ಕಾಮಗಾರಿಗೆ ಜಮೀನು ನೀಡಿದ ರೈತರಿಗೆ ಸನ್ಮಾನ

0
11
loading...

ನರಗುಂದ: ತಾಲೂಕಿನ ಶಿರೋಳ ಗ್ರಾಪಂ ವ್ಯಾಪ್ತಿಯ ಶಿರೋಳಸೇರಿದಂತೆ ಕಲ್ಲಾಪೂರ,ಕಪ್ಪಲಿ ಗ್ರಾಮಗಳಿಗೆ ಸಂಬಂಧಿಸಿದಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು 2015 ರ ಮೇ ತಿಂಗಳಿನಲ್ಲಿ ಶಿರೋಳದಲ್ಲಿ ಆರಂಭಗೊಳಿಸಿ ಪೂರ್ಣಗೊಳಿಸಲಾಗಿದ್ದು ಇದರಿಂದ ನಿತ್ಯ ಶಿರೋಳ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರಿನ ಲಭ್ಯತೆ ಒದಗಲಿದೆ ಎಂದು ಶಾಸಕ ಬಿ.ಆರ್‌. ಯಾವಗಲ್‌ ತಿಳಿಸಿದರು.
ನರಗುಂದ ತಾಲೂಕಿನ ಶಿರೋಳದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಜಮೀನು ನೀಡಿದ ಗಣ್ಯರನ್ನು ಜ. 29 ರಂದು ಶಿರೋಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾಮಗಾರಿಯನ್ನು 7.92 ಕೋಟಿ ರೂದಲ್ಲಿ ಪೂರ್ಣಗೊಳಿಸಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿಸಿದರು.
ನಂತರ ಕೊಣ್ಣೂರಿನಲ್ಲಿ 1 ಕೋಟಿರೂ ವೆಚ್ಚದಲ್ಲಿ ನಿರ್ಮಿಸುವ ರಾಮಲಿಂಗೇಶ್ವರ ಸಮುದಾಯ ಭವನ ಹಾಗೂ ಸಿ.ಸಿ, ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಶಾಸಕರು ನೆರವೇರಿಸಿದರು.
ಜಿಪಂ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ತಾಪಂ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಬಿ. ಸಿರಿಯಪ್ಪಗೌಡ್ರ ಮಾತನಾಡಿದರು. ರಾಮಲಿಂಗೇಶ್ವರ ಸಮುದಾಯ ಭವನಕ್ಕೆ ಜಮೀನು ನೀಡಿದ ಪ್ರಲ್ಹಾದ ಜೋಶಿ ದಂಪತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಣ್ಣೂರ ಗ್ರಾಪಂ ಅಧ್ಯಕ್ಷೆ ಕಸ್ತೂರಿ ಬಂಧೋಜಿ. ಶಿರೋಳ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಎಫ್‌.ವೈ. ದೊಡಮನಿ, ವ್ಹಿ,ಎಂ. ತಿರಕನಗೌಡ್ರ, ತಾಪಂ ಇಒ ಎ.ಜಿ. ಪಾಟೀಲ, ಸತೀಶ ನಾಗನೂರ, ಸೌಕತ್‌ಅಲಿ, ಕೃಷಿ ಇಲಾಖೆ ಸಹಾಯಕ ನಿರ್ಧೆಶಕ ಚನ್ನಪ್ಪ ಅಂಗಡಿ, ನೀರು ಬಳಕೆದಾರ ಮಹಾಮಂಡಳದ ಅಧ್ಯಕ್ಷ ದ್ಯಾಮಣ್ಣ ಕಾಡಪ್ಪನವರ, ಎಂ.ಬಿ. ಅರಹುಣಸಿ, ಖೋದಾನಪೂರ, ಎಂ.ಬಿ. ಹಂಗರಗಿ, ಧನಂಜಯ ಹೊಣಕೇರಿ, ರವಿ ಕರಿಗೌಡ್ರ, ಕೆ.ಬಿ. ಕೆಂಚನಗೌಡ್ರ ಅನೇಕ ಗಣ್ಯರು ಉಪಸ್ಥಿತರಿದ್ದರು. ವಿಕ್ರಂ ಭೂಸರಡ್ಡಿ ನಿರೂಪಿಸಿದರು.

loading...