ಒಂಬತ್ತು ಅಂತರ್ರಾಷ್ಟ್ರೀಯ ಪ್ರಶಸ್ತಿಗಳು ‘ಅಘನಾಶಿನಿ’ ಮಡಿಲಿಗೆ

0
18
loading...

ಕನ್ನಡಮ್ಮ ಸುದ್ದಿ-ಶಿರಸಿ: ಉತ್ತರ ಕನ್ನಡದ ಅಘನಾಶಿನಿ ನದಿ ಕುರಿತು ಅಶ್ವಿನಿ ಕುಮಾರ ಭಟ್‌ ನಿರ್ದೇಶನದಲ್ಲಿ ರೂಪುಗೊಂಡಿರುವ ‘ಅಘನಾಶಿನಿ’ ಸಾಕ್ಷ್ಯಚಿತ್ರ ಅಮೇರಿಕಾದ ಕೊಲೊರಾಡೋ ಪರಿಸರ ಚಲನಚಿತ್ರೋತ್ಸವ, ಕ್ಯಾಲಿಫೋರ್ನಿಯಾ ಬೊರ್ರೆಗೊ ಸ್ಪ್ರಿಂಗ್ಸ್‌ ಫಿಲ್ಮ್‌ ಫೆಸ್ಟಿವಲ್‌ ಹಾಗೂ ಇಂಪ್ಯಾಕ್ಟ್‌ ಡಾಕ್‌ ಅವಾರ್ಡ್‌ನ ಎಕ್ಸಲೆನ್ಸ್‌ ಪ್ರಶಸ್ತಿ ಸೇರಿದಂತೆ ಈವರೆಗೆ ಒಂಬತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿದೆ.
ಎರಡೂವರೆ ವರ್ಷಗಳ ಅವಧಿಯಲ್ಲಿ ಸಿದ್ಧಗೊಂಡಿರುವ 40 ನಿಮಿಷಗಳ ಈ ಸಾಕ್ಷ÷್ಯಚಿತ್ರ ಅಘನಾಶಿನಿ ನದಿಯ ಕುರಿತಾಗಿದ್ದು, ಈ ನದಿಯು ಪಶ್ಚಿಮಘಟ್ಟದ ನದಿಗಳಲ್ಲೇ ಬಹು ವಿಶೇಷವಾಗಿದೆ.
ಸಾಕ್ಷ÷್ಯಚಿತ್ರವು ಇಂಗ್ಲೀಷ್‌ ಮತ್ತು ಕನ್ನಡ ಅವತರಣಿಕೆ ಹೊಂದಿದ್ದು ಈ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲದೇ ರಾಜ್ಯಾದ್ಯಂತ ಸುಮಾರು ಮೂವತ್ತಕ್ಕೂ ಹೆಚ್ಚು ಬಾರಿ ವಿವಿಧ ಕಡೆಗಳಲ್ಲಿ ಪ್ರದರ್ಶನಗೊಂಡಿದೆ. ಭಾರತದ ಭೂದೃಶ್ಯಗಳ ಅನನ್ಯ ಛಾಯಾಗ್ರಹಣದಲ್ಲಿ ತೊಡಗಿಕೊಂಡಿರುವ ಲ್ಯಾಂಡ್ಸೆ÷್ಕೕಪ್‌ ವಿಝಾಡ್ಸ್‌ರ್ ಎಂಬ ಛಾಯಾ ಸಂಸ್ಥೆಯಿಂದ ಹೊರಬಂದಿರುವ ‘ಅಘನಾಶಿನಿ’ಯು ಕ್ರೌಡ್‌ ಫಂಡಿಂಗ್‌ ಮತ್ತು ರೋಹಿಣಿ ನಿಲೇಕಣಿ ಫಿಲಾನಥ್ರೋಪಿಸ್‌ ಸಹಭಾಗಿತ್ವದಲ್ಲಿ ನಿರ್ಮಾಣ ಗೊಂಡಿದೆ. ಸುನಿಲ್‌ ಹೆಗಡೆ, ಶ್ರೀಹರ್ಷ ಗಂಜಾಂ ಮತ್ತಿತರು ಛಾಯಾ ತಂಡದಲ್ಲಿದ್ದಾರೆ.
ನದಿ ಕಣಿವೆಯ ದೇವರ ಕಾಡು, ರಾಮಪತ್ರೆ ಜಡ್ಡಿ, ಸಿಂಗಳೀಕ ಪ್ರಪಂಚ, ಹೊಳೆಯುವ ಶಿಲೀಂಧ್ರ, ಲವಣಯುಕ್ತ ನೀರಿನಲ್ಲಿ ಬೆಳೆಯಬಲ್ಲ ಕಗ್ಗ ಭತ್ತ, ಅಳಿವೆಯ ಬಳಚಿನ ಶ್ರೀಮಂತಿಕೆ, ಜಗತ್ತಿನಲ್ಲಿ ಕೆಲವೇ ಸ್ಥಳಗಳಲ್ಲಿ ಸಂಭವಿಸುವ ಚಂದ್ರಧನುಷ್‌ ಇತ್ಯಾದಿ ವಿಸ್ಮಯಗಳನ್ನು ಸಾಕ್ಷ÷್ಯಚಿತ್ರ ನವಿರಾಗಿ ಕಟ್ಟಿಕೊಡುತ್ತದೆ.

loading...