ದೇಹಧಾಡ್ಯ ಸ್ಪರ್ಧೆಯಲ್ಲಿ ಗ್ರಾಮೀಣ ಪ್ರತಿಭೆಗಳು

0
24
loading...

ಕನ್ನಡಮ್ಮ ಸುದ್ದಿ-ಖಾನಾಪುರ: ಪಟ್ಟಣದ ಬಸವೇಶ್ವರ ವೃತ್ತದ ಬಳಿಯ ಮಲಪ್ರಭಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಖಾನಾಪುರ ವ್ಯಾಯಾಮ ಮಂದಿರದ ಪ್ರಾಯೋಜಕತ್ವದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ದೇಹಧಾಡ್ಯ ಸ್ಪರ್ಧೆಗಳು ಜರುಗಿದವು. ಸ್ಪರ್ಧೆಗಳನ್ನು ಶಾಸಕ ಅರವಿಂದ ಪಾಟೀಲ ಉದ್ಘಾಟಿಸಿದರು. ಸ್ಪರ್ಧೆಯಲ್ಲಿ ಖಾನಾಪುರ ಹಾಗೂ ಬೆಳಗಾವಿ ತಾಲೂಕುಗಳ 80ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧಿಗಳನ್ನು ದೇಹದ ತೂಕದ ಆಧಾರದ ಮೇಲೆ 6 ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು.
ಐದು ಸುತ್ತುಗಳ ಹಣಾಹಣಿಯ ಬಳಿಕ ತಾಲೂಕು ಮಟ್ಟದ ಖಾನಾಪುರ ಶ್ರೀ ಪ್ರಶಸ್ತಿಗೆ ವಿನೋದ ಪಾಟೀಲ ಭಾಜನರಾದರು. ಜಿಲ್ಲಾ ಮಟ್ಟದ ಮಲಪ್ರಭಾ ಶ್ರೀ ಪ್ರಶಸ್ತಿಗೆ ತಾನಾಜಿ ಚೌಗುಲೆ ಹಾಗೂ ಜೈ ಬಜರಂಗ ಬಲಿ ಶ್ರೀ ಪ್ರಶಸ್ತಿಗೆ ಸಚಿನ ರೇಮಾಣಿ ಭಾಜನರಾದರು. ಪ್ರಶಸ್ತಿ ವಿಜೇತ ದೇಹಧಾಡ್ಯ ಪಟುಗಳಿಗೆ ಪ್ರಶಸ್ತಿ ಫಲಕ, ಪಾರಿತೋಷಕ ಮತ್ತು ನಗದು ಬಹುಮಾನ ನೀಡಿ ಸತ್ಕರಿಸಲಾಯಿತು. ಬೆಳಗಾವಿ ಜಿಲ್ಲಾ ಬಾಡಿ ಬಿಲ್ಡಿಂಗ್‌ ಅಸೋಶಿಯೇಶನ್‌ ವತಿಯಿಂದ ರಾಜೇಶ ಲೋಹಾರ, ಎಂ.ಕೆ ಗುರವ, ವಾಸುದೇವ ಸಾಖಳಕರ, ಅನಂತ ಅಮಸೋಲೆ, ಸುನೀಲ ಪವಾರ, ಸುನೀಲ ರಾವುತ ಮತ್ತಿತರರು ಸ್ಪರ್ಧೆಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ವಿವಿಧ ಹಂತಗಳಲ್ಲಿ ಜಯಗಳಿಸಿದ ಸ್ಪರ್ಧಿಗಳಿಗೆ ಬಹುಮಾನಗಳನ್ನು ಶಾಸಕ ಅರವಿಂದ ಪಾಟೀಲ, ಅಜೀಂ ತೇಲಗಿ, ಪ್ರಕಾಶ ದೇಶಪಾಂಡೆ, ಬಾಳಾಸಾಹೇಬ ಶೇಲಾರ, ಆನಂದ ವಾಝ್‌, ರಾಜು ಫಾಸಲಕರ, ಸಾವಿಯೋ ಪೆರೇರಾ, ಸುರೇಶ ದೇಸಾಯಿ ವಿತರಿಸಿದರು. ಈ ಸಂದರ್ಭದಲ್ಲಿ ಧನಶ್ರೀ ಸರ್‌ದೇಸಾಯಿ, ರಾಹುಲ ಸಾವಂತ, ಕಿರಣ ಪಾಟೀಲ, ವಿನಾಯಕ ಸಾವಂತ, ಸಂತೋಷ ಚಿನಿವಾಲ, ಮಾರುತಿ ಗಣಾಚಾರಿ ಮತ್ತಿತರರು ಇದ್ದರು. ಪಿರಾಜಿ ಕುರಾಡೆ ಕಾರ್ಯಕ್ರಮ ನಿರೂಪಿಸಿದರು.

loading...