ಗೋಕುಲ ಉತ್ಸವದ ಸಂಗೀತ ಕಾರ್ಯಕ್ರಮ

0
19
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಹಲವು ರೋಗಗಳ ಶಮನಕ್ಕೆ ಮದ್ದಾಗುವ ಸಂಗೀತ, ನಮ್ಮೊಳಗಿನ ಸೌಂದರ್ಯ ಪ್ರಜ್ಞೆ ಮತ್ತು ಸಕಾರಾತ್ಮಕ ಯೋಜನೆಗಳ ಉದ್ದೀಪನಕ್ಕೆ ಅತ್ಯುತ್ತಮ ಮಾಧ್ಯಮವಾಗಿದೆ ಎಂದು ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ದಿವಾಕರ ಹೆಗಡೆ ಕೆರೆಹೊಂಡ ಹೇಳಿದರು.
ಅತಿಥಿಗಳಾಗಿದ್ದ ಶಿರಸಿಯ ನೇತ್ರತಜ್ಞ ಡಾ||ಶಿವರಾಮ ಕೆ.ವಿ ಮಾತನಾಡಿ, ದಶಮಾನೋತ್ಸವದ ಸಂಭ್ರಮದೆಡೆ ದಾಪುಗಾಲಿಡುತ್ತಿರುವ ಗುರುಕುಲದ ಪ್ರಯತ್ನ ಶ್ಲಾಘನೀಯ. ಮುಂದಿನ ಜನಾಂಗಕ್ಕೆ ಇಲ್ಲಿಯ ಕಲೆ, ಸಂಗೀತ ಸೇರಿದಂತೆ ಎಲ್ಲ ಪ್ರಾಕಾರಗಳ ಸೃಜನಶೀಲ ಪ್ರತಿಭೆಗಳ ನಿರಂತರ ಮುನ್ನಡೆಯನ್ನು ತಲುಪಿಸುವುದು ನಮ್ಮೆಲ್ಲರ ಹೊಣೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನವದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಸದಸ್ಯ ವೇ.ಮೂ||ಗಜಾನನ ಭಟ್ಟ ಉಮ್ಮಚಗಿ ಮಾತನಾಡಿ, ಶಿರನಾಲಾದಂತ ಗ್ರಾಮೀಣ ಪ್ರದೇಶದಲ್ಲಿ 9 ವರ್ಷಗಳಿಂದ ನಿರಂತರ ಆಚರಿಸಲಾಗುತ್ತಿರುವ ವೈಶಿಷ್ಟ್ಯಪೂರ್ಣ ನಾದಾರಾಧನೆ ನಮ್ಮೆಲ್ಲರ ಪುಣ್ಯವಾಗಿದ್ದು, ಈ ಸಂಗೀತ ಕೇವಲ ಮನೋರಂಜನೆಯ ಉದ್ದೇಶವೊಂದನ್ನೇ ಹೊಂದಿರದೇ ಆತ್ಮ ಸಂತೋಷಕ್ಕೆ ಕಾರಣವಾಗಿದೆ ಎಂದರು.
ಆರಂಭದಲ್ಲಿ ರಾಗ್‌: ಮಾರುಬಿಹಾಗ್‌ ಪ್ರಸ್ತುತಪಡಿಸಿದ ಇವರು ನಂತರ ಖಮಾಚ್‌ ಠುಮ್ರಿ ಹಾಡಿ, ಮೀರಾಭಜನನವೊಂದನ್ನು ಅತ್ಯಂತ ಭಾವನಾತ್ಮಕವಾಗಿ ಪ್ರಸ್ತುತಪಡಿಸಿದರು. ಆಡ ಪೋಗೋಣ ಬಾರೋ ರಂಗ.. ಎಂಬ ಪುರಂದರ ದಾಸರ ಭಕ್ತಿ ರಚನೆಯನ್ನು ಅತ್ಯಂತ ಹೃದಯಂಗಮವಾಗಿ ಹಾಡಿ, ಭೈರವಿಯೊಂದಿಗೆ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು. ಇವರ ಉತ್ತಮ ಗಾಯನಕ್ಕೆ ಶ್ರೀಧರ ಮಾಂಡ್ರೆ ಧಾರವಾಡ (ತಬಲಾ), ಗುರುಪ್ರಸಾದ ಹೆಗಡೆ (ಸಂವಾದಿನಿ) ಹಾಗೂ ರಾಧಿಕಾ ಹೆಗಡೆ ಬಾಳೆಹದ್ದ (ತಂಬೂರ್‌) ಉತ್ತಮ ಸಾಥ್‌ ನೀಡಿದರು.

loading...