ಗ್ರಾಮೀಣ ಅಭಿವೃದ್ಧಿಗೆ ಮೊದಲ ಪ್ರಾಶಸ್ತ್ಯ: ಶಶಿಕಲಾ ಜೊಲ್ಲೆ

0
20
loading...

 

ಚಿಕ್ಕೋಡಿ 08: ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವುದರೊಂದಿಗೆ ರೈತರಿಗೆ, ಜನಸಾಮಾನ್ಯರಿಗೆ ಸುವ್ಯವಸ್ಥಿತ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ನಿಪ್ಪಾಣಿ ತಾಲೂಕಿನ ಭಿವಶಿ ಗ್ರಾಮದಲ್ಲಿ ನೀರಾವರಿ ಇಲಾಖೆಯಿಂದ 50 ಲಕ್ಷ. ರೂ.ಗಳ ಅನುದಾನದಲ್ಲಿ ಮಂಜೂರಾದ ವೇದಗಂಗಾ ನದಿಘಾಟ್‌ ಮೆಟ್ಟಿಲು ನಿರ್ಮಾಣ ಕಾಮಗಾರಿಗೆ ಹಾಗೂ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೊಜನೆಯಡಿಯಲ್ಲಿ ಭಿವಶಿ ಗ್ರಾಮದ ಹೊರವಲಯದ 1.5 ಕಿ.ಮೀ. ರಸ್ತೆ ಸುಧಾರಣೆಗಾಗಿ ಸುಮಾರು 75 ಲಕ್ಷ.ರೂ. ಗಳ ಅನುದಾನ ಮಂಜೂರಾಗಿದ್ದು, ಈ ರಸ್ತೆ ಕಾಮಗಾರಿಗೆ ಶಾಸಕಿ ಶಶಿಕಲಾ ಜೊಲ್ಲೆ ಚಾಲನೆ ನೀಡಿ ಮಾತನಾಡಿದರು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಿಪ್ಪಾಣಿ ಮತಕ್ಷೇತ್ರದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕೋಟ್ಯಾಂತರ ರೂ.ಗಳ ಅನುದಾನವನ್ನು ತಂದು ಅಭಿವೃದ್ಧಿಪಡಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಭಿವಶಿ ಗ್ರಾಮಸ್ಥರು ಜೊಲ್ಲೆ ದಂಪತಿಗಳನ್ನು ಸತ್ಕರಿಸಿದರು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ರಘುನಾಥ ಮಗದುಮ್ಮ ಮಾತನಾಡಿದರು. ಪ್ರಕಾಶ ಶಿಂಧೆ ಮಾತನಾಡಿದರು.ಈ ಸಂದರ್ಭದಲ್ಲಿ ಸಹಕಾರಿ ಧುರೀಣ ಅಣ್ಣಾಸಾಹೇಬ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ತಾ.ಪಂ.ಸದಸ್ಯ ಅಪ್ಪಾಸೋ ಢವಣೆ, ಗ್ರಾ.ಪಂ. ಅಧ್ಯಕ್ಷ ಧೋಂಡಿರಾಮ ಕಾಂಬಳೆ, ಉಪಾಧ್ಯಕ್ಷೆ ರಾಣಿ ಹರದಾರೆ, ಸದಸ್ಯರಾದ ಸಂಜಯ ಪಾಟೀಲ, ಸವಿತಾ ಪವಾರ, ವನಿತಾ ಕಾಂಬಳೆ, ಪ್ರಕಾಶ ಶಿಂಧೆ, ಎಂ.ಆರ್‌. ಪಾಟೀಲ, ವಿಲಾಸ ಶಿಂಧೆ, ಸಬಗೌಡ ಪಾಟೀಲ, ಅನಂತ ಪಾಟೀಲ, ನಿತಿನ ಪಾಟೀಲ, ಕಿಶೋರ್‌ ಹರದಾರೆ, ರಮೇಶ ಹರದಾರೆ, ವಿಶ್ವಾಸ ಮಗದುಮ್ಮ, ಸಚಿನ್‌ ಪಾಟೀಲ, ಬಜರಂಗ ಕಾಂಬಳೆ, ಪ್ರಕಾಶ ಕಾಂಬಳೆ, ಪಿ.ಎಸ್‌. ಪಾಟೀಲ, ಮಹಾದೇವ ಚೌಗುಲೆ, ರಾಮಗೌಡ ಪಾಟೀಲ, ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಮಧುಕರ ಪಾಟೀಲ ನಿರೂಪಿಸಿ ವಂದಿಸಿದರು. ..

loading...