ಕರ್ನಾಟಕ ಬದಲಾವಣೆಗೆ ಸಿದ್ದವಾಗಿದೆ: ಚಕ್ರವರ್ತಿ

0
24
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಭಾರತ ದೇಶ ಹೊಸದೊಂದು ದಿಕ್ಕಿನಲ್ಲಿ ನಡೆಯುತ್ತಿದೆ, ಹಾಗೇ ಕರ್ನಾಟಕ ಬದಲಾವಣೆಗೆ ಸಿದ್ದವಾಗಿದೆ. ಭಾರತದ ಪ್ರಧಾನ ಮಂತ್ರಿಯವರು ಭಾರತವನ್ನು ಸ್ವಚ್ಛ ಭಾರತ ಮಾಡುತ್ತೇನೆಂದು ಹೇಳಿ, ಎಸಿ ಕಾರಿನಲ್ಲಿ ಓಡಾಡುವ ರಾಜಕಾರಣಿಗಳನ್ನು ಪೊರಕೆ ಹಿಡಿಯುವ ಹಾಗೇ ಮಾಡಿದರು ಎಂದು ನನ್ನ ಕನಸಿನ ಕರ್ನಾಟಕ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಮ್ಮ ದೇಶದಲ್ಲಿ ರಾಜಕಾರಣ ಎಂದರೆ ಕುಟುಂಬ ರಾಜಕಾರಣವೇ ಹೆಚ್ಚಾಗಿದೆ, ಅದು ಹೋಗಲಾಡಬೇಕು, ಮುಂದುವರಿದ ರಾಷ್ಟ್ರಗಳಲ್ಲಿ ಪೋಲಿಸರ ಕೈಗೆ ಲಾಠಿ ಕೊಟ್ಟಿರೊದು ದಾರಿ ತೋರಿಸಲಿಕ್ಕೆ, ಆದರೆ ನಮ್ಮ ದೇಶದಲ್ಲಿ ಅದು ಹಾಗಾಗಿಲ್ಲ ಹಿಂದೆ ಬ್ರಿಟಿಷರು ಪೋಲಿಸರಿಗೆ ಲಾಠಿಯನ್ನು ಕೊಟ್ಟು ನಮ್ಮವರನ್ನೆ ಹೊಡೆಯಲು ಹೇಳುತ್ತಿದ್ದರು ಅವರು ದೇಶವನ್ನು ಬಿಟ್ಟು ಹೋಗಿ 70 ವರ್ಷ ಕಳೇದರು ಅದು ಹಾಗೇ ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ದೇಶಕ್ಕೆ ಕಟ್ಟುವ ತೆರಿಗೆಯಲ್ಲಿ ಪಗಾರ ತೆಗೆದುಕೊಳ್ಳುವ ಜನರ ಸೇವೆ ಮಾಡುವ ಸರಕಾರಿ ನೌಕರರು ಇವರಂತೆ ಚುನಾಯಿತರಾದ ಲೋಕಸಭಾ ಮತ್ತು ವಿಧಾನಸಭೆ ಸದಸ್ಯರು ಸಹ ನಮ್ಮ ತೆರಿಗೆಯಲ್ಲಿ ಸಂಬಳ ಪಡೆಯುವ ನೌಕರರು ಇವರಿಗೂ ಸಹ ನೌಕರರಂತೆ ನಿರ್ಭಂದಗಳನ್ನು ಇರಬೇಕು ಅದನ್ನು ಬಿಟ್ಟು ಚುನಾಯಿತರಾದ ಪ್ರತಿನಿಧಿಗಳು ಮನಸ್ಸಿಗೆ ಬಂದಂತೆ ಅಧಿಕಾರಗಳ ಮೇಲೆ ಇವರು ಧರ್ಪ ತೋರಿಸುತ್ತಾರೆ ಎಂದರು.
ಚುನಾವಣೆಯಲ್ಲಿ ಆಯ್ಕೆಯಾದ ಕೇಲವು ವ್ಯಕ್ತಿಗಳು ಜನರ ಸೇವೆಗಾಗಿ ಅಲ್ಲ, ತಮ್ಮ ಅಂತಸ್ಥನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ರಾಜಕೀಯ ಮಾಡುತ್ತಿದ್ದಾರೆ, ಆದ್ದರಿಂದ ಇಂತಹವರಿಗೆ ಪಾಠ ಕಲಿಸಬೇಕಾದರೆ ಯುವಕರು ಅಂತಹವರಿಗೆ ಪಾಠಕಲಿಸಬೇಕಾದರೆ ಎಲ್ಲರೂ ಮುಂದೆ ಬರಬೇಕು, ಆಗ ಅವರು ಜನರ ಸೇವೆ ಮಾಡಲು ಸಾಧ್ಯ ಎಂದು ಹೇಳಿದರು.
ಬೆಳಗಾವಿ ಜಿಲ್ಲೆ ಹೆಚ್ಚು ನೇಕಾರರು ಇರುವುದರಿಂದ ಒಂದು ಪ್ಯಾಷನ್‌ ಡಿಸೈನಿಂಗ್‌ ತರಬೇತಿ ಕೇಂದ್ರವನ್ನು ಆರಂಭಿಸಬೇಕು ಮತ್ತು ರೈತರ ಬೆಳೆಯುವ ಜಮೀನುಗಳಿಗೆ ನೀರಾವರಿ ಯೋಜನೆ ಕಲ್ಪಿಸಿದರೆ ಇವುಗಳಿಂದ ದುಡಿದು ಸಾಕಷ್ಟು ಹಣ ಗಳಿಸಬಹುದು ಆಗ ರೈತರು ಹಾಗೂ ನೇಕಾರರು ಸಹ ಸರಕಾರದಿಂದ ಪಡೆಯುವ ಸಾಲ ಮನ್ನಾ ಸೌಲಭ್ಯವನ್ನು ಕೇಳುವದಿಲ್ಲ ಎಂದರು.
ಈ ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಶಿವಾನಂದ ಮಾತನವರ ಕಾರ್ಯಕ್ರಮವನ್ನು ಉದ್ಘಾಸಿದರು, ವೆಂಕಟೇಶ ದೇವಸ್ಥಾನದ ಮುಖ್ಯ ಅರ್ಚಕ ಲಲ್ಲುರಾಮ ಸ್ವಾಮಿಜಿ ಭಾಗವಹಿಸಿದ್ದರು, ನಿರಂಜನ ಸಾಲಿಮಠ ಸ್ವಾಗತಿಸಿದರು, ಡಾ. ಅಮುಲ ದೂತ ವಂದಿಸಿದರು.

loading...