ಕಡಲೇ ಖರೀದಿ ಕೇಂದ್ರಕ್ಕೆ ಅಶೋಕ ಪಟ್ಟಣ ಚಾಲನೆ

0
25
loading...

ರಾಮದುರ್ಗ: ಸರ್ಕಾರ ಪ್ರತಿಯೊಂದು ಕ್ಷಣದಲ್ಲಿ ರೈತರಿಗೆ ಬೆಂಬಲ ಬೆಲೆ ನೀಡುತ್ತಾ ಸಹಾಯ ಸಹಕಾರ ಮಾಡುತ್ತಾ ಬಂದಿದ್ದು ಈಗ ಕಡಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಇದರಿಂದ ರೈತರಿಗೆ ಅನೂಕುಲವಾಗಲಿದೆ ಎಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಮ. ಪಟ್ಟಣ ಹೇಳಿದರು.
ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ ಬೀಜ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕಡಲೆ ಬೆಳೆದ ರೈತ ಬಾಂಧವರು ಇದರ ಸದ್ಭಳಕೆ ಮಾಡಿಕೊಳ್ಳಬೇಕೆಂದು ಹೇಳಿದರು ಸಮಿತಿಯ ಕಾರ್ಯದರ್ಶಿಗಳಾದ ಜಿ.ಬಿ.ಕಬ್ಬೇರಳ್ಳಿ ಮಾತನಾಡಿ ಫೆ.23 ರೊಳಗಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಹಾಗೂ ಸದರಿ ಕೇಂದ್ರದಲ್ಲಿ ಎಫ್‌.ಎ.ಕ್ಯೂ.ಗುಣಮಟ್ಟದ ಕಡಲೆಯನ್ನು ಪ್ರತಿ ಕ್ವಿಂಟಾಲ್‌ಗೆ ರೂ.4400 ದರದಂತೆ ಪ್ರತಿ ರೈತರಿಂದ ಗರಿಷ್ಠ ಪ್ರಮಾಣ 10 ಕ್ವಿಂಟಾಲ್‌ ಮಾತ್ರ ಖರೀದಿಸಲಾಗುವುದು. ರೈತರಿಗೆ ಹಣವನ್ನು ಆರ್‌.ಟಿ.ಜಿ.ಎಸ್‌.ಮೂಲಕ ನೇರವಾಗಿ ತಮ್ಮ ಬ್ಯಾಂಕ ಖಾತೆಗೆ ಜಮಾ ಮಾಡಲಾಗುವದು. ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀ ಬಿ.ಎಂ.ಪಾಟೀಲ, ಅಧ್ಯಕ್ಷರು, ಎಪಿಎಂಸಿ, ರಾಮದುರ್ಗ ಇವರು ಮಾತನಾಡಿ, ರೈತರು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತಮ್ಮ ಕೃಷಿ ಉತ್ಪನ್ನವನ್ನು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬೇಕೆಂದು ತಿಳಿಸಿದರು. ಜಿಲ್ಲಾ ಪಂಚಾಯತ ಸದಸ್ಯರಾದ ಜಾವೂರ ಹಾಜಿ, ಸಾವಕ್ಕ ದ್ಯಾವಪ್ಪ ಬೆಳವಡಿ, ಪುರಸಭೆ ಅಧ್ಯಕ್ಷರು, ರಾಜು ಮಾನೆ, ತಹಶೀಲ್ದಾರ ಆರ್‌.ವಿ. ಕಟ್ಟಿ, ಭೀಮಪ್ಪ ಬಂಕಾಪೂರ, ಪಿ.ಕೆ.ಪಿ.ಎಸ್‌.ಅಧ್ಯಕ್ಷರು, ಹುಲಕುಂದ ಹಾಗೂ ಸಮಿತಿಯ ಸದಸ್ಯರು ವರ್ತಕರು, ರೈತ ಬಾಂಧವರು ಉಪಸ್ಥಿತರಿದ್ದರು. ಎಸ್‌.ಜಿ.ಮಠ ಸ್ವಾಗತಿಸಿದರು ನಿರೂಪಿಸಿ ವಂದಿಸಿದರು.

loading...