ಕಡಲೆ ಕೇಂದ್ರ ತೆರೆಯಲು ಆಗ್ರಹ

0
22
loading...

ಶಿರಹಟ್ಟಿ: ಶಿರಹಟ್ಟಿ ತಾಲೂಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿರಹಟ್ಟಿ ತಾಲೂಕ ಕೇಂದ್ರದಲ್ಲಿ ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಹಶೀಲದಾರರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರತಿ ತಾಲೂಕಿನಲ್ಲಿ ಬೆಂಬಲ ಬೆಲೆಯಲ್ಲಿ ಕಡಲೆ ಬೀಜ ಖರೀದಿ ಕೇಂದ್ರ ತೆರೆಯಲು ಆದೇಶಿಸಿದ್ದು ಶಿರಹಟ್ಟಿಯಲ್ಲಿ ಇದೂವರೆಗೂ ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ತೆರೆದಿಲ್ಲ. ತಾಲೂಕಿನ ರೈತರಿಗೆ ತುಂಬಾ ತೊಂದರೆಯಾಗಿದ್ದು ಶೀಘ್ರದಲ್ಲಿ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರವನ್ನು ತೆರಯಬೇಕೆಂದು ಆಗ್ರಹಿಸಿದರು.
ಶಿರಹಟ್ಟಿ ತಾಲೂಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರವಿ ಹಳ್ಳಿ, ಫಕ್ಕಿರೇಶ ಕರಿಗಾರ, ನಜೀರ ಡಂಬಳ, ಮುತ್ತುರಾಜ ಭಾವಿಮನಿ, ದೇವಪ್ಪ ಕಟ್ಟಿಮನಿ, ಈರಪ್ಪ ಬಡಗೇರ, ಶಿವಜೋಗಿ ತುಳಿ, ಶಿವು ತಳವಾರ, ಮುದಕಣ್ಣ ಹೂಗಾರ, ಫಕ್ಕಿರೇಶ ವಾಲಿಕಾರ ಮನವಿ ಅರ್ಪಣೆಯ ಸಂದರ್ಭದಲ್ಲಿದ್ದರು.

loading...