ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡುವುದು ಪ್ರತಿಯೊಬ್ಬ ಕರ್ತವ್ಯ: ಪಾಟೀಲ್‌

0
22
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ವಾದಿ ರಾಜ ಗುರುಗಳು ಓರ್ವ ಮಹಾನ ದೇವಮಾನವರಾದ್ದರು. ಅವರ ಆಚಾರ ವಿಚಾರಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಿದೆ ಎಂದು ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಟಿ.ಪಾಟೀಲ್‌ ಹೇಳಿದರು.
ಅವರು ಬಾನುವಾರ ಪಟ್ಟಣದ ವಿವೇಕಾನಂದ ಬಯಲು ರಂಗ ಮಂದಿರದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದೈವಜ್ಞ ಕೋ-ಆಪ್‌ ಸೊಸೈಟಿ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ‘ವಾದಿರಾಜ ನಮನ’ ಹಾಗೂ ‘ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ಹಲವಾರು ಸಮಾಜದ ಗುರುಗಳ ದಿನಾಚರಣೆಯನ್ನು ಸರ್ಕಾರ ಆಚರಿಸುತ್ತಿದೆ. ಇದರ ನಡುವೆ ಕಸಾಪ ಸ್ವ ಇಚ್ಚೆಯಿಂದ ವಾದಿರಾಜರಂತ ಮಹನೀಯರ ನಮನ ಮಾಡಿ ನಮ್ಮ ಜೀವನವನ್ನು ಪಾವನ ಮಾಡಿಕೊಳ್ಳುವ ಸದವಕಾಶ ಈ ಸಂದರ್ಭದಲ್ಲಿ ನಮಗೆ ಮಾಡಿ ಕೊಟ್ಟಿದೆ ಎಂದ ಅವರು, ಕನ್ನಡದ ಉಳಿವಿಗಾಗಿ ಕನ್ನಡಪರ ಸಂಘಟನೆಗಳು ಸಾಕಷ್ಟು ಹೋರಾಟ ಮಾಡುತ್ತಿವೆಯಾದರೂ ಇವೆಲ್ಲದರ ನಡುವೆ ಕನ್ನಡದೊಂದಿಗೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವಲ್ಲಿ ಕೂಡ ಕನ್ನಡ ಸಾಹಿತ್ಯ ಪರಿಷತ್ತು ಪ್ರಮುಖ ಪಾತ್ರವಹಿಸುತ್ತಿದೆ.
ರಾಷ್ಟೀಯ ಸ್ಥಾನ ಮಾನ ಪಡೆದ ಕನ್ನಡ ಭಾಷೆಯ ಬೆಳವಣಿಗೆಗಾಗಿ ಸಲಹೆ ಸೂಚನೆಗಳೇನಾದರೂ ಇದ್ದಲ್ಲಿ ನಮಗೆ ನೀಡಿರಿ ಎಂದು ಎಲ್‌.ಟಿ.ಪಾಟೀಲ ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು. ಕ.ಸಾ.ಪ. ಅಧ್ಯಕ್ಷ ನಾಗೇಶ ಪಾಲನಕರ ಅಧ್ಯಕ್ಷತೆ ವಹಿಸಿ ಮಾತನಾಡಿ 15 ಶತಮಾನಗಳ ಹಿಂದೆ ಜನಿಸಿದ ವಾದಿರಾಜರು ಶೇಷ್ಠರು.
ನಿವೃತ್ತ ಶಿಕ್ಷಕ ಎಸ್‌.ಬಿ.ಹೂಗಾರ ಮಾತನಾಡಿದರು. ಸಾಹಿತಿ ಚಿದಾನಂದ ಪಾಟೀಲ ಹಾಗೂ ರಾಮಾಚಾರಿ ಜೋಷಿ ಉಪನ್ಯಾಸ ನೀಡಿದರು. ನಂತರ ಕವಿಗೋಷ್ಠಿ ನಡೆಯಿತು. ದೈವಜ್ಞ ಕೋ-ಆಪ್‌ ಸೊಸೈಟಿಯ ಅಧ್ಯಕ್ಷ ಮಂಜುನಾಥ ವೆರ್ಣೇಕರ, ಮಾರಿಕಾಂಬಾ ದೇವಸ್ಥಾನ ಟ್ರಸ್ಟನ ಅಧ್ಯಕ್ಷ ರಮೇಶ ಕಾಮತ, ರಾಮಣ್ಣ ಪಾಲೇಕರ, ರಾಮಾಚಾರಿ ಜೋಶಿ, ಪ್ರಶಾಂತ ಬಾಡಕರ ಇದ್ದರು. ಚಂದ್ರಕಲಾ ಲಮಾಣಿ ಪ್ರಾರ್ಥಿಸಿದರು. ವಿನಯ ಪಾಲನಕರ ಸ್ವಾಗತಿಸಿ ನಿರೂಪಿಸಿದರು. ಮೆರವಣಿಗೆ: ಇದಕ್ಕೂ ಮುನ್ನ ವಾದಿರಾಜರ ಭಾವಚಿತ್ರದೊಂದಿಗೆ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಮೆರವಣಿಗೆ ಮಾರಿಕಾಂಬಾ ದೇವಸ್ಥಾನದಿಂದ ಕುಂಭಮೇಳ ಮತ್ತು ಡೊಳ್ಳು ಕುಣಿತದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಭಾ ಕಾರ್ಯಕ್ರಮದ ವೇದಿಕೆ ತಲುಪಿತು.

loading...