ಇಂದಿನಿಂದ ಸಿದ್ದೇಶ್ವರ ಜಾತ್ರಾಮಹೋತ್ಸವ

0
22
loading...

ನರಗುಂದ: ಪಟ್ಟಣದಲ್ಲಿಯ ಪಂಚಗ್ರಹ ಗುಡ್ಡದ ಸಿದ್ದೇಶ್ವರ ಜಾತ್ರಾಮಹೋತ್ಸವವು ಫೆ. 8 ರಿಂದ ಫೆ. 18 ರವರೆಗೆ ಜರುಗಲಿದೆ. ಎಲ್ಲ ಕಾರ್ಯಕ್ರಮಗಳ ಘನಅಧ್ಯಕ್ಷತೆಯನ್ನು ಪಂಚಗ್ರಹ ಗುಡ್ಡದ ಸಿದ್ದಲಿಂಗ ಶಿವಾಚಾರ್ಯರು ವಹಿಸಲಿದ್ದಾರೆ. ಫೆ. 8 ರಂದು ಸಂಜೆ 6.30 ಕ್ಕೆ ಯಡೆಯೂರ ಸಿದ್ದಲಿಂಗೇಶ್ವರ ಮಹಾತ್ಮೆ ಪುರಾಣ ಪ್ರವಚನ ಆರಂಭಗೊಳ್ಳಲಿದೆ.
ನವಲಗುಂದ ಸಿದ್ದೇಶ್ವರ ಶಿವಾಚಾರ್ಯರು. ಕೊಟ್ಟೂರೇಶ್ವರ ಸ್ವಾಮಿಗಳು, ಶಿವಕುಮಾರ ಸ್ವಾಮಿಗಳು, ಶಾಂತಲಿಂಗ ಸ್ವಾಮಿಗಳು ಮಾಜಿ ಸಚಿವ ಸಿ.ಸಿ. ಪಾಟೀಲ, ಅಜಪ್ಪಗೌಡ ಪಾಟೀಲ, ಸಿ.ಎಚ್‌. ಕೋರಿ, ಶಂಕ್ರಣ್ಣ ವಾಳದ, ಶರಣಪ್ಪ ನಂದಿ, ಪಂಚಪ್ಪ ಬೆಳವಟಗಿ, ನಾಗನಗೌಡ ಕೆಂಚನಗೌಡ್ರ, ಸಿದ್ದಣ್ಣ ಹಳಕಟ್ಟಿ, ಸುಕನ್ಯಾ ಸಾಲಿ. ಲೀಲಕ್ಕ ಹಸಬಿ ರಾಘವೇಂದ್ರ ಗುಜಮಾಗಡಿ ಅನೇಕರು ಉಪಸ್ಥಿತರಿರುವರು.
ಫೆ. 16 ರಂದು ಸಂಜೆ 6.30 ಕ್ಕೆ 50 ನೇ ಶಿವಾನುಭವ ಗೋಷ್ಟಿ, ಧರ್ಮಸಭೆ ಮತ್ತು ರಾಜ್ಯ ಮಟ್ಟದ ಹೊನಲು ಬೆಳಕಿನ ಭಜನಾ ಸ್ಪರ್ಧೆ ಜರುಗಲಿವೆ. ಬೂದಿಶ್ವರ ಸ್ವಾಮಿಗಳು, ಗುರುಪ್ರಸಾದ ಸ್ವಾಮಿಗಳು, ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ನವಲಗುಂದ ಶಾಸಕ ಎನ್‌.ಎಚ್‌. ಕೋನರಡ್ಡಿ, ವಿಜಯ ಕುಲಕರ್ಣಿ, ಗುರುಮತ್ತೂರ, ಬಿ.ಎಸ್‌. ಉಪ್ಪಾರ, ಶೈಲಾ ನರಗುಂದ, ಸಿ.ಎಸ್‌. ಸಾಲೂಟಗಿಮಠ, ಪ್ರಭುಗೌಡ ಪಾಟೀಲ ಶಿವಲೀಲಾ ಕೊಳ್ಳಿಯವರ, ಶೈಲಾ ನರಗುಂದ, ಜ್ಯೋತಿ ಪತ್ರಿ, ಮುತ್ತನಗೌಡ ಪಾಟೀಲ, ಮಂಜುನಾಥ ಬೆಳಗಾವಿ. ರವಿ ಹೊಂಗಲ ಇನ್ನಿತರರು ಉಪಸ್ಥಿತರಿರುವರು.
