ಅದ್ಧೂರಿ ಶಿವ-ಬಸವಣ್ಣ ಜಯಂತಿ ಆಚರಣೆಗೆ ನಿರ್ಧಾರ

0
21
loading...

ಗಂಗಾವತಿ: ಹಿಂದೂ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಫೆ.19 ಎಂದು ಅದ್ದೂರಿಯಿಂದ ಆಚರಿಸಬೇಕು ಎಂದು ಕ್ಷತ್ರಿಯ ಮಹಾಸಭಾ ಮುಖಂಡರು ಒತ್ತಾಯಿಸಿದರು.
ಮಂಥನ ಸಭಾಂಗಣದಲ್ಲಿ ಗುರುವಾರ ತಹಶೀಲ್ದಾರ ಕವಿತಾ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹೇಳಿದರು.
ಕ್ಷತ್ರಿಯ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ತಿಪ್ಪಣ್ಣ ಬಿದರಕರ್‌ ಮಾತನಾಡಿ ಜಯಂತಿ ದಿನದಂದು ಪ್ರಮುಖ ವೃತ್ತಗಳಲ್ಲಿ ತಳಿರು ತೋರಣಗಳಿಂ ಅಲಂಕರಿಸಬೇಕು ಮತ್ತು ಮಹಿಳೆಯರು ತಮ್ಮ ಮನೆಯ ಅಂಗಳದಲ್ಲಿ ರಂಗೋಲಿ ಹಾಕಿ ಸಿಂಗರಿಸಬೇಕು ಎಂದು ತಿಳಿಸಿದರು.
ಶಿವಾಜಿಯನ್ನು ಒಂದು ಕೋಮಿಗೆ ಸೇರಿಸದೆ ಜಯಂತಿಯಲ್ಲಿ ಎಲ್ಲಾ ಕೋಮಿನವರು ಪಾಲ್ಗೊಳ್ಳಬೇಕು. ಇದಕ್ಕೆ ತಾಲೂಕು ಆಡಳಿತ ಸಕಲ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಮಾರ್ಗ ಬದಲಿಸಬೇಡಿ:ಹಿಂದೂ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶ್ರವಣಕುಮಾರ ರಾಯ್ಕರ್‌ ಮಾತನಾಡಿ ಸಿಬಿಎಸ್‌ ವೃತ್ತದಿಂದ ಆರಂಭಗೊಂಡ ಜಯಂತಿ ಮೆರವಣಿಗೆ ಮಹಾವೀರ ವೃತ್ತ, ಗಾಂಧಿ ವೃತ್ತದ ಮೂಲಕ ಬಸವಣ್ಣ ವೃತ್ತದ ಮೂಲಕ ವೇದಿಕೆಗೆ ತಲುಪಬೇಕು. ಯಾವುದೇ ಕಾರಣಕ್ಕೂ ಮಾರ್ಗ ಬದಲಾವಣೆಗೆ ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದರು. ಕಳೆದ ವರ್ಷ ಪೊಲೀಸರು ಮೆರವಣಿಗೆ ಮಾರ್ಗ ಕುರಿತಂತೆ ಗೊಂದಲವನ್ನು ಸೃಷ್ಟಿಸಿದ್ದರು ಎಂದು ತಿಳಿಸಿದರು. ಕ್ಷತ್ರಿಯ ಮಹಾಸಭಾ ಕಾರ್ಯದರ್ಶಿ ಗಿರೀಶ ಗಾಯಕವಾಡ ಮಾತನಾಡಿದರು.

loading...