ಗೌರವ ಆದರಗಳಿಲ್ಲದ ಜೀವನ ನಿರರ್ಥಕ: ಗೋಪಾಲ

0
23
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಸಾರ್ವಜನಿಕವಾಗಿ ಉತ್ತಮ ಕೊಡುಗೆ ನೀಡುವ ಮನುಷ್ಯ ಎಲ್ಲಿ ಹೋದರೂ ಸುಖವಾಗಿರಬಲ್ಲ. ಗೌರವ ಆದರಗಳಿಲ್ಲದ ಜೀವನ ನಿರರ್ಥಕವಾದ್ದು. ಪರಸ್ಪರ ಒಬ್ಬರಿಗೊಬ್ಬರು ನೆರವಾಗುವ ಪ್ರವೃತ್ತಿ ಭಾವೈಕ್ಯತೆಯ ದ್ಯೋತಕವಾಗಿದೆ. ಬಾಲ್ಯದಿಂದಲೇ ಸಮಾಜದ ನಡುವೆ ಬದುಕುವ ಮನಸ್ಸು ಕಠಿಣ ಸವಾಲುಗಳನ್ನು ಎದುರಿಸಬಲ್ಲದು. ಎಂದು ಹಿರಿಯ ವೈದಿಕರಾದ ಗೋಪಾಲ ವಿ ಭಟ್ಟ ಉಪಾದ್ಯ ಹೇಳಿದರು
ಅವರು ಕಳಚೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಿರಿಯ ಪ್ರಾಥಮಿಕ ಶಾಲೆ, ಕಳಚೆಯ ಸರ್ಕಾರಿ ಪ್ರೌಢಶಾಲೆ ಗಳು ಸಂಯುಕ್ತವಾಗಿ ಸಂಘಟಿಸಿದ್ದ ಪ್ರಸಕ್ತ ಸಾಲಿನ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಅನಂತ ಮಾ ಗಾಂವ್ಕಾರ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಪಂಚಾಯತ ಸದಸ್ಯೆ ಶೃತಿ ಹೆಗಡೆ ಸಾಂಸ್ಕೃತಿಕ ಕಾರ್ಯಕ್ರಮದ ಬಹುಮಾನ ವಿತರಿಸಿ ಮಾತನಾಡಿ ಮಕ್ಕಳ ಪ್ರತಿಭೆಗಳಿಗೆ ಸೂಕ್ತ ವೇದಿಕೆಯ ಅವಕಾಶ ಸಿಕ್ಕರೆ ಮಾತ್ರ ಸಾಂಸ್ಕೃತಿಕ ಪ್ರೀತಿ ಮೊಳೆಯಲು ಸಾಧ್ಯ. ಎಲ್ಲರ ಜೊತೆ ಬೆರೆಯುವ ಗುಣ ಪರಿಶುದ್ಧ ಭಾವನೆಗಳನ್ನು ಅಭಿವ್ಯಕ್ತಿಸುವ ಮಾಧ್ಯಮವಾಗಿದೆ ಎಂದರು. ಅತಿಥಿಗಳಾಗಿ ಗ್ರಾಮ ಪಂಚಾಯತ ಅಧ್ಯಕ್ಷ ಗಜಾನನ ಭಟ್ಟ ಸೂತ್ರೆ, ಸಾಮಾಜಿಕ ಕಾರ್ಯಕರ್ತರಾದ ಉಮೇಶ ಭಾಗ್ವತ, ಪಿ ಜಿ ಹೆಗಡೆ, ಜಿ ಎನ್‌ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ನಂತರ ಶಾಲಾ ಮಕ್ಕಳಿಂದ ನಾಟಕ,ನೃತ್ಯ, ರೂಪಕದಂತಹ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಿದವು.

loading...