ನವಶಕ್ತಿ ಸಮಾವೇಶ ಕಾರ್ಯಕರ್ತರಲ್ಲಿ ಹೊಸ ಶಕ್ತಿ ನೀಡುತ್ತದೆ: ಶಾಸಕ ವಿಶ್ವನಾಥ

0
30
loading...

 

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ನವಶಕ್ತಿ ಸಮಾವೇಶ ನಮ್ಮ ಪ್ರಮುಖ ಕಾರ್ಯಕರ್ತರಲ್ಲಿ ಹೊಸ ಶಕ್ತಿಯನ್ನು ತುಂಬುವದರ ಜೋತೆಗೆ ಬರುವ ವಿಧಾನ ಸಭೆ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಬೈಲಹೊಂಗಲ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಭೇರಿ ಬಾರಿಸಲು ಸನಧರನ್ನಾಗಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರಾದ ಡಾ. ವಿಶ್ವನಾಥ ಪಾಟೀಲ ಹೇಳಿದರು.
ಪಟ್ಟಣದ ಬಾಯಪಾಸ್ ರಸ್ತೆಯ ಶ್ರೀ. ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ನವಶಕ್ತಿ ಸಮಾವೇಶದ ಅಧ್ಯಕ್ಷತೆವಹಿಸಿ ಮಾತನಾಡಿ, ಚುನಾವಣೆ ಎದುರಿಸುವದು ಯಾವುದೊ ಒಂದು ಕೊಣೆಯಲ್ಲಿ ಕುಳಿತು ಮಾಡುವ ಕೆಲಸ ಅಲ್ಲಾ. ವೇದಿಕೆಗಳ ಮೇಲೆ ಭಾಷಣ ಮಾಡಿದರೆ ಚುಣಾವನೆ ಸಂಪೂರ್ಣವಾಗಿ ಎದುರಿಸಲು ಸಾಧ್ಯವಿಲ್ಲ. ಬಿಜೆಪಿ ಕೆಡರ್ ಬೆಸ್ ಪಾರ್ಟಿ ಎಂಬುವದು ಎಲ್ಲರಿಗೂ ಗೊತ್ತು. ಬಿಜೆಪಿ ಹೊರತು ಪಡಿಸಿದರೆ ಎಲ್ಲ ಪಕ್ಷಗಳಲ್ಲಿ ಕೇಂದ್ರ ಕಛೇರಿಗಳಲ್ಲಿ ಕುಳಿತು ನಿರ್ಧರಿಸುವ ನಿರ್ಧಾರಗಳಂತೆ ಕಾರ್ಯಕರ್ತರು ನಡೆದುಕೊಳ್ಳಬೇಕು. ಆದರೆ ಬಿಜೆಪಿ ಯಲ್ಲಿ ಜನಸಾಮಾನ್ಯರ ಅಳಲನ್ನು ಹಳ್ಳಿಯಿಂದ ದೆಹಲಿಯವರೆಗೆ ಕೊಂಡಯ್ಯುವ ಪ್ರಣಾಳಿಕೆಗಳನ್ನು ಜನರಿಂದ ತಯಾರಿಸಿದ್ದು ಪ್ರಜಾಪ್ರಭುತ್ವದ ಮೊದಲ ಹೆಜ್ಜೆಯಾಗಿದೆ ಎಂದರು.

