ಇತಿಹಾಸ ಓದದೇ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ: ಸುರೇಶ ಅಂಗಡಿ

0
44
ಬೆಳಗಾವಿ: ಇಂಗೀಷ್ ಭಾಷೆಯಿಂದ ನಮ್ಮತನವನ್ನು ನಾವು ಮರೆಯುತ್ತಿದ್ದೆವೆ. ಇಲ್ಲಿಯವರೆಗೆ ಮಾತೃ ಭಾಷೆಯಲ್ಲಿ ಸಾಧನೆ ಮಾಡಿದವರ ಸಂಖ್ಯೆ ಹೆಚ್ಚಿದೆ ಹೊರತು. ಅನ್ಯ ಭಾಷೆಯಲ್ಲಿ ಸಾಧನೆ ಮಾಡಿರುವುದು ವಿರಳವೆಂದು ಸಂಸದ ಸುರೇಶ ಅಂಗಡಿ ಹೇಳಿದರು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸ ತಿಳಿಯದೆ ಇತಿಹಾಸ ನಿರ್ಮಿಸಿಲು ಸಾಧ್ಯವಿಲ್ಲ. ಸರ್ವಜ್ಞರು ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ಸಮಾಜದಲ್ಲಿ ನಾವೇಲ್ಲರೂ ಹೇಗೆ ನೆಮ್ಮದಿಯಿಂದ ಬಾಳಬೇಕು ಎಂದು ತಿಳಿಸಿಕೊಟ್ಟ ಮಹಾನ ಪುರುಷರು ಎಂದು ಹೇಳಿದರು.
ನರೇಂದ್ರ ಮೋದಿಯವರು ಸಹ ನೀವು ಮಾಡುವ ಮಣ್ಣಿನ ಗಡಿಗೆ, ತಮ್ಮ ಮೂಲ ಕಸುಬನ್ನು ಬೀಡದಿರಿ ಎಂದು ಮೇಕ್ ಇನ್ ಇಂಡಿಯಾ ಎಂದು ಹೇಳುತ್ತಿರುವುದು. ತಮ್ಮ ತಮ್ಮ ಮೂಲ ವೃತ್ತಿಯನ್ನು ಅವಲಂಭಿಸಿದರೆ ಯಾವುದೇ ಒಬ್ಬ ಯುವಕರು ಸಹ ಹುದ್ದೆಗಾಗಿ ಬೆರೋಬ್ಬರ ಹತ್ತಿರ ಕೆಲಸ ಕೊಡಿ ಎಂದು ಬೇಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಎಂದರು.
ಕರ್ನಾಟಕ ಪ್ರದೇಶ ಕುಂಬಾರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಜಿ. ಕುಂಬಾರ, ದಲಿತ ಮುಖಂಡರಾದ ಮಲ್ಲೇಶ ಚೌಗಲೆ, ಈರಪ್ಪ ಕುಂಬಾರ, ಶ್ರಿಮತಿ ಮೇಘಾ ಕುಂಬಾರ, ಶಿವಾನಂದ ಕುಂಬಾರ ಸೇರಿದಂತೆ ಇನ್ನಿತರ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶಂಕರಿ ಅವರು ಸ್ವಾಗತಿಸಿದರು. ನೆಹರು ಯುವ ಕೇಂದ್ರದ ನಿವೃತ್ತ ಅಧಿಕಾರಿಗಳಾದ ಎಸ್.ಯು. ಜಮಾದಾರ ಅವರು ನಿರೂಪಿಸಿದರು. ಹಿರಿಯ ಕಲಾವಿದರಾದ ರುದ್ರಮ್ಮ ಯಾಳಗಿ ಅವರು ಸರ್ವಜ್ಞರ ವಚನ ಗಾಯನ ಪ್ರಸ್ತುತ ಪಡಿಸಿದರು.
ಈ ಮೊದಲು  ಸ್ಥಳೀಯ ಅಶೋಕ ವೃತ್ತದಲ್ಲಿ ಕಿಲ್ಲಾ ಕೋಟೆಯಿಂದ ಸಂಸದ ಸುರೇಶ ಅಂಗಡಿ ಹಾಗೂ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಸರ್ವಜ್ಞರವರÀ ಭಾವಚತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.
ಅಶೋಕ ವೃತ್ತದಿಂದ ಆರಂಭವಾದ ಸರ್ವಜ್ಞನವರ ಭಾವಚಿತ್ರದ ಭವ್ಯ ಮೆರವಣಿಗೆಯು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ರಾಣಿ ಚನ್ನಮ್ಮ ವೃತ್ತದ ಮೂಲಕ ಕುಮಾರ ಗಂಧರ್ವ ರಂಗಮಂದಿರ ತಲುಪಿತು.
ಪೊಲೀಸ್ ಆಯುಕ್ತರಾದ ಡಾ. ಡಿ.ಸಿ. ರಾಜಪ್ಪ  ಸೇರಿದಂತೆ ಇತರರು ಉಪಸ್ಥಿತರಿದ್ದರು.
loading...