ಆಹ್ವಾನಿತ ತಂಡಗಳ ಪ್ರೊ ಕಬಡ್ಡಿ ಪಂದ್ಯಾವಳಿ ಆರಂಭ

0
17
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಕರ್ನಾಟಕ ರಾಜ್ಯದ ಸುತ್ತಮುತ್ತಲ ಐದು ರಾಜ್ಯಗಳ 20 ಆಹ್ವಾನಿತ ತಂಡಗಳ ಹೊನಲು ಬೆಳಕಿನ ಪ್ರೋ ಕಬಡ್ಡಿ ಪಂದ್ಯಾವಳಿ ಶನಿವಾರ ಸಂಜೆ ಆರಂಭಗೊಂಡಿತು.
ಹಳಿಯಾಳ ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಮ್ಯಾಟ್ ಮೇಲೆ ಆಗುವ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ 1.50 ಲಕ್ಷ ರೂ. ಬಹುಮಾನದೊಂದಿಗೆ ಒಟ್ಟು 4 ದೊಡ್ಡ ಮೊತ್ತದ ಬಹುಮಾನ ಪಡೆಯಲು ಆಹ್ವಾನಿತ ತಂಡಗಳು ಸೆಣಸಾಟ ನಡೆಸಿವೆ.

ಶಿವಾಜಿ ವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕಬಡ್ಡಿ ಪಂದ್ಯಾವಳಿಯನ್ನು ವಿಆರ್‍ಡಿಎಂ ಟ್ರಸ್ಟ್ ವತಿಯಿಂದ ಪ್ರಾಯೋಜಕರಾದ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಸಚಿವ ಆರ್.ವಿ. ದೇಶಪಾಂಡೆ ಉದ್ಘಾಟಿಸಿದರು. ಅಭಿವೃದ್ಧಿ ಕಾರ್ಯಗಳು ಜೊತೆಗೆ ಸಾಂಸ್ಕøತಿಕ ಚಟುವಟಿಕೆಗಳೊಂದಿಗೆ ದೇಶಿಯ ಕ್ರೀಡೆಗಳಿಗೂ ಸಹ ತಾವು ನೀಡುತ್ತಿರುವ ಪ್ರೇರಣೆ ಇದೇ ರೀತಿ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
ಈ ಕಬಡ್ಡಿ ಪಂದ್ಯಾವಳಿಯ ಆಯೋಜಕರಾದ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ, ಎಪಿಎಂಸಿ ಚೇರಮನ್ ಶ್ರೀನಿವಾಸ ಶ್ರೀಕಾಂತ ಘೋಟ್ನೇಕರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ದೇಶಿಯ ಕ್ರೀಡೆಯಾದ ಕಬಡ್ಡಿಗೆ ಉತ್ತೇಜನ ಕೊಡುವ ದೃಷ್ಟಿಯಿಂದ ತಮ್ಮ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯ ಮಾಡುತ್ತಿದೆ ಎಂದರು. ಈ ಭಾಗದಲ್ಲಿ ಮ್ಯಾಟ್ ಕಬಡ್ಡಿ ಆಡಿಸಲು ಅವಶ್ಯಕವಾದ ಮ್ಯಾಟ್ ಅನ್ನು ನೀಡಬೇಕೆಂದು ಶ್ರೀನಿವಾಸರ ಕೋರಿಕೆಗೆ ಸಚಿವ ದೇಶಪಾಂಡೆಯವರು ಒಪ್ಪಿಗೆ ಸೂಚಿಸಿ ಮ್ಯಾಟ್ ಕೊಡಿಸುವ ವ್ಯವಸ್ಥೆ ಮಾಡುವದಾಗಿ ಘೋಷಿಸಿದರು.

ಗಾನಯೋಗಿ ಶ್ರೀ ಮಂಜುನಾಥ ಮಹಾರಾಜ, ಯು-ಮುಂಬಾ ಕಬಡ್ಡಿ ತಂಡದ ತರಬೆತುದಾರ ರವಿ ಶೆಟ್ಟಿ ಆಗಮಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ, ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ರಮಾನಂದ ನಾಯ್ಕ, ಸಂಘಟಕರಾದ ಸುಭಾಸ ಕಾಮ್ರೇಕರ, ದಿನೇಶ ನಾಯ್ಕ ಮೊದಲಾದವರಿದ್ದರು.

loading...