ಕಡಲೆ ಖರೀದಿ ಕೇಂದ್ರ ಆರಂಭ

0
11
loading...

ನರಗುಂದ: ಕೇಂದ್ರ ಸರ್ಕಾರ ಕಡಲೆ ಉತ್ಪನ್ನ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಆದೇಶ ನೀಡಿದ ಅನ್ವಯ ಕಡಲೆ ಕೇಂದ್ರವನ್ನು ನರಗುಂದ ಎಪಿಎಂಸಿ ಆವರಣದಲ್ಲಿ ಬುಧವಾರ ತೆರೆಯಲಾಗಿದೆ. ರೈತರು ತಮ್ಮ ಕಡಲೆ ಉತ್ಪನ್‌ವನ್ನು ಮಾರಾಟಗೊಳಿಸಲು 30 ದಿನದೊಳಗಾಗಿ ಖರೀಧಿ ಕೇಂದ್ರದಲ್ಲಿ ತಮ್ಮ ಅಗತ್ಯದ ದಾಖಲೆಗಳನ್ನು ನೀಡಿ ನೊಂದಾಯಿಸಿಕೊಳ್ಳಬೇಕೆಂದು ಶಾಸಕ ಬಿ.ಆರ್‌. ಯಾವಗಲ್‌ ತಿಳಿಸಿದರು.
ನರಗುಂದ ಎಪಿಎಂಸಿ ಆವರಣದಲ್ಲಿ ಜ. 31 ರಂದು ಕಡಲೆ ಬೆಂಬಲ ಬೆಲೆ ಖರೀಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ. 25 ರಂದು ಕಡಲೆ ಉತ್ಪನ್‌ ಖರೀಧಿಸಲು ಆದೇಶ ಬಂದಿದ್ದು ರೈತರು ಉತ್ಪನ್‌ ಮಾರಾಟಗೊಳಿಸುವ ಪೂರ್ವ ನೊಂದಾಯಿಸಿಕೊಳ್ಳುವುದು ಬಹಳ ಮಹತ್ವವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯ ಧನದ ಮೂಲಕ ಖರೀಧಿ ನಡೆಸಲಾಗುವುದು. ಒಂದು ಖಾತೆಗೆ 10 ಕ್ವಿಂಟಾಲ ಕಡಲೆ ಖರೀಧಿಸಬೇಕೆಂಬ ನಿಮಯಾವಳಿ ಇದ್ದು ಆದರೆ ಕಡಲೆ ಬೆಳೆಯನ್ನು ಈ ಭಾರಿ 25,950 ಹೆಕ್ಟರ್‌ ಪ್ರದೇಶದಲ್ಲಿ 3,24,374 ಕ್ವಿಂಟಾಲ್‌ನಷ್ಟು ಕಡಲೆ ಬೆಳೆ ಬೆಳೆದಿರುವುದರಿಂದ ಹೆಚ್ಚಿನ ಕಡಲೆ ಉತ್ಪನ್‌ ಖರೀಧಿಮಾಡಿ ರೈತರಿಗೆ ಅನುಕೂಲ ಮಾಡಿಕೊಡಲು ಸ್ಥಳೀಯ ಎಪಿಎಂಸಿಯಿಂದ ಹಾಗೂ ಸಂಬಂಧಿಸಿದ ಮಾರುಕಟ್ಟೆ ಸಚಿವರ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುವ ಕುರಿತು ಚರ್ಚೆಮಾಡುವುದಾಗಿ ಅವರು ತಿಳಿಸಿದರು.
ಎಪಿಎಂಸಿ ಕಾರ್ಯದರ್ಶಿ ವ್ಹಿ.ಡಿ. ಪಾಟೀಲ ಮಾತನಾಡಿ, ಮಾರ್ಕೇಟಿಂಗ್‌ ಫೆಡರೇಷನ್‌ದವರು ಖರೀಧಿ ಏಜೆನ್ಸಿ ಪಡೆದುಕೊಂಡಿದ್ದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಖರೀಧಿ ನಡೆಯಲಿದೆ. ಒಟ್ಟು 45 ದಿನಗಳವರೆಗೆ ಖರೀಧಿ ಮಾಡುವ ನಿಯಮಾವಳಿ ಪ್ರಕಾರ ರೈತರ ಕಡಲೆ ಉತ್ಪನ್‌ ಖರೀಧಿಸಲಾಗುವುದು. ಪ್ರತಿ ಕ್ವಿಂಟಾಲ್‌ಗೆ 4400 ರೂ ದರದಲ್ಲಿ ಖರೀಧಿಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಎನ್‌.ವ್ಹಿ. ಮೇಟಿ, ಉಪಾಧ್ಯಕ್ಷ ಸಣ್ಣಗದಿಗೆಪ್ಪ ತಳವಾರ, ಎಪಿಎಂಸಿ ನಿರ್ಧೆಶಕ ಮಂಡಳಿ ಸದಸ್ಯರಾದ ಶಂಕರಗೌಡ ಯಲ್ಲಪ್ಪಗೌಡ್ರ, ಆರ್‌.ಜಿ. ಅಡೂರ, ಸಿದ್ದನಗೌಡ ಪಾಟೀಲ, ಮಲ್ಲಪ್ಪ ಭೋವಿ, ಜಿ.ಎಂ. ಹುಡೇದಮನಿ, ರಾಜು ಕಲಾಲ, ಜಿಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ, ತಾಪಂ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಎಸ್‌.ಬಿ. ದಂಡಿನ, ಎಸ್‌.ಎಂ. ಗುಳೇದ ಉಪಸ್ಥಿತರಿದ್ದರು.

loading...