗಡಿ, ಪಕ್ಕೀರೇಶ ನಾವಿ, ಶಿವಾನಂದ ಮಾಗಡಿ, ಪವನ ಮಹೇಂದ್ರಕರ, ಪ್ರಕಾಶ ಕಲ್ಲೂರ, ಮಹಾಂತೇಶ ಮಾಗಡಿ, ಎಂ.ಎಸ್‌. ಮಾಗಡಿ, ಅಶೋಕ ಡಂಬಳ, ಮಂಜುನಾಥ ಹಡಪದ ಮುಂತಾದವರು ಉಪಸ್ಥಿತರಿದ್ದರು.

loading...