ಎಬಿವಿಪಿಯಿಂದ 18ಕ್ಕೆ ಯುವ ಮಂಥನ ಕಾರ್ಯಕ್ರಮ

0
31
loading...

ಎಬಿವಿಪಿಯಿಂದ 18ಕ್ಕೆ ಯುವ ಮಂಥನ ಕಾರ್ಯಕ್ರಮ

ಕನ್ನಡಮ್ಮ ಸುದ್ದಿ
ಬೆಳಗಾವಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ 16 ರಂದು ಯುವ ಮಂಥನ ಕಾರ್ಯಕ್ರಮವನ್ನು ಎಸ್‍ಜಿಬಿಐಟಿ ಇಂಜಿನೀಯರಿಂಗ್ ಕಾಲೇಜ್‍ನಲ್ಲಿ ಆಯೋಜಿಸಲಾಗಿದೆ ಎಂದು ಮಹಾನಗರ ಕಾರ್ಯದರ್ಶಿ ರೋಹಿತ ಉಮನಾದಿಮಠ ತಿಳಿಸಿದ್ದಾರೆ.
ಅವರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಳೆದ 69 ವರ್ಷಗಳಿಂದ ಎಬಿವಿಪಿ ಶೈಕ್ಷಣಿಕ, ಸಾಮಾಜಿಕ, ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ವಿಚಾರದಾರೆ, ರಾಷ್ಟ್ರ ಭಕ್ತಿ, ಅರಿವು ಮೂಡಿಸುತ್ತಾ ಬರುತ್ತಿದೆ.
ಅದೇ ರೀತಿ ಬೆಳಗಾವಿ ವಿಭಾಗದಿಂದ ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗಾಗಿ ಯುವ ಮಂಥನ ಕಾರ್ಯಕ್ರಮವನ್ನು 18ರಂದು ನಡೆಸಲಾಗುವುದು ಎಂದು ಹೇಳಿದರು.
ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಭಾರತೀಯ ಶಿಕ್ಷಣ ಪರಂಪರೆ, ಭಾರತ ಇತಿಹಾಸ ಶೌರ್ಯ ಪರಂಪರೆ, ಹಾಗೂ ಸಮಾರೋಪ ಸಮಾರಂಭದಲ್ಲಿ ಪ್ರಬುದ್ಧ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಎಂಬ ವಿಷಯಗಳ ಮೇಲೆ ಗೋಷ್ಠಗಳನ್ನು ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ 250 ರಿಂದ 300 ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಪ್ರತಿ ವಿದ್ಯಾರ್ಥಿಗಳಿಗೆ ನೊಂದಣಿ ಶುಲ್ಕವನ್ನು ಇಡಲಾಗಿದೆ.
ತಂತ್ರಜ್ಞಾನ ಬೆಳೆದಂತೆ ಭಾರತೀಯ ಇತಿಹಾಸ ಮರೆಯಾಗುತ್ತಿದೆ. ಅವುಗಳ ಮರು ನೆನಪಿಸಿಕೊಡುವ ಉದ್ದೇಶದಿಂದ ಯುವ ಮಂಥನ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿಚಾರ ಸಂಕೀರಣ ಬೆಳಿಗ್ಗೆ 10ಕ್ಕೆ ರುದ್ರಾಕ್ಷಿಮಠದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಉದ್ಘಾಟಕಾಗಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಹಾಗೂ ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತರಾದ ಲಕ್ಷ್ಮಣ, ವಿಜಯಪುರ ಅಕ್ಕಮಹಾದೇವಿ ವಿವಿಯ ಕುಲಪತಿ ಡಾ.ವೀನಾ ಚಂದಾವರಕರ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಎಬಿವಿಪಿಯ ಜಿಲ್ಲಾ ಪ್ರಮುಖರು ಸಂದೀಪ ನಾಯರ, ಶಿವಾನಂದ ಸೈದಾಪುರ ಗೋಷ್ಠಿಯಲ್ಲಿ ಹಾಜರಿದ್ದರು.

loading...