ಅರುಣಿಮಾ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು: ಶಾಸಕ ರಾಜೀವ

0
28
loading...

ಕನ್ನಡಮ್ಮ ಸುದ್ದಿ-ಹಾರೂಗೇರಿ: ರೈಲು ದುರಂತದಲ್ಲಿ ತನ್ನ ಕಾಲು ಕಳೆದುಕೊಂಡರೂ ಕೂಡಾ ಹಿಮಾಲಯದ ಪರ್ವತ ಏರಿ ಭಾರತ ದೇಶದ ಧ್ವಜವನ್ನು ಹಾರಿಸಿದ ಅರುಣಿಮಾ ನಿನ್ಹಾ ಅವರು ಇಂದಿನ ಪ್ರತಿಯೊಂದು ಹೆಣ್ಣು ಮಕ್ಕಳಿಗೆ ಸೂತ್ರ್ಫಿಯಾಗಿದ್ದಾರೆ, ಅಂತಹ ಅರುಣಿಮಾ ಸಿನ್ಹಾಳ ಸಾಧನೆ ಇವತ್ತಿನ ಪ್ರತಿಯೊಬ್ಬ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಬೇಕೆಂದು ಕುಡಚಿ ಶಾಸಕ ಪಿ.ರಾಜೀವ್‌ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಸಮೀಪದ ಖೇಮಲಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಕ್ಕೋಡಿಯ ಸರ್ವಶಿಕ್ಷಣ ಅಭಿಯಾನದಡಿ ಅಂದಾಜುಮೊತ್ತ 8.70 ಲಕ್ಷ ರೂ.ವೆಚ್ಚದಲ್ಲಿ ಮಂಜೂರಾದ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೂರು ಗುಣಗಳನ್ನು ಹೊಂದಬೇಕು ಅವು ಯಾವವು ಎಂದರೆ ಪರಿಸರ ಪ್ರೇಮ, ದೇಶಪ್ರೇಮ ಹಾಗೂ ಮಾನವಪ್ರೇಮ, ಪರಿಸರವನ್ನು ನಾವು ರಕ್ಷಿಸಿದರೆ ಅದು ನಮಗೆ ಒಳ್ಳೆಯ ಆರೋಗ್ಯ ಸಂಪತ್ತನ್ನು ಕರುಣಿಸುತ್ತದೆ, ಒಳ್ಳೆಯ ಗುಣಮಟ್ಟದ ಶಿಕ್ಷಣ ಪಡೆದು ಭಾರತ ದೇಶಕ್ಕಾಗಿ ನಿಸ್ವಾರ್ಥ ಮನೋಭಾವದಿಂದ ಸೇವೆ ಮಾಡಿದರೆ ದೇಶದ ಪುಣ್ಯಭೂಮಿಯ ಋಣ ತೀರಿಸಿದಂತಾಗುತ್ತದೆ, ಮಾನವಪ್ರೇಮ ಅಂದರೆ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಪರಸ್ಫರ ಪ್ರೀತಿ ವಿಶ್ವಾಸದಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಉನ್ನತ ಗುಣಮಟ್ಟದ ಶಿಕ್ಷಣ ಪಡೆದು ಮಾನವಪ್ರೇಮಿಗಳಾಗಿ ದೇಶದ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ತಿಳಿಸಬೇಕೆಂದು ಶಾಸಕ ಪಿ.ರಾಜೀವ್‌ ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಯಬಾಗದ ಜಿಪಂ ಅಧಿಕಾರಿ ಬಸವರಾಜ ಮೇತ್ರಿ, ಗುತ್ತಿಗೆದಾರ ಎಮ್‌.ಬಿ ಮೋಮಿನ, ವಿಠ್ಠಲ ದಾಸರ, ಸುನೀಲಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ್ಯ ಸಿದ್ಧು ದೂಪದಾಳ, ಉಪಾಧ್ಯಕ್ಷ್ಯ ಬಸವರಾಜ ನವನಾಳೆ, ಕುಮಾರ ಹೊನವಾಡೆ, ರಾಯಪ್ಪ ಮೂಡಲಗಿ, ಅಪ್ಪಣ್ಣ ಬೆವನೂರ, ರತಿಕಾಂತ ಕೊಹಿನೂರ, ಸಿದ್ಧಣ್ಣ ಗುಡೋಡಗಿ, ಸಿದ್ಧು ನವನಾಳ, ನಿಂಗಣ್ಣ ಕೋಳಿ, ಶಿವಪುತ್ರ ಬಾನೆ, ರಾಜು ಬಡಿಗೇರ, ಶ್ರೀಕಾಂತ ಕದಂ, ಶ್ರೀಶೈಲ ಗುಡೋಡಗಿ, ರಾವಸಾಬ ಹೊನವಾಡೆ, ಬಾಬು ಕಿತ್ತೂರೆ, ಬಾಳಪ್ಪ ತಳವಾರ, ದೇವು ಚೌಗಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ಧರು.

loading...