ದುಡಿಮೆಗೆ ಮೊದಲ ಆದ್ಯತೆ ನೀಡಿ: ಗುಡಗುಡಿ

0
12
loading...

ಹಾನಗಲ್ಲ : ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ದಿನಗಳು ದಿವಾಳಿಯಾಗದಂತೆ ನಿಗಾ ವಹಿಸುವ ವೈಯಕ್ತಿಕ ಜವಾಬ್ದಾರಿಯನ್ನು ವಿದ್ಯಾರ್ಥಿಗಳೇ ನಿಭಾಯಿಸಿಕೊಳ್ಳಬೇಕು ಎಂದು ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಪಿ.ವಾಯ್‌.ಗುಡಗುಡಿ ಕರೆ ನೀಡಿದರು.
ಶುಕ್ರವಾUರ ಹಾನಗಲ್ಲಿನ ನ್ಯೂ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೌರವಯುತ ಜೀವನಕ್ಕೆ ದುಡಿಮೆಯೇ ಮೊದಲ ಆದ್ಯತೆಯಾಗಬೇಕು. ಅದಕ್ಕಾಗಿ ಅಗತ್ಯ ಶಿಕ್ಷಣ ಉದ್ಯೋಗದ ಅಗತ್ಯವೂ ಇದೆ. ಕಾಲ ಹರಣವಿಲ್ಲದೆ ಬದುಕನ್ನು ಕಟ್ಟಿಕೊಳ್ಳುವ ಸಮಯ ಪ್ರಜ್ಞೆ ಇರಲಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎ.ಎಸ್‌.ಬಳ್ಳಾರಿ, ಹಾನಗಲ್ಲಿನಲ್ಲಿ ಶೈಕ್ಷಣಿಕ ಹಿತಕ್ಕೆ ಆರಂಭವಾದ ಮೊಟ್ಟ ಮೊದಲ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘ ಈಗ ಎಲ್ಲ ಹಂತದ ಶೈಕ್ಷಣಿಕ ದಾಸೊಹಕ್ಕೆ ಸಿದ್ಧವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಮ್ಮ ಅಂಗ ಸಂಸ್ಥೆಯಾದ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ತರಗತಿಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಸಂಸ್ಥೆಯ ನಿರ್ದೆಶಕರಾದ ಕಾಶಿನಾಥ ನ್ಯಾಮತಿ, ನಾಗೇಂದ್ರ ಬಮ್ಮನಹಳ್ಳಿ, ಮಹೇಶ ಕಾಗಿನೆಲ್ಲಿ, ವಿನೋದ ಅಚಲಕರ, ಸುರೇಶ್‌ ರಾಯ್ಕರ, ಹನುಮಂತಪ್ಪ ಮಲಗುಂದ, ಹನುಮಂತಪ್ಪ ಕಾಮನಹಳ್ಳಿ, ಮಧುಮತಿ ಪೂಜಾರ, ಆರ್‌.ಎಂ.ತಿತ್ತಿ, ಭದ್ರಪ್ಪ ಅಗಸಿಮನಿ, ಬಿ.ಐ.ಹುನಗುಂದ, ಜಿ.ಬಿ.ಶೇಷಗಿರಿ, ಜಿ.ಚಿರಂಜೀವಿ, ಭಾಗ್ಯಲಕ್ಷ್ಮೀ ಹುರಳೀಕುಪ್ಪಿ, ಮಧುಮತಿ ಜಂಗಳಿ ಪಾಲ್ಗೊಂಡಿದ್ದರು.
ಕಳೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.93 ಪ್ರತಿಶತ ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ತಂದ ಕಮಲಾಕ್ಷಿ ಬಸಾಪುರ, ಪ್ರಿಯಾಂಕಾ ಹಂಚಿನಮನಿ, ಶುಷ್ಮಾ ಗಾಯವಾಡ, ಈರವ್ವ ಪಾಟೀಲ, ಶ್ವೇತಾ ಹುಳ್ಳಿಕಾಶಿ, ಅಶ್ವಿನಿ ಕಬ್ಬೂರ, ಮಲ್ಲಿಕಾರ್ಜುನ ಉಗ್ಗನವರ, ನಾಗರತ್ನಾ ಅಂಗಡಿ, ಪ್ರಥಮ ಪಿಯುಸಿಯ ಪೂಜಾ ಸಾವಕ್ಕನವರ, ತೃಪ್ತಿ ಕೋಳೂರ ಅವರನ್ನು ಗೌರವಿಸಲಾಯಿತು.
ಶಾಂಭವಿ ಪಾಟೀಲ, ಕಲಾವತಿ ಬಿ.ಡಿ. ಸಂಗಡಿಗರು ಪ್ರಾರ್ಥನೆ ಹಾಡಿದರು. ಪ್ರೊ.ಎ.ಎಚ್‌.ಹಳ್ಳಳ್ಳಿ ಸ್ವಾಗತಿಸಿದರು. ಪ್ರಾಚಾರ್ಯ ಅನಿತಾ ಹೊಸಮನಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ.ಎಫ್‌.ಎಸ್‌.ಕಾಳಿ ವಾರ್ಷಿಕ ವರದಿ ವಾಚನ ಮಾಡಿದರು. ಪ್ರೊ.ರವಿ ಜಡೆಗೊಂಡರ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಸಿ.ಚಿರಂಜೀವಿ ವಂದಿಸಿದರು.

loading...