ತಂತ್ರಜ್ಞಾನದ ಅರಿವಿನ ಅವಶ್ಯಕತೆಯು ಹೆಚ್ಚುತ್ತಿದೆ : ಮಿಶ್ರಿಕೋಟಿ

0
22
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ಕರ್ನಾಟಕ ಲಾ ಸೊಸ್ಶೆಟಿಯ ಹಳಿಯಾಳದಲ್ಲಿರುವ ವಿಶ್ವನಾಥರಾವ್ ದೇಶಪಾಂಡೆ ಗ್ರಾಮೀಣ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ಹಿರಿಯ ನಾಗರಿಕರಿಗಾಗಿ ಒಂದು ದಿನದ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ಇತ್ತಿಚೆಗೆ ಏರ್ಪಡಿಸಿದರು.
ಡಾ. ಎ.ಹೆಚ್. ಮಿಶ್ರಿಕೋಟಿಯವರು ಮಾತನಾಡಿ, ದಿನದಿಂದ ದಿನಕ್ಕೆ ಮಾಹಿತಿ ತಂತ್ರಜ್ಞಾನದ ಅರಿವಿನ ಅವಶ್ಯಕತೆಯು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಮಹಾವಿದ್ಯಾಲಯವು ಹಿರಿಯ ನಾಗರಿಕರು ಹಾಗೂ ಎಲ್ಲ ವಯೋಮಾನದವರಿಗಾಗಿ ಇಂಥ ತರಬೇತಿಯನ್ನು ಆಯೋಜಿಸುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಹಳಿಯಾದ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಎಮ್. ಸಾವಂತÀ ಅವರು ಹಾಗೂ ಸದಸ್ಯ ಜಿ.ಡಿ.ಗಂಗಾಧರ ಭಾಗವಹಿಸಿದ್ದರು. ಮಹಾವಿದ್ಯಾಲಯದ ಆಡಳಿತ ಮುಖ್ಯಸ್ಥರಾದ ಮುಕ್ತಾಯ ಸಮಾರಂಭದಲ್ಲಿ ಉಪಸ್ಥಿತರಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿ.ವಿ. ಕಟ್ಟಿಯವರು ಭಾಗವಹಿಸಿದ ಹಿರಿಯ ನಾಗರಿಕರ ಉತ್ಸಾಹವನ್ನು ಪ್ರಶಂಸಿದರು. ಇದೇ ಸಂದರ್ಭದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರೊ. ದಾಮೋದರ ಹೋತ್ಕರ್ ಅವರು ಉಪಸ್ಥಿತರಿದ್ದರು.
ಪ್ರೊ.ಅಭಯ ಇಂಚಲ್, ಪ್ರೊ. ವಿಜೇತ ಸ್ವಾದಿ, ಪ್ರೊ. ಪ್ರಾಣೇಶ ಕೆ, ಪ್ರೊ. ಸಲೀಮ್ ಹೆಚ್ , ಪ್ರೊ. ರವೀಂದ್ರ ಪಿ, ಪ್ರೊ. ಆಕಾಶ್ ಕೆ, ಶ್ರೀ. ವಾದಿರಾಜ ಯು, ಶ್ರೀ ವಿನಾಯಕ ಕೆ, ಶ್ರೀ. ಜಗದೀಶ ಬಿ. ಹಾಗೂ ವಿದ್ಯಾರ್ಥಿಗಳಾದ ಶ್ರೇಯಾ ಡಿ, ಯಾಜ್ವಿನ್ ಟಿ. ಮತ್ತು ಶ್ವೇತಾ ಜಿ. ತರಬೇತಿಯನ್ನು ನೀಡಿದರು.
ಸುಮಾರು 50 ಕ್ಕೂ ಹೆಚ್ಚು ಹಿರಿಯ ನಾಗರಿಕರು ಸಕ್ರೀಯವಾಗಿ ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತರಬೇತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

loading...