ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

0
30
loading...

ಕನ್ನಡಮ್ಮ ಸುದ್ದಿ-ಕಲಾದಗಿ: ಸ್ಥಳೀಯ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಶಿವಗಂಗವ್ವ ಜಮಖಂಡಿ ಉಪಾಧ್ಯಕ್ಷ ಮಹಮ್ಮದ ಹೊಸಕೋಟಿ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ. ಫೆ.7ರಂದು ತೆರುವಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಅಧ್ಯಕ್ಷರಾಗಿ ತಾರಾಮತಿ ಶ್ರೀಕಾಂತ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ನೂರಅಹಮ್ಮದ ರೈಮಾನಸಾಬ ಮುಜಾವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ ನಾಯಕ ಘೋಷಸಿದರು.
ಚುನಾವಣೆ ಪ್ರಕ್ರೀಯೆಯಲ್ಲಿ ಗ್ರಾಪಂ ಸದಸ್ಯರಾದ ಅಖ್ತರ ರೋಣ, ಮಮ್ಮದ ಹೊಸಕೋಟಿ, ಭೋರವ್ವ ಕುಂದರಗಿ, ಸಂಗಮೇಶ ಸಗರಿ, ಫಕೀರಪ್ಪ ಮಾದರ, ದುರ್ಗೆಶ ಮಾದರ, ಚನ್ನಪ್ಪ ಅಂಗಡಿ, ಶಾಂತಾಬಾಯಿ ರಾಠೋಡ, ಅಂಜಲಿ ಬಾನು, ಸೈಪುದ್ದೀನ ಗುಳ್ಳಾರ, ರಾಜಬಿ ಬೇವೂರ, ಶಾಂತವ್ವ ಜಲಗೇರಿ, ಸಿದ್ದಪ್ಪ ಹೊಸಮನಿ, ಮಮತಾಜ ನದಾಫ, ಮೈಬೂಬ ಬನ್ನೂರ, ಜುಲೇಖಾ ನದಾಫ, ಅನ್ನಕ್ಕ ಮಾದರ, ಶೋಭಾ ಪವಾರ, ಮಾಬೂಬಿ ಬೇಪಾರಿ, ಮಿನಾಕ್ಷಿ ನಾಯ್ಕರ, ಸುಫೀಯಾಬಿ ಚೌದರಿ, ನೂರಜಾನ ದಾಡಿವಾಲೆ, ಜೈತುನಬಿ ಮುಜಾವರ, ಸುರೇಶ ಆಸಂಗಿ, ಭಾಗವಹಿಸಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಪಂ ನೂತನ ಅಧ್ಯಕ್ಷೆ ತಾರಾಮತಿ ಪಾಟೀಲ ಗ್ರಾಮದ ಮೂಲಭೂತ ಸೌಕರ್ಯಕ್ಕಾಗಿ ಹೆಚ್ಚಿನ ಒತ್ತು ಕೊಡುತ್ತೇವೆ ಸರಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವಲ್ಲಿ ಎಲ್ಲ ಸದಸ್ಯರ ಸಲಹೆಯೊಂದಿಗೆ ನಮ್ಮ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತನೆ ಮಾಡುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಪಂಚಾಯಿತಿ ಉಪಾಧ್ಯಕ್ಷ ಸಲೀಂ ಶೇಖ ಕಾಂಗ್ರೆಸ ಪಕ್ಷದಲ್ಲಿ ಎಲ್ಲ ವರ್ಗದ ಸಮಾಜದವರಿಗೂ ಅವಕಾಶ ನೀಡುವ ಪಕ್ಷವಾಗಿದೆ ಇತಿಹಾಸದಲ್ಲೆ ಕಲಾದಗಿ ಗ್ರಾಮ ಪಂಚಾಯಿತಿಯಲ್ಲಿ ಮಾರಾಠ ಸಮಾಜದವರು ಅಧ್ಯಕ್ಷರಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಜಯಾ ಗಳಿಸುವ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್‌ ಪಕ್ಷದ ಬ್ಲಾಕ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮೊದೀನಸಾಬ ರೋಣ, ಯಾಕೂಬ ಸೌದಾಗರ, ಬಂದೇನವಾಜ ಸೌದಾಗರ, ಯುಥ ಕಾಂಗ್ರೆಸ ಅಧ್ಯಕ್ಷ ಅಕ್ರಮ ಸೌದಾಗರ, ಬಂದೇನವಾಜ ಮನಿಯಾರ, ನೂರಅಹಮ್ಮದ ಬಾಗವಾನ, ಬಾಬು ತೇಲಿ, ರಮೇಶ ಮಾದರ, ಹುಸೇನಸಾಬ ನದಾಫ, ಮುನ್ನಾ ಖಲಾಸಿ, ಇಬ್ರಾಹೀಮಸಾಬ ಸೋಲ್ಜರ ಇದ್ದರು ಕಾರ್ಯಕರ್ತರು ಸಿಹಿ ಹಂಚಿ ಪರಸ್ಪರ ಗುಲಾಲ ಎರಚಿ ಪಟಾಕಿ ಸಿಡಿಸಿ ಸಂಬ್ರಮಿಸಿದರು.

loading...