ತೈವಾನ್ ನಲ್ಲಿ ಭಾರಿ ಭೂಕಂಪಕ್ಕೆ 8 ಮಂದಿ ಸಾವು

0
25
loading...

ಹುವಾಲೀನ್, ಫೆ.7-ತೈವಾನ್‍ನ ಹುವಾಲೀನ್ ನಗರದ ಮೇಲೆ ಎರಗಿದ ವಿನಾಶಕಾರಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೇರಿದ್ದು, 200ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ. ಉರುಳಿಬಿದ್ದ ಕಟ್ಟಡಗಳ ಭಗ್ನಾವಶೇಷಗಳ ಅಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಯುದ್ದೋಪಾದಿಯಲ್ಲಿ ಮುಂದುವರಿದಿದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ನಿನ್ನೆ ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಅನೇಕರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಭೂಕಂಪದ ರುದ್ರ ನರ್ತನಕ್ಕೆ ಅನೇಕ ಮನೆಗಳು, ಹೋಟೆಲ್‍ಗಳು ಮತ್ತು ಅಂಗಡಿ-ಮುಂಗಟ್ಟುಗಳು ನೆಲಸಮವಾಗಿದ್ದು, ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ.
ಹುವಾಲೀನ್-ತೈವಾನ್ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು. ಈ ಬಂದರು ನಗರಿ ನಯನ ಮನೋಹರ ಪೂರ್ವ ಕರಾವಳಿ ರೈಲು ಮಾರ್ಗ ಹಾಗೂ ವಿಶ್ವವಿಖ್ಯಾತ ಟೊರೊಕೊ ಕಣಿವೆಗೆ ಸಮೀಪದಲ್ಲಿದೆ.

loading...