ಗ್ರಾಮೀಣ ಅಭಿವೃದ್ಧಿಗೆ ಸದಾ ಸಿದ್ಧ: ಪಾಟೀಲ

0
26
loading...

ಕನ್ನಡಮ್ಮ ಸುದ್ದಿ-ರೋಣ: ಕ್ಷೇತ್ರದ ಗ್ರಾಮೀಣ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸದಾ ಸಿದ್ಧವಾಗಿ ಎಂದು ಶಾಸಕ ಜಿ.ಎಸ್‌.ಪಾಟೀಲ ಹೇಳಿದರು.
ಅವರು ತಾಲೂಕಿನ ಇಟಗಿ ಗ್ರಾಮದಲ್ಲಿ ಸುಮಾರು 73 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ.ರಸ್ತೆ, ಇಸ್ಲಾಂ ಕಮೀಟಿಯ ಸಮುದಾಯ ಭವನ, ಬೀರಲಿಂಗೇಶ್ವರ ಸಮುದಾಯ ಭವನದ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಕ್ಷೇತ್ರದ ಪ್ರತಿ ಗ್ರಾಮಗಳು ಸಿ.ಸಿ.ರಸ್ತೆಗಳನ್ನು ಹೊಂದಿದ್ದು, ರಾಜ್ಯ ಸರ್ಕಾರ ಇಂತಹ ಹಲವಾರು ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡೆಸುವಲ್ಲಿ ಯಶಸ್ವಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಪ್ರಭು ಮೇಟಿ, ವ್ಹಿ.ಆರ್‌.ಗುಡಿಸಾಗರ, ಯೂಷಫ್‌ ಇಟಗಿ, ಬಸವರಾಜ ನವಲಗುಂದ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮಸ್ಥರು ಸೇರಿದಂತೆ ಅನೇಕರು ಇದ್ದರು.

“ಶಾಸಕರು ಗ್ರಾಮೀಣ ಪ್ರದೇಶದ ಜನತೆಯ ಕಾಳಜಿಯುಳ್ಳವರಾಗಿದ್ದು, ಕ್ರಿಯಾಶೀಲ ಶಾಸಕರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ಅವರನ್ನು ನಾವುಗಳು ಗೆಲ್ಲಿಸೋಣ.”

ಪ್ರಭು ಮೇಟಿ, ತಾಪಂ ಸದಸ್ಯ

loading...