ಫೆ. 17 ರಂದು ಮಧ್ಯಾಹ್ನ 12.30 ಕ್ಕೆ ಸಾಮೂಹಿಕ ವಿವಾಹ ಮತ್ತು ಧರ್ಮಸಭೆ ಕಾರ್ಯಕ್ರಮದಲ್ಲಿ ಬೆಟ್ಟದಪುರದ ಚನ್ನಬಸವದೇಶಿಕೇಂದ್ರ ಸ್ವಾಮಿಗಳು, ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯರು, ಪುರಸಭೆ ಅದ್ಯಕ್ಷ ಪ್ರಕಾಶ ಪಟ್ಟಣಶೆಟ್ಟಿ, ಮಾಜಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಎನ್‌.ವ್ಹಿ. ಮೇಟಿ, ರೇಣುಕಾ ಕೋರಿ, ರೇಣುಕಾ ಅವರಾದಿ, ಎಂ.ಎಸ್‌. ಪಾಟೀಲ, ಶಾಂತಾ ದಂಡಿನ, ಶಿವಾನಂದ ಮುತವಾಡ, ವಾಸು ಜೋಗಣ್ಣವರ, ಗೋವಿಂದರಾಜ ಗುಡಿಸಾಗರ ಅನೇಕರು ಪಾಲ್ಗೊಳ್ಳುವರು.
ಫೆ. 18 ರಂದು ಲಿಂಗದೀಕ್ಷೆ ಹಾಗೂ ಅಯ್ಯಾಚಾರ ಕಾರ್ಯಕ್ರಮಗಳು ಜರುಗಲಿವೆ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು, ಎಸ್‌.ಆರ್‌. ಹಿರೇಮಠ, ಈಶ್ವರಯ್ಯ ಹಿರೇಮಠ, ಶಾಸಕ ಬಿ.ಅರ್‌. ಯವಗಲ್‌, ಬಾಬೂಸಾಬ ಜಮಾದಾರ, ರಮೇಶಗೌಡ ಕರಕನಗೌಡ್ರ, ವ್ಹಿ.ಎನ್‌. ಕೊಳ್ಳಿಯವರ. ಎಸ್‌.ಡಿ. ಕೊಳ್ಳಿಯವರ, ಚಂದ್ರಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ರಾಜುಗೌಡ ಕೆಂಚನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಆರ್‌.ಬಿ. ಚಿನಿವಾಲರ, ಚನ್ನು ನಂದಿ, ಕುಮಾರಗೌಡ ಗುರಪ್ಪಗೌಡ್ರ, ಪ್ರಶಾಂತ ಅಳಗವಾಡಿ, ಶೇಖರಯ್ಯ ಹಿರೇಮಠ, ಮೃತ್ಯುಂಜಯ ಕಾಡದೇವರಮಠ ಅನೇಕರು ಭಾಗವಹಿಸುವರು, ಸಿದ್ದೇಶ್ವರ ಮೂರ್ತಿ ಹಾಗೂ ಲಿಂ. ಚನ್ನವೀರ ಶಿವಾಚಾರ್ಯರ ಹಾಗೂ ಲಿ.ಂ. ಚನ್ನಮಲ್ಲ ಶಿವಾಚಾರ್ಯ ಗುರುದ್ವಯರ ಭಾವಚಿತ್ರ ಮತ್ತು ಸಿದ್ದಾಂತ ಶಿಖಾಮನಿ ವಚನಗ್ರಂಥಗಳ ಪಲ್ಲಕ್ಕಿ ಉತ್ಸವವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲ ನಡೆಸಲಾಗುವುದು. ಸಂಜೆ ಧರ್ಮಸಭೆ ಜರುಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಾನಪದ ಜಾತ್ರೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

loading...