ಕಿಕ್ರೆಟ್‌ ಟೂರ್ನಾಮೆಂಟ್‌ಗೆ ಗವಿಸಿದ್ದಪ್ಪ ಆಯ್ಕೆ

0
26
loading...

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಪಟ್ಟಣದ ಯುವ ವಿಕಲಚೇತನ ಕ್ರೀಡಾಪಟು ಗವಿಸಿದ್ದಪ್ಪ ಕುಂಬಾರ ಇತ್ತಿಚೆಗೆ ಕೇರಳ ದಕ್ಷಿಣ ರಾಜ್ಯ ವಿಕಲಚೇತನ ಕ್ರಿಕೆಟ್‌ ಟೂರ್ನಾಮೆಂಟ್‌ ಉತ್ತಮ ಪ್ರದರ್ಶನ ನೀಡುವ ಮೂಲಕ ಸೌಥ್‌ ಜೂನ್‌ ಕ್ಲಬ್‌ ಆಯ್ಕೆಯಾದ ಹಿನ್ನೆಲೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ಯುವ ಚೈತನ್ಯ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.
ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ ವಿಕಲಚೇತನರಾದರು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ. ಇಂತಹ ಕ್ರೀಡಾಪಟುಗಳು ಕ್ಷೇತ್ರದಲ್ಲಿ ಹೆಚ್ಚಾಗಿ ಕ್ರೀಡೆಯಲ್ಲಿ ಭಾಗವಹಿಸಿ ಕ್ಷೇತ್ರದ ಘನತೆ ತರಬೇಕು ಕ್ರೀಡಾಪಟು ಗವಿಸಿದ್ದಪ್ಪ ಕುಂಬಾರ ಅವರಿಗೆ ಪ್ರೋತ್ಸಾಹಿಸಿದರು.
ಜಿಲ್ಲಾ ಯುವ ಸಬಲೀಕರಣ ಅಧಿಕಾರಿ ವೈ.ಸುದರ್ಶನರಾವ್‌, ತಾಲೂಕಾ ಅಧಿಕಾರಿ ಹನುಮಂತಪ್ಪ ವಗ್ಯಾನವರ್‌, ಫೇಮಸ್‌ ಕ್ರೀಡಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲಿ, ಮುಖಂಡರಾದ ಸುರ್ಧೀರ್‌ ಕೊರ್ಲಳ್ಳಿ, ಮೌನೇಶ ಬಡಿಗೇರ್‌, ಶರೀಫ್‌ ಕೊತ್ವಾಲ್‌ ,ಮುತ್ತು ಪಟ್ಟೇದ್‌, ನಾಗರಾಜ ಛಲವಾದಿ, ಶ್ರೀಧರ ಕಟ್ಟಿಮನಿ, ಶರಣಪ್ಪ ಕದಾಂಪುರು, ಶರಣಪ್ಪ ಗಡಾದ್‌ ಇತರರು ಇದ್ದರು.

loading...