ಕಾಂಗ್ರೆಸ್‌ ತಾರತಮ್ಯ ನೀತಿಗೆ ನಾಂದಿ ಹಾಡಲಿದ್ದಾರೆ ಮೋದಿ: ಶಾಸಕ ಡಾ.ವಿಶ್ವನಾಥ

0
30
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ರಾಜ್ಯ ಸರಕಾರದ ತಪ್ಪು ನೀತಿಗಳ ಪರಿಣಾಮವಾಗಿ ಜಿಲ್ಲೆಯ ಸುಮಾರು 289 ರೈತರು ಮತ್ತು ರಾಜ್ಯದಲ್ಲಿ ಸುಮಾರು 3515 ರೈತರು ಆತ್ಮಹತ್ಯೆ ಮಾಡಿಕೊಂಡಿರುವದು ಅತ್ಯಂತ ದುರಾದೃಷ್ಟಕರ ಎಂದು ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಅವರು ಮಂಗಳವಾರ ಪಟ್ಟಣದ ಗುಂಡ್ಲೂರ ಚಾಳದ ನಿವಾಸಿ ಶಂಕರ ಫಕ್ಕೀರಪ್ಪ ಹೂಲಿ ಆತ್ಮಹತ್ಯೆ ಮಾಡಿಕೊಂಡ ಅವರ ಮನೆಗೆ ತೆರಳಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ರಾಜ್ಯ ರೈತರಿಗೆ ಆತ್ಮಸ್ಥೈರ್ಯ ತುಂಬಲು ಬರೆದ ಪತ್ರವನ್ನು ಮುಟ್ಟಿಸಿ ಮಾತನಾಡಿ, ಕಳೆದ ಬಿಜೆಪಿ ಸರಕಾರದಲ್ಲಿ ರಾಜ್ಯದ ರೈತರ ಸಾಲವನ್ನು ಎರಡು ಬಾರಿ ಮನ್ನಾ ಮಾಡಲಾಗಿತ್ತು. ಈಗಿನ ಕಾಂಗ್ರೆಸ್‌ ಸರಕಾರ 5 ವರ್ಷಗಳ ಸತತ ಬರಗಾಲದ ನಂತರ ರೈತರದಲ್ಲಿ ತಾರತಮ್ಯ ಮಾಡಿ ಕೇವಲ ರೂ. 50 ಸಾವಿರ ಮನ್ನಾ ಮಾಡಿ, ಇನ್ನೂ ಕೆಲ ರೈತರ ಕಟಬಾಕಿ ರೈತರ ಸಾಲ ಮನ್ನಾ ಮಾಡದೇ ಸತಾಯಿಸುವುದಕ್ಕೆ ರೈತರು ಎದೆಗುಂದಬಾರದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 2022 ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸಲಾಗುವುದು. ಮುಂಬುರುವ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಲಕ್ಷ ಕೋಟಿ ರೂ.ಗಳಲ್ಲಿ ರಾಜ್ಯ ರೈತರಿಗೆ ನೀರಾವರಿ ಕಲ್ಪಿಸಲಾಗವುದು. ಸರಕಾರದಿಂದ ಸಾಧ್ಯವಾದ್ದಷ್ಟು ಸಹಾಯ ಸಹಕಾರ ನೀಡಲಾಗವುದು. ನಾಡಿಗೆ ದುಡಿದು ಅನ್ನ ಹಾಕುವ ರೈತರು ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈಹಾಕಬಾರದು. ನಿಮ್ಮ ಜೊತೆಗೆ ನಾವಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಡಿವಾಳಪ್ಪಾ ಹೋಟಿ, ರಾಮನಗೌಡ ಪಾಟೀಲ, ಸಂಜು ಗಡತನ್ನವರ, ಬಸಪ್ಪ ಕುರಬೇಟ, ರಾಜು ಮದಲಬಾಂವಿಮಠ, ಮಂಜು ಹೂಲಿ, ಜ್ಯೋತೆಪ್ಪ ಹಿಟ್ಟಣಗಿ, ಕಲ್ಮೇಶ ಹೂಲಿ, ಮಕ್ತುಮಸಾಬ ಸಂಗೋಳ್ಳಿ, ಬಾಬು ಸಾಕನ್ನವರ, ಚಂದ್ರಶೇಖರ ಪಾಸಲಕರ, ಉಮೇಶ ಕರಿಗಾರ, ಪ್ರವೀಣ ಹಿರೇಮಠ, ಬಸವರಾಜ ಡಬಲಿ, ರುದ್ರಪ್ಪ ತುರಮರಿ, ರುದ್ರಪ್ಪ ಜಾಲಿಕಟ್ಟಿ, ಬಸಪ್ಪ ಕುರಬೇಟ, ಪರಸು ಸನದಿ, ಶಿವಯ್ಯಾ ಹಿರೇಮಠ, ಉಳವಪ್ಪ ಹುಲ್ಲೆನ್ನವರ, ಬಸವರಾಜ ಮೂಗಿ, ಬಸವರಾಜ ದುಗ್ಗಾಣಿ, ಸ್ವಾಮಿ ವಿವೇಕಾನಂದ ಯುವ ಜಾಗೃತಿ ಸಮಿತಿ ಸದಸ್ಯರು ಹಾಗೂ ಬಿ.ಜೆ.ಪಿ ಕಾರ್ಯಕರ್ತರು, ಯುವಕರು ಮತ್ತು ಎಲ್ಲ ಬಿ.ಜೆ.ಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...