ದೇವರ ದರ್ಶನದಿಂದ ಮನಸ್ಸಿಗೆ ಶಾಂತಿ: ಯಾವಗಲ್‌

0
16
loading...

ಕನ್ನಡಮ್ಮ ಸುದ್ದಿ-ನರಗುಂದ: ಧರ್ಮದ ಜಾಗೃತಿ ಸ್ಥಾನಗಳು ಮಠ ಮಂದಿರಗಳಾಗಿವೆ. ನಾವೆಲ್ಲ ದೇವರಲ್ಲಿ ನಂಬಿಕೆ ಇಡಬೇಕು. ಮನಸ್ಸಿನ ಶಾಂತಿ ಮತ್ತು ನೆಮ್ಮದಿ ಮಂದಿರಗಳ ದರ್ಶನಗಳಿಂದ ಅವೆಲ್ಲ ದೊರೆಯುತ್ತವೆ ಎಂದು ಶಾಸಕ ಬಿ.ಆರ್‌. ಯಾವಗಲ್‌ ತಿಳಿಸಿದರು.
ಸ್ಥಳೀಯ ಪಂಚಗ್ರಹ ಗುಡ್ಡದ ಸಿದ್ದೇಶ್ವರ ಜಾತ್ರಾಮಹೋತ್ಸವದ ರವಿವಾರ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾವಹಿಸಿ ಮಾತನಾಡಿದ ಅವರು, ನಮ್ಮ ಜೀವನದ ಗುರಿಯನ್ನು ನಾವೆಲ್ಲ ಮೊದಲು ಅರಿತುಕೊಳ್ಳಬೇಕು. ಉತ್ತಮವಾದ ಧೋರಣೆಗಳೊಡನೆ ಜೀವನ ನಡೆಸಲು ಮುಂದಾಗಬೇಕು. ಒಂದು ಕುಟುಂಬ ಇನ್ನೊಂದು ಕುಟುಂಬದ ಜೊತೆ ಸಾಮರಸ್ಯವಾಗಿ ನಡೆದ್ದುಕೊಳ್ಳಭೇಕು. ಜಾತಿ ದ್ವೇ಼ಷ ಭಾವಣೆಗಳಿಂದ ಜಗತ್ತಿನಲ್ಲಿ ಏನನ್ನೂ ಸಾಧನೆಮಾಡಿದಂತಾಗುವುದಿಲ್ಲ. ಈ ಕಾರಣದ ಹಿನ್ನಲೆಯಲ್ಲಿ ಧರ್ಮವನ್ನು ಉಳಿಸಿ ಬೆಳೆಸುವ ಮಹತ್ವದ ನಿರ್ಧಾರಗಳನ್ನು ಭಕ್ತರು ಎಂದಿಗೂ ಮುಂದುವರೆಸಿಕೊಂಡ ಹೋಗಬೇಕು. ಧಾರ್ಮಿಕ ಮಂದಿರಗಳ ಉದ್ದಾರಕ್ಕಾಗಿ ಸರ್ಕಾರ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಬಿಡುಗಡೆಗೊಳಿಸಿದ ಬಜೆಟ್‌ನಲ್ಲಿ ಮಠ ಮಂದಿರಗಳ ಉದ್ದಾರಕ್ಕಾಗಿ ವಿವಿಧಯೋಜನೆಗಳನ್ನು ಜಾರಿ ತರಲಾಗಿದೆ ಎಂದು ತಿಳಿಸಿದರು.
ಅವರಾದಿ ಫಲಹಾರೇಶ್ವರ ಮಠದ ಶಿವಮೂರ್ತಿ ಸ್ವಾಮಿಗಳು ಮಾತನಾಡಿ, ಜಾತಿ,ಮಥ,ಪಂಥಗಳನ್ನು ನಾವೆಲ್ಲ ಒಂದು ಎಂದು ಭಾವಿಸಿ ಜೀವನ ನಡೆಸಬೇಕು. ಈ ಹಿಂದೆ ಶರಣರು ತಮ್ಮ ಅನೇಕ ವಚನಗಳ ಹಾಗೂ ಪುರಾಣಗಳ ಮೂಲಕ ನಮ್ಮ ಸದ್ದರ್ಮಗಳ ಕುರಿತು ವಿವರಿಸಿದ್ದಾರೆ. 12 ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಭಕ್ತರಿಗೆ ಬಾಳಿನಲ್ಲಿ ಹೇಗಿರಬೇಕೆಂದು ತಿಳಿಸಿಕೊಟ್ಟಿದ್ದಾರೆ. ಅವರ ಆದರ್ಶಗಳನ್ನು ನಾವೆಲ್ಲ ಪರಿಪಾಲಿಸಲು ತಿಳಿಸಿದರು.
ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮಿಗಳು, ಗುರುಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಶಿದ್ದಲಿಂಗ ಶಿವಾಚಾರ್ಯರು, ಬಾಬೂಸಾಬ ಜಮಾದಾರ, ರಾಜುಗೌಡ ಕೆಂಚನಗೌಡ್ರ, ಎಸ್‌.ಡಿ. ಕೊಳ್ಳಿಯವರ, ಎಂ.ಬಿ. ಅರಹುಣಸಿ, ರಾಜು ಕಲಾಲ, ದ್ಯಾಮಣ್ಣ ಸವದತ್ತಿ, ರಮೇಶಗೌಡ ಕರಕನಗೌಡ್ರ, ವಿಠಲ ಶಿಂಧೆ, ದತ್ತಕ ಮಲ್ಲನಗೌಡ್ರ, ಬಸಪ್ಪ ಸವದತ್ತಿ, ಜಿ.ಬಿ. ಹಿರೇಮಠ, ಶಾಂತನಗೌ ಹನುಮಂತಗೌಡ್ರ, ಮಲ್ಲನಗೌಡ ಹಿರೇಗೌಡ್ರ, ತಮ್ಮನಗೌಡ ಪಾಟೀಲ, ನಾಗನಗೌಡ ಕೆಂಚನಗೌಡ್ರ, ಸಿದ್ದನಗೌಡ ಪಾಟೀಲ, ಪ್ರಭು ಪಾಟೀಲ, ಚಂದ್ರಗೌಡ ಪಾಟೀಲ ಉಪಸ್ಥಿತರಿದ್ದರು. ಶಶಿಧರ ಶಾಸ್ತ್ರಿಗಳು, ಸಂಗಮೇಶ್ವರ ಗವಾಯಿಗಳಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ಆರ್‌.ಬಿ. ಚಿನಿವಾಲರ ನಿರೂಪಿಸಿದರು.

loading...