ಡಿಜೇಲ್ ಟ್ಯಾಂಕರ್-ಟ್ರ್ಯಾಕ್ಟರ್ ಡಿಕ್ಕಿ

0
13

ನಾಲ್ವರ ಸಾವು-ಏಳು ಜನರಿಗೆ ತೀವ್ರ ಗಾಯ

loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ರಾಷ್ಟ್ರೀಯ ಹೆದ್ದಾರಿ-63 ರ ಬನ್ನಿಕೊಪ್ಪ ಗ್ರಾಮದ ಸಮೀಪ ಇಂಡಿಯನ್ ಡೀಸೆಲ್ ಟ್ಯಾಂಕರ್ ಮತ್ತು ಟ್ರಾಕ್ಟರ್ ನಡುವೆ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟ್ರಾಕ್ಟರ್ ನಲ್ಲಿದ್ದ 4 ಜನ ಸ್ಥಳದಲ್ಲಿ ಸಾವನ್ನಪ್ಪಿದ್ದು, 7 ಜನರಿಗೆ ತೀವ್ರ ಗಾಯಗಳಾದ ದುರ್ಘಟನೆ ಗುರುವಾರ ಬೆಳಗಿನ ಜಾವ 6 ಗಂಟೆಗೆ ಜರುಗಿದ್ದು, ಗಾಯಾಳುಗಳನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜಿಲ್ಲೆಯ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಗ್ರಾಮದಿಂದ ತಳಕಲ್ ಕಡೆಗೆ ಹೊಲಕ್ಕೆ ಕಡಲೆ ಕೀಳಲು ಟ್ರ್ಯಾಕ್ಟರ್‍ನಲ್ಲಿ ಬಡ ರೈತ ಕುಟುಂಬದ ಕೂಲಿ ಕಾರ್ಮಿಕರು ಹೊಗುತ್ತಿದ್ದರು, ಕೊಪ್ಪಳ ರಸ್ತೆಯಿಂದ ಗದಗಿನ ಕಡೆ ಅತೀ ವೇಗದಿಂದ ಚಲಿಸುತ್ತಿದ್ದ ಡಿಜೇಲ್ ಟ್ಯಾಕರ್ ಟ್ರ್ಯಾಕ್ಟರ್‍ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷ್ಯದರ್ಶಿಗಳು ಹೇಳಿದ್ದಾರೆ.
ಈ ಘಟನೆಯನ್ನು ಕುಕನೂರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಟ್ಯಾಂಕರ್ ಚಾಲಕ ಅಲ್ಲಿಂದ ಪರಾರಿಯಾಗಿದ್ದು, ಟ್ರ್ಯಾಕ್ಟರ್‍ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಅಸು ನೀಗಿದ್ದಾರೆ, ಗಾಯಾಗೊಂಡ ಏಳು ಜನರನ್ನು ಕೊಪ್ಪಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸುದ್ದಿ ತಿಳಿದು ಕುಕನೂರ ಠಾಣೆಯ ಪಿಎಸ್‍ಐ ರಾಘವೇಂದ್ರ ಅವರು ಸ್ಥಳಕ್ಕೆ ಆಗಮಿಸಿ ಘಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ, ಘಾಯಾಳುಗಳಿಗೆ ನೆರವಾದರು. ಮೃತರು ಬನ್ನಿಕೊಪ್ಪ ಗ್ರಾಮದ ಚನ್ನಪ್ಪ ಈರಪ್ಪ ಹಡಪದ್(35), ಈರಮ್ಮ ಗಂಡ ಈರಪ್ಪ ಹಡಪದ (55), ಬಿಬಿಜಾನ್ ಗಂಡ ರಾಜಸಾಬ್ ಕವಲೂರು (40), ಮಹಮದ್ ರಫಿ ತಂದೆ ರಾಜಾಸಾಬ ಕವಲೂರು (19) ಮೃತ ದುರ್ದೈವಿಗಳಾಗಿದ್ದಾರೆ.

loading...