ತೆಂಡೂಲ್ಕರ್ ದಾಖಲೆಯನ್ನು ಮುರಿದ ರೋಹಿತ್ ಶರ್ಮಾ

0
41
loading...

ಪೋರ್ಟ್ಎಲಿಜಬೆತ್  – ಕ್ರಿಕೆಟ್‌ ದೇವರು ಎಂದೇ ಖ್ಯಾತಿ ಪಡೆದಿರುವ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನು ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಮುರಿದು ಹಾಕಿದ್ದಾರೆ.
ನಿನ್ನೆ ಇಲ್ಲಿ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ 11 ಬೌಂಡರಿ, 4 ಸಿಕ್ಸ್‌ಗಳನ್ನು ಸಿಡಿಸಿ ಅಮೋಘ ಶತಕ ಸಿಡಿಸಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನು ಮುರಿದಿದ್ದಾರೆ.
ಅತೀ ಹೆಚ್ಚು ಸಿಕ್ಸ್‌ ಸಿಡಿಸುವ ಮೂಲಕ ರೋಹಿತ್‌ ಶರ್ಮಾ ಸಚಿನ್‌ ದಾಖಲೆ ಮುರಿದಿರುವ ಭಾರತದ ಎರಡನೇ ಆಟಗಾರರಾಗಿದ್ದಾರೆ. ಅತೀ ಹೆಚ್ಚು ಸಿಕ್ಸ್‌ಗಳನ್ನು ಸಿಡಿಸಿರುವ ಮೊದಲನೇ ಆಟಗಾರ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಹೆಸರಲ್ಲಿ ಇದೆ. ಅವರು ಒಟ್ಟು 338 ಸಿಕ್ಸ್‌ಗಳನ್ನು ಬಾರಿಸಿದ್ದಾರೆ. ರೋಹಿತ್‌ ಶರ್ಮಾ 265 ಸಿಕ್ಸ್‌ಗಳನ್ನು ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ. 264 ಸಿಕ್ಸ್‌ಗಳನ್ನು ಬಾರಿಸಿರುವ ಮಾಜಿ ನಾಯಕ ಸಚಿನ್‌ ತೆಂಡೂಲ್ಕರ್‌ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ 251 ಸಿಕ್ಸ್‌ ಸಿಡಿಸಿರುವ ಯುವರಾಜ್‌ ಸಿಂಗ್‌ ಇದ್ದರೆ, ಐದನೇ ಸ್ಥಾನವನ್ನು 247 ಸಿಕ್ಸ್‌ಗಳನ್ನು ಬಾರಿಸಿರುವ ಸೌರವ್‌ ಗಂಗೂಲಿ ಅಲಂಕರಿಸಿದ್ದಾರೆ.
ಐದನೇ ಏಕದಿನ ಪಂದ್ಯದಲ್ಲಿ ದ. ಆಫ್ರಿಕಾ ವಿರುದ್ಧ ಭಾರತ ತಂಡ 73 ರನ್‌ಗಳಿಂದ ಭರ್ಜರಿ ಜಯಗಳಿಸಿ ಸರಣಿ ಕೈವಶ ಮಾಡಿಕೊಂಡಿದೆ. ಕೊನೆಯ ಏಕದಿನ ಪಂದ್ಯ ಫೆಬ್ರವರಿ 16 ರಂದು ನಡೆಯಲಿದೆ.

loading...