ಕಾಗವಾಡ ಪಂಚಾಯತ ವ್ಯವಸ್ಥೆ ರಾಷ್ಟ್ರಕ್ಕೆ ಮಾದರಿ: ರಾಜು ಕಾಗೆ

0
32
loading...

ಕನ್ನಡಮ್ಮ ಸುದ್ದಿಕಾಗವಾಡ 14: ಶಿರಗುಪ್ಪಿ ಗ್ರಾಮದ ಹಿರಿಯರು ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೆ, ಕೇವಲ ಗ್ರಾಮದ ಅಭಿವೃದ್ಧಿ ಒಂದೇ ಗುರಿ ಇಟ್ಟು ಪಾರದರ್ಶಕ ಕಾರ್ಯ ಮಾಡುತ್ತಿರುವದರಿಂದ ಈ ಗ್ರಾಮದ ಅಭಿವೃದ್ಧಿ ಛಾಪು ಭಾರತ ದೇಶದಲ್ಲಿ ಅಷ್ಟೇಅಲ್ಲಾ ವಿದೇಶದಲ್ಲಿ ಮೂಡಿಸಿ ಇನ್ನುಳಿದ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.ಶಿರಗುಪ್ಪಿ ಗ್ರಾಮ ಪಂಚಾಯತಿಯಲ್ಲಿ ಕೇಂದ್ರ ಸರಕಾರದ ಭಾರತ ಉಜ್ವಲ ಯೋಜನೆಯಡಿಯಲ್ಲಿಯ 46 ಗ್ಯಾಸ ಸಿಲಿಂಡರ್‌, ಮನೆಗಳು ಕಟ್ಟಿಸಲು ಬಸವ ವಸತಿ ಯೋಜನೆಯಡಿಯಲ್ಲಿ 62 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಶಾಸಕರು ಮಾತಮಾಡಿದರು.ರಾಜ್ಯ ಸರಕಾರ ಬಿಸಿ ಊಟ, ಸೈಕಲ್‌ ವಿತರಣೆ, ಬೇರೆ ಬೇರೆ ಯೋಜನೆಗಳ ಮುಖಾಂತರ ಜನರನ್ನು ಖುಷಿ ಪಡಿಸದೇ ಶಾಶ್ವತ ಯೋಜನೆ ರೂಪಿಸಿ ಜನರ ಸೇವೆ ಮಾಡಬೇಕು. ಕಳೆದ ಬಿಜೆಪಿ ಸರಕಾರ ಮಾಡಿರುವ ಅನೇಕ ಯೋಜನೆಗಳು ಜನರು ಈಗಲೂ ನೆನಪಿಸುತ್ತಾರೆ ಎಂದು ಶಾಸಕ ರಾಜು ಕಾಗೆ ಹೇಳಿದರು.ಶಿರಗುಪ್ಪಿ ಗ್ರಾಮದ ನ್ಯಾಯವಾದಿಗಳು ಅಭಯಕುಮಾರ ಅಕಿವಾಟೆ ಮಾತನಾಡಿದರು.ಚಿಕ್ಕೋಡಿ ಡಿಕೆಎಸ್‌ಎಸ್‌ ಸಕ್ಕರೆ ಕಾರ್ಖಾನೆಗೆ ಶಿರಗುಪ್ಪಿಯ ಸುಭಾಸ ಕಾತ್ರಾಳೆ ಇವರನ್ನು ಅವಿರೋಧವಾಗಿ ನಿರ್ದೆಶಕರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಜುಗೂಳದ ಅಣ್ಣಾಸಾಬ ಪಾಟೀಲ ಇವರನ್ನು ನಿರ್ದೆಶಕರಾಗಿ ಈ ಉಭಯರನ್ನು ಮತ್ತು ರಾಜು ಚೌಗಲೆ ಇವರಿಗೆ ವಿವೇಕಾನಂದ ಪ್ರಶಸ್ತಿ ದೊರೆತಿದರಿಂದ ಗ್ರಾಮ ಪಂಚಾಯತಿ ಮತ್ತು ಪಿಕೆಪಿಎಸ್‌ ಸಂಸ್ಥೆಯಿಂದ ಸನ್ಮಾನಿಸಿದರು. ಸಮಾರಂಭದ ಅಧ್ಯಕ್ಷತೆ ಗ್ರಾ ಪಂ ಅಧ್ಯಕ್ಷ ಮೊಮ್ಮದ ಗೌಂಡಿ ವಹಿಸಿದರು. ಅತಿಥಿಗಳಾಗಿ ಎಪಿಎಮ್‌ಸಿ ಅನೀಲ ಕಡೋಲೆ, ಭೀಮು ಬೋಲೆ, ರಾಮಗೌಡಾ ಪಾಟೀಲ, ಕಾಡಗೌಡಾ ಪಾಟೀಲ, ಮಾಜಿ ಗ್ರಾ ಪಂ ಅಧ್ಯಕ್ಷ ಶಿವಪ್ಪಾ ಚೌಗಲೆ, ಗಜಾನನ ಎರಂಡೊಲೆ ಬಮ್ಮನ್ನಾ ಚೌಗಲೆ, ಸುರೇಶ ಚೌಗಲೆ ಎಲ್ಲ ಗ್ರಾ ಪಂ ಸದಸ್ಯರು ಹಿರಿಯರು ಉಪಸ್ಥಿತರಿದ್ದರು.

loading...