ದಾಂಡೇಲಿ ತಾಲೂಕು ರಚನೆಯ ಶ್ರೇಯಸ್ಸು ದಾಂಡೇಲಿ ಜನತೆಗೆ ಸಲ್ಲಬೇಕು-ದೇಶಪಾಂಡೆ

0
37
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಬಹುವರ್ಷಗಳ ದಾಂಡೇಲಿ ತಾಲೂಕು ಕನಸು ಸಕಾರಗೊಂಡಿದೆ. ದಾಂಡೇಲಿ ತಾಲೂಕಾಗಿದೆ, ಮುಂದೇನು ? ಎಂಬ ಪ್ರಶ್ನೆಗೂ ಉತ್ತರವಾಗಿ ಹಲವಾರು ಅಗತ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎಲ್ಲ ರೀತಿಯಿಂದಲೂ ದಾಂಡೇಲಿಯನ್ನು ಮಾದರಿ ತಾಲೂಕನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಒಟ್ಟಿನಲ್ಲಿ ದಾಂಡೇಲಿ ತಾಲೂಕಿನ ಸಮಗ್ರ ಅಭಿವೃದ್ಧಿಯೆ ನಮ್ಮ ಮೂಲಮಂತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆಯವರು ಹೇಳಿದರು.
ಮುಖ್ಯಮಂತ್ರಿಗಳ ಮತ್ತು ನನ್ನ ನಡುವಿನ ಸ್ನೇಹ, ವಿಶ್ವಾಸವು ಇದಕ್ಕೆ ಪೂರಕವಾಗಿದೆ. ದಾಂಡೇಲಿ ತಾಲೂಕು ರಚನೆಗಾಗಿ ಆಗ್ರಹಿಸಿ ಹೋರಾಟ ಮಾಡಿದ ದಾಂಡೇಲಿ ತಾಲೂಕು ರಚನಾ ಸಮಿತಿಗೂ, ಪಕ್ಷಾತೀತವಾಗಿ ಬೆಂಬಲಿಸಿದ ಎಲ್ಲ ರಾಜಕೀಯ ಪಕ್ಷಗಳಿಗೂ ಮತ್ತು ಸಮಸ್ತ ದಾಂಡೇಲಿ ಜನತೆಗೆ ವಿಶೇಷ ಅಭಿನಂದನೆಗಳನ್ನು ದೇಶಪಾಂಡೆಯವರು ಸಲ್ಲಿಸಿ ಮಾತನಾಡಿದ ಅವರು ಚುನಾವಣಾ ಸಮಯದಲ್ಲಿ ದಾಂಡೇಲಿಯನ್ನು ತಾಲೂಕನ್ನಾಗಿ ಮಾಡುವುದಾಗಿ ವಾಗ್ದನ ನೀಡಿರುವುದನ್ನು ಮನಗಂಡು ಕಳೆದ ನಾಲ್ಕು ವರ್ಷಗಳಿಂದಲೂ ಅದಕ್ಕೆ ಪೂರಕವಾಗಿ ಹಲವಾರು ಕಾರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಎ.ಆರ್‌.ಟಿ.ಒ ಕಚೇರಿ, ಹೆಸ್ಕಾಂ ವಿಭಾಗೀಯ ಕಚೇರಿ, ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿರುವುದು ಇವೆಲ್ಲವೂ ದಾಂಡೇಲಿ ತಾಲೂಕು ರಚನೆ ಮಾಡುವ ನಿಟ್ಟಿನಲ್ಲಿ ಮಾಡಲಾಗಿತ್ತು.
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಚಂದ್ರಶೇಖರ ನಾಯ್ಕ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ರೇಣುಕೆ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಬ್ಯಾಕೋಡ, ದಾಂಡೇಲಿ ನಗರ ಸಭೆಯ ಉಪಾಧ್ಯಕ್ಷ ಮಹಮ್ಮದ ಫನಿಬಂದ್‌, ಹಳಿಯಾಳ ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ನಗರ ಸಭಾ ಸದಸ್ಯರುಗಳು, ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಹಳಿಯಾಳ ತಹಶೀಲ್ದಾರ್‌ ವಿದ್ಯಾದರ ಗುಳಗುಳಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಿಶೇಷ ತಹಶೀಲ್ದಾರ್‌ ಶೈಲೇಶ ಪರಮಾನಂದ ವಂದಿಸಿದರು. ಉಪನ್ಯಸಕ ಹನುಮಂತ ಕುಂಬಾರ ಕಾರ್ಯಕ್ರಮ ನಿರೂಪಿಸಿದರು.

loading...