ಕ್ರಷರ್‌ ಮಶೀನ್‌ ಬಂದ್‌ಗಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

0
39
loading...

 

ರಾಯಬಾಗ 14: ತಾಲೂಕಿನ ನಂದಿಕುರಳಿ ಮತ್ತು ಯಡ್ರಾಂವ ಗ್ರಾಮದಲ್ಲಿರುವ ಕಲ್ಲು ಒಡೆಯುವ ಕ್ರಷರ್‌ ಮಷಿನ್‌ ಬಂದ ಮಾಡುವಂತೆ ಆಗ್ರಹಿಸಿ ಪಟ್ಟಣದ ಮಿನಿವಿಧಾನ ಸೌಧದ ಮುಂದೆ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿಯ ಧರಣಿ ಸತ್ಯಾಗ್ರಹ ಮುಂದುವರೆದಿದೆ. ಅಧಿಕಾರಿಗಳ ಹಾಗೂ ಪ್ರತಿಭಟನಾಕಾರರ ನಡುವೆ ನಡೆದ ಮನವೊಲಿಸುವ ಯತ್ನ ವಿಫಲಗೊಂಡಿದ್ದು, ಪ್ರತಿಭಟನಾಕಾರರು ತಮ್ಮ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಅಹೋರಾತ್ರಿ ಮುಂದುವರಿಸಿದ್ದಾರೆ. ಕಳೆದ ಮೂರು ದಿನಗಳಿಂದ ತಹಶೀಲ್ದಾರ ಕಾರ್ಯಾಲಯದ ಮುಂದೆ ಒಲೆಹೊತ್ತಿಸಿ ಅಡುಗೆಮಾಡಿ ಊಟ ಮಾಡುತ್ತಾ ಪ್ರತಿಭಟನೆ ಕೈಗೊಂಡಿರುವ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ನಮಗೆ ನ್ಯಾಯ ನೀಡುವವರೆಗೆ ಅನಿರ್ಧಿಷ್ಟಾವಧಿಯ ಅಹೋರಾತ್ರಿ ಧರಣಿ ಮುಂದುವರಿಸಲಾಗುದೆಂದು ತಿಳಿಸಿದರು. ತಹಶೀಲ್ದಾರ ಕೆ.ಎನ್‌.ರಾಜಶೇಖರ ಹಾಗೂ ಸಿಪಿಐ ಸುರೇಶ ಶಿಂಗಿ ರವರು ಧರಣಿ ನಿರತ ಪ್ರತಿಭಟನಾಕಾರರ ಮನವೊಲಿಸಲು ಎಷ್ಟೆ ಪ್ರಯತ್ನಪಟ್ಟರು ಪ್ರತಿಭಟನಾಕಾರರು ಯಾವುದಕ್ಕೂ ಜಗ್ಗದೆ ಪ್ರತಿಭಟನೆ ಶಾಂತಯುತವಾಗಿ ಮುಂದುವರಿಸುತ್ತೆವೆಂದು ಹಠ ಹಿಡಿದರು. ನಂತರ ತಹಶೀಲ್ದಾರರು ಚಿಕ್ಕೋಡಿಯ ಉಪವಿಭಾಗಾಧಿಕಾರಿ ಗೀತಾ ಕೌಲಗಿ ಅವರಿಗೆ ಸುಮಾರು ಸಲ ಮೊಬೈಲನಲ್ಲಿ ಸಂಪರ್ಕಿಸಿದರೂ ಅವರು ಯಾವುದೇ ಪ್ರತಿಕ್ರಿಯ ನೀಡದ ಕಾರಣ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಮುಂದುವರಿಸಿದರು. ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಮಕ್ಕಳಿಬ್ಬರು ಅಸ್ವಸ್ಥಗೊಂಡಿದ್ದು, ಅವರನ್ನು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.ಅಮೀನ ಜಾತಗಾರ, ಫಾತೀಮಾ ಶೇಖ, ಕುತುಬು ಮುಜಾವರ, ಗುರುನಾಥ ಹೆಗಡೆ, ಪ್ರಕಾಶ ಪಾಟೀಲ, ಅರುಣ ಠಕ್ಕನ್ನವರ, ಶಿವಾಜಿ ಪಾಟೀಲ, ಪರಸಪ್ಪ ನಂದಗಾಂವ, ದಸ್ತಗಿರ ಮುಲ್ತಾನಿ, ಹಸೀನಾ ಮುಲ್ತಾನಿ, ಜಮೀನಾ ಮುಲ್ತಾನಿ ಉಪಸ್ಥಿತರಿದ್ದರು..

loading...