ಕಾರ್ಯಕರ್ತರ ಕಾರ್ಯ ಪ್ರತಿಯೊಂದು ಭೂತಿನಲ್ಲಿ ಹೇಗೆ ನಡೆಯುತ್ತದೆಯೋ ಹಾಗೆ ಈ ಕ್ಷೇತ್ರದ ಫಲಿತಂಶ ನಿರ್ಧಾರವಾಗುತ್ತದೆ. ಪಕ್ಷಕ್ಕೆ ಬೆನ್ನೆಲಬು ಎಂದರೆ ತಾವುಗಳು ಎಂಬುವದನ್ನ ಯಾವಾಗಲು ಯಾರು ಮರೆಯುವಂತಿಲ್ಲ. ಒಂದು ಭೂತಿನಲ್ಲಿ ಕನಿಷ್ಟ 200 ರಿಂದ 250 ಮನೆಗಳು ಇರುವದು ಸ್ವಾಭಾವಿಕ. ಅದರಲ್ಲಿ ನಮ್ಮ ಭೂತ ಮಟ್ಟದ ಕಾರ್ಯಕರ್ತರು ಮತದಾನ ಪಟ್ಟಿಯ ಪೇಜಿಗೊಬ್ಬರಂತೆ ಒಬ್ಬರು, ಪಕ್ಷದ ಪದಾಧಿಕಾರಿಗಳು, ಭೂತ ಸಶಕ್ತ ಪ್ರಮುಖರು, ವಾಟ್ಸಾಪ್ ಗುಂಪಿನ ಪ್ರಮುಖರು, ಹೀಗೆ ಒಂದು ಭೂತಿನಲ್ಲಿ ಸುಮಾರು ನೂರಕ್ಕು ಹೆಚ್ಚು ಕಾರ್ಯಕರ್ತರ ಪಡೆ ಇದೆ.
ಇವರು ತಮ್ಮದೊಂದು ಮನೆಯ ಜೊತೆಗೆ 5 ರಿಂದ 10 ಮನೆಗಳನ್ನು ದತ್ತು ತಗೆದುಕೊಂಡು ತಮಗೆ ಬಿಡುವಿನ ಸಮಯದಲ್ಲಿ ಅವರ ಜೋತೆ ಆತ್ಮೀಯವಾದ ಸಂಪರ್ಕ ಹೊಂದಿ, ಪಕ್ಷದ ಸಾಧನೆಗಳನ್ನು, ಹಾಗೂ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ ಮಾಡಿರುವ ಅಭಿವೃದ್ದಿ ಕೆಲಸ, ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರ ಮಾಡಿದ ಜನಪರ ಕಾರ್ಯಗಳು, ನರೇಂದ್ರ ಮೋದಿಜಿ ಅವರು ಮಾಡಿದ ನೂರಾರು ಜನಪರ ಕಾರ್ಯಗಳಾದ, ಬೇಟಿ ಪಡಾವೋ ಬೇಟಿ ಬಚಾವೋ, ಉಜ್ವಲಾ ಯೋಜನೆ, ದಿನದಯಾಳ ಉಪಾಧ್ಯಾಯ ಜ್ಯೋತಿ ಯೋಜನ, ಸ್ಮಾರ್ಟಸಿಟಿ, ಸ್ವಛ ಭಾರತ ಅಭಿಯಾಣ, ಮುದ್ರಾ ಯೋಜನಾ, ರೈತರಿಗಾಗಿ ಗೋಬರ ಗ್ಯಾಸ್, ಕೃಷಿ ಸಿಂಚಾಯಿ, ರೈತರನ್ನ ಸ್ವಾವಲಂಭನೆ ಮಾಡುವಲ್ಲಿ ಅವರ ಆದಾಯವನ್ನ 2022ರ ಹೊತ್ತಿಗೆ ದ್ವಿಗೂಣಗೊಳಿಸುವದು, ವಾರ್ಷಿಕ 12 ರೂಪಾಯಿಗಳಲ್ಲಿ 2ಲಕ್ಷ ಪರಿಹಾರ, ನದಿ ಜೋಡನೆ, ಫಸಲ ಭಿಮಾ ಯೋಜನೆಯಂತಹ ಅನೇಕ ಯೋಜನೆಗಳ ಬಗ್ಗೆ ಮುಂದೆ ಕರ್ನಾಟಕ ರಾಜ್ಯದಲ್ಲಿ ತಮ್ಮೆಲ್ಲರ ಸಹಕಾರ ಮತ್ತು ಪರಿಶ್ರಮದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವದು ನಿಶ್ಚಿತ. ಅಧಿಕಾರಕ್ಕೆ ಬಂದ ನಂತರ ಮಾಡಬಹುದಾದ ಕೆಲಸಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸವಾಗಬೇಕು. ರಾಜ್ಯದ ರೈತರ ಜಮೀನುಗಳಿಗೆ ನೀರಾವರಿ ಮಾಡಲು ಸುಮಾರು 1ಲಕ್ಷ ಕೋಟಿ ರೂಪಾಯಿಗಳನ್ನು ತರುವ ಯೋಜನೆ ತಂದು ರಾಜ್ಯದ ರೈತರ ಜೀವನ ಸಮೃದ್ದಿಗೊಳಿಸಲಾಗುವದು. ಈ ಎಲ್ಲ ವಿಷಯಗಳನ್ನು ತಾವು ಪ್ರತಿಯೊಬ್ಬ ಮತದಾರರಿಗೆ ತಿಳಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

ದೀಪಾ ಪತ್ತಾರ ಪ್ರಾರ್ಥಿಸಿದರು. ಮುಕುಂದ ಕುಲಕರ್ಣಿ ವಂದೇ ಮಾತರಂ ಗೀತೆಯನ್ನು ಹಾಡಿದರು. ಮಲ್ಲಿಕಾರ್ಜುನ ಗೌಡತಿ ಸ್ವಾಗತಿಸಿದರು. ಎಪಿಎಮ್‍ಸಿ ಸದಸ್ಯ ಎಫ್ ಎಸ್ ಸಿದ್ಧನಗೌಡರ ನಿರೂಪಿಸಿದರು. ವೇದಿಕೆಯ ಮೇಲೆ ಮಂಡಲ ಅಧ್ಯಕ್ಷ ಮಡಿವಾಳಪ್ಪಾ ಹೋಟಿ, ಜಿಪಂ ಸದಸ್ಯ ಈರಣ್ಣ ಕರಿಕಟ್ಟಿ, ತಾಪಂ ಉಪಾಧ್ಯಕ್ಷ ಬಸನಗೌಡ ಪಾಟೀಲ, ಆಯ್.ಎಲ್.ಪಾಟೀಲ, ಸೋಸಿಯಲ್ ಮೀಡಿಯಾ ಉಸ್ತುವಾರಿ ರಾಮ ಪುನೀತ ಪಂಡಿತ ಜಿ, ಬಸವರಾಜ ಮೂಗಿ, ಜಿಲ್ಲಾ ರೈತ ಮೊರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ದುಗ್ಗಾಣಿ, ನಿಂಗಪ್ಪ ಚೌಡಣ್ಣವರ, ವಿರೇಶ ಹೊಳೆಪ್ಪನವರ, ಬಿ.ಎಮ್.ಗೌಡತಿ, ಮಹೇಶ ಹರಕುಣಿ, ರಾಮನಗೌಡ ಪಾಟೀಲ, ಎಫ್.ವಾಯ್.ಬೈರಣ್ಣವರ, ರತ್ನಾ ಗೋಧಿ, ಶ್ರೀಶೈಲ ಯಡಳ್ಳಿ, ವಿಸ್ತಾರಕ ಶಿವಾನಂದ ಹಿರೇಮಠ, ಎಮ್.ಎಸ್. ರಾಯನಾಯ್ಕರ ಮಂಡಲ ಎಲ್ಲ ಮೋರ್ಚಾ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕ ಪಂಚಾಯತ ಸದಸ್ಯರು, ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಸಾವಿರಾರು ಕಾರ್ಯಕರ್ತರು, ಯುವಕರು, ಭೂತ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...