ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿಸಿ ಕ್ಯಾಮರಾ ಕಡ್ಡಾಯ

0
11
loading...

ಕ್ಯಾಮರಾ ಅಳವಡಿಕೆಗೆ ಸಂಚಿತ ನಿಧಿ ಬಳಕೆ | ಅಧಿಕಾರಿಗಳಿಗೆ ಇಲಾಖೆಯಿಂದ ಸುತ್ತೋಲೆ
| ಲಗಮಣ್ಣಾ ಸಣ್ಣಲಚ್ಚಪ್ಪಗೋಳ
ಬೆಳಗಾವಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಒಂದು ತಿಂಗಳ ಬಾಕಿಯಿರುವ ಹಿನ್ನಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಕೆಗೆ ಮುಂದಾಗಿದೆ. ಪರೀಕ್ಷೆ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ಕಾರ್ಯ ಪೂಣಗೊಳ್ಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಡಿಡಿಪಿಐಗಳಿಗೆ ಸುತ್ತೋಲೆ ಹೊರಡಿಸಿದೆ.
ಮಾರ್ಚ್ 23 ರಿಂದ ಎಪ್ರಿಲ್ 4ರ ವರೆಗೆ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಿಗೆ ಪೂರ್ಣ ಪ್ರಮಾಣ ಸಿಸಿ ಕ್ಯಾಮರಾ ಅಳವಡಿಕೆ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಎಲ್ಲ ಪರೀಕ್ಷಾ ಕೇಂದ್ರದ ಎಂಟು ಕಡೆಗಳಲ್ಲಿ ಪೋಕಸ್ ಆಗುವಂತೆ ಕ್ಯಾಮರಾ ಅಳವಡಿಸುವಂತೆ ಸೂಚಿಸಿದ್ದಾರೆ.
ಸಿಸಿ ಕ್ಯಾಮರಾ ಅಳವಡಿಕೆಗೆ ಬೇಕಾಗುವ ವೆಚ್ಚವನ್ನು ಶಾಲೆಯ ಸಂಚಿತ ನಿಧಿಯಿಂದ 40 ಸಾವಿರ ಖರ್ಚು ಮಾಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಸಿಸಿ ಕ್ಯಾಮರಾ ಅಳವಡಿಕೆಯನ್ನು ಒಂದೆರಡು ವಾರದಲ್ಲಿ ಪೂರ್ಣಗೊಳ್ಳಿಸುವಂತೆ ಕಟ್ಟನಿಟ್ಟಾಗಿ ಇಲಾಖೆ ತಿಳಿಸಿದೆ. ಕೆಲವೊಂದು ಶಾಲೆಯಲ್ಲಿ ಸಂಚಿತ ನಿಧಿ ಇಲ್ಲದೆ ಹೊದರೆ ಬೇರೆ ಶಾಲೆಯಲ್ಲಿದ ಸಂಚಿತ ನಿಧಿಯನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದೆ.
ಸಿಸಿ ಕ್ಯಾಮೇರಾ ಕಡ್ಡಾಯ: ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಯಾವುದೇ ನಕಲು ನಡೆಯದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರ ವಹಿಸಿದೆ. ಪರೀಕ್ಷಾ ಪ್ರತಿಯೊಂದು ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಕೆ ಮಾಡುವಂತೆ ತಿಳಿಸಿದೆ. ಪರೀಕ್ಷೆ ನಡೆಯುವ ಕೊಠಡಿಯನ್ನು ಸಂಪೂರ್ಣ ಸೆರೆ ಹಿಡಿಯುವಂತೆ ಕ್ಯಾಮರಾ ಅಳವಡಿಸಲು ನಿರ್ದೇಶನ ನೀಡಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಯಾವುದೇ ರೀತಿ ನಕಲು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಎಚ್ಚರ ವಹಿಸಿದೆ. ಪರೀಕ್ಷೆಯ ಎಲ್ಲ ಮಾಹಿತಿ ಸಿಸಿ ಕ್ಯಾಮರಾ ಕಣ್ಗಾವಲಲ್ಲಿ ಸೆರೆಯಾಗುತ್ತದೆ. ತಪ್ಪು ಕಂಡು ಬಂದಲ್ಲಿ ಸೂಕ್ತ ಕ್ರಮಕ್ಕೆ ಕ್ಯಾಮರಾಗಳೆ ಸಾಕ್ಷಿಯಾಗಲಿವೆ.

ಬಾಕ್ಸ್==========
ಈ ಬಾರಿ ರಾಜ್ಯದ 2270 ಪರೀಕ್ಷೆ ಕೇಂದ್ರಗಳಲ್ಲಿ 6.90 ಲಕ್ಷ ಮಕ್ಕಳು ಎಸ್ಸೆಸ್ಸೆಲ್ಸಿಯಲ್ಲಿ ಹಾಜರಾಗಲಿದ್ದಾರೆ. ಕಡ್ಡಾಯವಾಗಿ ಎಲ್ಲ ಕೇಂದ್ರಗಳಲ್ಲಿ ಸಿಸಿ ಕ್ಯಾಮೇರಾ ಕಣ್ಗಾವಲಲ್ಲಿ ಪರೀಕ್ಷೆಗಳನ್ನು ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಆಯಾ ಅಧಿಕಾರಿಗಳಿಗೆ ಸೂಚಿಸಿದೆ.
=============
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿರುವ 104 ಕೇಂದ್ರಗಳ ಪೈಕಿ 68ರಲ್ಲಿ ಸಂಪೂರ್ಣವಾಗಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಉಳಿದ 36 ಕೇಂದ್ರಗಳಲ್ಲಿ ಕಾರ್ಯ ಮುಂದುವರದಿದೆ. ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸುವಂತೆ ಇಲಾಖೆ ಸೂಚಿಸಿರುವ ಹಿನ್ನಲೆ ಒಂದೆರಡು ದಿನದಲ್ಲಿ ಎಲ್ಲ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ಪೂರ್ಣವಾಗುತ್ತದೆ.
| ಎ.ಬಿ ಪುಂಡಲೀಕ, ಡಿಡಿಪಿಐ ಬೆಳಗಾವಿ

==========
ಸಿಸಿ ಕ್ಯಾಮರಾ ಅಳವಡಿಸುವಂತೆ ಇಲಾಖೆ ಕಟ್ಟುನಿಟ್ಟಾಗಿ ಆದೇಶಿಸಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 124 ಕೇಂದ್ರಗಳ ಪೈಕಿ 103ರಲ್ಲಿ ಸಂಪೂರ್ಣವಾಗಿ ಕ್ಯಾಮರಾ ಅಳವಡಿಸಲಾಗಿದೆ. ಉಳಿದ 21 ಕೇಂದ್ರಗಳಲ್ಲಿ ಕ್ಯಾಮರಾ ಅಳವಡಿಕೆ ಕಾರ್ಯ ನಡದಿದೆ. ಕೆಲವೆ ದಿನಗಳಲ್ಲಿ ಎಲ್ಲ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಇಲಾಖೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ತಿಳಿಸಿದೆ. ಅದರಂತೆ ಪರಿಶೀಲನೆ ಮಾಡುತ್ತಿದ್ದೇವೆ.
| ಆರ್.ವಿ ನಾಯಕ, ಡಿಡಿಪಿಐ ಚಿಕ್ಕೋಡಿ

loading...