ಅರಭಾವಿ ಕ್ಷೇತ್ರವನ್ನು ಬೀಡುವುದಿಲ್ಲ,ಬೇರೆ ಪಕ್ಷ ಸೇರಲ್ಲ

0
26
loading...

ಕನ್ನಡಮ್ಮ ಸುದ್ದಿ-ಘಟಪ್ರಭಾ: ಅರಭಾವಿ ಬಿಡಲ್ಲವುದಿಲ್ಲ ಆ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಇದು ಶತಸಿದ್ಧ. ಸ್ವ-ಪಕ್ಷೀಯ ಕೆಲವರು ಗೋಕಾಕ ಅಥವಾ ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಾರ್ವಜನಿಕವಾಗಿ ವದಂತಿಗಳನ್ನು ಹರಡಿಸುತ್ತಿದ್ದಾರೆ. ಅಂತಹ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಅವರೇ ಬೇಕಾದರೆ ಹೋಗಿ ಅಲ್ಲಿ ಸ್ಪರ್ಧೆ ಮಾಡಲಿ. ಅರಭಾವಿಯನ್ನು ಬಿಟ್ಟುಕೊಡುವ ಹಾಗೂ ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಮೀಪದ ಕಲ್ಲೋಳಿ ಪಟ್ಟಣದ ಬಲಭೀಮ ರಂಗಮಂಟಪದಲ್ಲಿ ಶುಕ್ರವಾರ ರಾತ್ರಿ ಪಟ್ಟಣ ಪಂಚಾಯತಿಯಿಂದ ಜರುಗಿದ 5 ಕೋಟಿ ರೂ. ವೆಚ್ಚದ ನಗರೋತ್ಥಾನ-3 ಯೋಜನೆಯಡಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಅರಭಾವಿ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ. ಅದೇ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೆನೆ. ಇದು ಶತಸಿದ್ಧ. ಸ್ವ-ಪಕ್ಷೀಯ ಕೆಲವರು ಗೋಕಾಕ ಅಥವಾ ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಾರ್ವಜನಿಕವಾಗಿ ವದಂತಿಗಳನ್ನು ಹರಡಿಸುತ್ತಿದ್ದಾರೆ. ಅಂತಹ ಯಾವುದೇ ವದಂತಿಗಳಿಗೆ ಜನರು ಕಿವಿಗೊಡಬಾರದು. ಹೇಳಿದವರೇ ಬೇಕಾದರೆ ಹೋಗಿ ಅಲ್ಲಿ ಸ್ಪರ್ಧೆ ಮಾಡಲಿ.ಅರಭಾವಿಯನ್ನು ಬಿಟ್ಟುಕೊಡುವ ಹಾಗೂ ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಸ್ತೆಗಳ ಅಭಿವೃದ್ಧಿ, ಒಳಚರಂಡಿ ಮತ್ತು ಶೌಚಾಲಯಗಳ ನಿರ್ಮಾಣ ಹಾಗೂ ಕುಡಿಯುವ ನೀರಿಗಾಗಿ ಜಲಸಂಗ್ರಹಾಲಯ ನಿರ್ಮಿಸಲಾಗುವುದು. ನಗರೋತ್ಥಾನ ಯೋಜನಾನುಷ್ಠಾನದಿಂದ ಕಲ್ಲೋಳಿ ಪಟ್ಟಣ ಸುಂದರವಾಗಲಿದೆ. ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿರುವುದರಿಂದ ಅಭಿವೃದ್ಧಿಗಾಗಿ ಸರ್ಕಾರದಿಂದ ಪ್ರತಿವರ್ಷ ಹೆಚ್ಚಿನ ಅನುದಾನ ಹರಿದು ಬರಲಿದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಬರಲಿರುವ ಚುನಾವಣೆಯೊಳಗೆ ಮುಕ್ತಾಯಗೊಳಿಸಲಾಗುವುದು ಎಂದರು.
ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಭಿವೃದ್ಧಿ ಪರ ಕಾರ್ಯಗಳನ್ನು ವಿವರಿಸಿ, 224 ಕ್ಷೇತ್ರಗಳ ಶಾಸಕರಲ್ಲಿ ಬಾಲಚಂದ್ರ ಅವರಂತಹ ಶಾಸಕರು ಸಿಗುವುದು ವಿರಳ. ಇವರೊಬ್ಬ ನಾಡಿನ ಅಪ್ರತಿಮ ಜಾತ್ಯಾತೀತ ನಾಯಕ ಎಂದು ಬಣ್ಣಿಸಿದರು.
ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ಕಸ್ತೂರಿ ಕುರಬೇಟ ವಹಿಸಿದ್ದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ನಾಗರೀಕರು ಹಾಗೂ ವಿವಿಧ ಸಮುದಾಯದ ಸಂಘಟನೆಯ ಮುಖಂಡರು ಅದ್ಧೂರಿಯಾಗಿ ಸತ್ಕರಿಸಿದರು. ಬೆಳ್ಳಿ ಖಡ್ಗ ನೆನಪಿನ ಕಾಣಿಕೆಯನ್ನಾಗಿ ನೀಡಿರುವುದು ವಿಶೇಷವಾಗಿತ್ತು. ಬೆಂಗಳೂರು ಸಹಕಾರಿ ಮಾರಾಟ ಮಹಾಮಂಡಳದ ಉಪಾಧ್ಯಕ್ಷ ಬಿ.ಆರ್‌. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಸ್‌.ಜಿ. ಢವಳೇಶ್ವರ, ಜಿಪಂ ಸದಸ್ಯೆ ವಾಸಂತಿ ತೇರದಾಳ, ಯುವ ಮುಖಂಡ ರಾವಸಾಬ ಬೆಳಕೂಡ, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲಪ್ಪ ಹೆಬ್ಬಾಳ, ಪ್ರಭಾಶುಗರ ನಿರ್ದೇಶಕ ಮಹಾಂತೇಶ ಕಪ್ಪಲಗುದ್ದಿ, ತಾಪಂ ಮಾಜಿ ಸದಸ್ಯ ಅಶೋಕ ಮಕ್ಕಳಗೇರಿ, ಪಪಂ ಉಪಾಧ್ಯಕ್ಷೆ ಕಾಶವ್ವ ಸೊಂಟನವರ, ಸುಭಾಸ ಕುರಬೇಟ, ಬಿ.ಬಿ. ದಾಸನವರ, ಬಸವರಾಜ ಯಾದಗೂಡ, ಅಜೀತ ಬೆಳಕೂಡ, ವಸಂತ ತಹಶೀಲ್ದಾರ, ಪ್ರಭು ಕಡಾಡಿ, ಮಲ್ಲಪ್ಪ ಖಾನಾಪೂರ, ಪರಗೌಡ ಪಾಟೀಲ, ಭಗವಂತ ಪತ್ತಾರ, ಬಸವರಾಜ ಕಂಕಣವಾಡಿ, ಉಮೇಶ ಬೂದಿಹಾಳ, ಸಯ್ಯದ ಪಾಟಗೇರಿ, ದತ್ತು ಕಲಾಲ, ಭೀಮಶೆಪ್ಪ ಗೊರೋಶಿ, ಬಸವಂತ ಕಮತಿ, ಮುತ್ತೆಪ್ಪ ಕುಳ್ಳೂರ, ಕೆಂಪಯ್ಯಾ ಕರಗಾಂವಿಮಠ, ಶಿವಾನಂದ ಹೆಬ್ಬಾಳ, ಸಿದ್ದಣ್ಣಾ ಮುಗಳಿ, ಮಹಾದೇವ ಮದಭಾವಿ, ಸಿದ್ದಣ್ಣಾ ಮಾಯನ್ನವರ, ಬಸವರಾಜ ಭಜಂತ್ರಿ, ಮುತ್ತೆಪ್ಪ ಇಮಡೇರ, ಮುತ್ತೆಪ್ಪ ತೆಳಗಡೆ, ಹನಮಂತ ನಂದಿ, ನಾಗಪ್ಪ ಗಾಡಿವಡ್ಡರ, ಗುತ್ತಿಗೆದಾರ ಮಹಾದೇವ ಹಾರೂಗೇರಿ, ಪಪಂ ಸದಸ್ಯರು ವೇದಿಕೆಯಲ್ಲಿದ್ದರು. ಮುಖ್ಯಾಧಿಕಾರಿ ಅರುಣಕುಮಾರ ಸ್ವಾಗತಿಸಿದರು.

loading...