ಕಾಂಗ್ರೆಸ್‌ ಟಿಕೇಟ್‌ ಸಿಗುವುದು ಖಚಿತ: ಆನಂದ ಚೋಪ್ರಾ

0
33
loading...

ಕನ್ನಡಮ್ಮ ಸುದ್ದಿ-ಕಡಬಿ: ಭಾರತ ವಿಭಿನ್ನ ಸಂಸ್ಕೃತಿ, ಪರಂಪರೆ, ಆಚಾರ ವಿಚಾರ ದೈವಭಕ್ತಿ ನಂಬಿರುವ ದೇಶವಾಗಿದ್ದು ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಬೇಕು ಎಂದು ಗೌರಾಧ್ಯಕ್ಷರು ರಾಷ್ಟ್ರೀಯ ಬಸವದಳದ ಸವದತ್ತಿ ಹಾಗೂ ಕಾಂಗ್ರಸ್‌ ಮುಖಂಡ ಆನಂದ ಚೋಪ್ರಾರವರು ಹೇಳಿದರು.
ಸಮೀಪದ ಮುಗಳಿಹಾಳ ಗ್ರಾಮದಲ್ಲಿ ರವಿವಾರ ನಡೆದ ಶ್ರೀ ಬಸವೇಶ್ವರ ಜಾತ್ರಾ ನಿಮಿತ್ತ ಯುವಜನ ಸಂಘಟನಾ ಸಮಿತಿ ಮುಗಳಿಹಾಳ ಇವರ ಆಶ್ರಯದಲ್ಲಿ ಸಪ್ತಸ್ವರ ಮೆಲೋಡಿಯಸ್‌ ಮೂಡಲಗಿ ಸಾಂಸ್ಕೃತೀಕ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ನಾಡಿನ ನೆಲಜಲ ಭಾಷೆ ಅಭಿವೃದ್ಧಿಗೆ ರಾಜಕೀಯ ಹಾಗೂ ಜ್ಯಾತ್ಯಾತಿತವಾಗಿ ಯುವ ಪಡೆಯ ಯುವಕರು ಶ್ರಮೀಸಬೇಕು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಟಕೇಟ ಸಿಗುವದು ಖಚಿತ. ಯುವಕರು ಒಗ್ಗಟ್ಟಿನಿಂದ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ ಮತ್ತೊಮ್ಮೆ ಸಿದ್ರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಲು ಶ್ರಮಿಸಬೇಕೆಂದರು.
ಗೋಪಾಲ ಗಂಗರಡ್ಡಿ ನಿರಾಣಿ ಶುಗರ್ಸ್‌ ಮುಧೋಳ. ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದಿನ ಯುವಕರು ಇಂಥಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಆಯೋಜಿಸುವದರಿಂದ ಯುವಕರಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ ಹಾಗೂ ಸರ್ವರು ಸಮಾನರು. ಹಬ್ಬಗಳು ಜಾತ್ರೆ ಹೆಚ್ಚಿನ ಹೆಚ್ಚು ಆಯೋಜಿಸುವುದರಿಂದ ಜಾತ್ಯಾತೀತ ಭಾವನೆ ಪ್ರತಿಯೊಬ್ಬ ಯುವಕರಲ್ಲಿ ಬರುತ್ತೆ ಎಂದರು.
ಕಾರ್ಯಕ್ರಮದ ಘಟಕಯ್ಯಾ ಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿದ್ದರು. ಸಿದ್ದು ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಭೀಮಶೇಪ್ಪ ಅರಭಾಂವಿ. ಗೋಪಾಲಗೌಡ ಗಂಗರಡ್ಡಿ. ಗೋವಿಂದಪ್ಪ ಮುರಕಟ್ಟಿ. ಭೀಮಶಿ ದಳವಾಯಿ, ಗಜಾನನ ಹಂಪಿಹೋಳಿ, ಬಸವರಾಜ ದಳವಾಯಿ, ಬಸವರಾಜ ಮಾಯನ್ನವರ, ವಿಠ್ಠಲ ಮಾಲದಿನ್ನಿ, ವಿಠ್ಠಲ ಈಳಿಗೇರ, ಅಲ್ತಾಫ್‌ ಮುಲ್ಲಾ ಅಂತರಾಷ್ಟ್ರೀಯ ಕ್ರೀಡಾಪಟು ಯರಗಟ್ಟಿ, ಆಸೀಪ್‌ ಭಾಗೋಜಕೊಪ್ಪ, ಹಾಸ್ಯ ಕಲಾವಿದ ಯಲ್ಲೇಶ್‌ ಮೇಳವಂಕಿ ಕಾರ್ಯಕ್ರಮ ನಡೆಸಿದರು.

loading...