ನಾನು ಕೂಡ ಕಾಂಗ್ರೆಸನಿಂದ ಟಿಕೇಟ ಆಕಾಂಕ್ಷಿ:ಹುಣಚಾಳಕರ್

0
29
loading...

ನಾನು ಕೂಡ ಕಾಂಗ್ರೆಸನಿಂದ ಟಿಕೇಟ ಆಕಾಂಕ್ಷಿ:ಹುಣಚಾಳಕರ್

ಕನ್ನಡಮ್ಮ ಸುದ್ದಿ

ಸಂಕೇಶ್ವರ 17:ಸತತ ಹತ್ತು ವರುಷದಿಂದ ಸತತ ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದೆನೆ ಬರುವ ವಿಧಾನ ಸಭೆ ಚುನಾವಣೆಯಲ್ಲಿ ಹುಕ್ಕೇರಿ ಮತ ಕ್ಷೇತ್ರದ ಕಾಂಗ್ರೇಸ ಪಕ್ಷದಿಂದ ಸ್ಪರ್ಧೆಗೆ ನಾನು ಕೂಡ ಟಿಕೇಟ ಆಕಾಂಕ್ಷಿ ಎಂದು ಕಾಂಗ್ರೆಸ್ ಪಕ್ಷದ ಸಂಕೇಶ್ವರ ಬ್ಲಾಕ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ್ಷರಾದ ನಭಿಸಾಬ್ ಹುಣಚಾಳಕರ್ ಹೇಳಿದರು.

ಶನಿವಾರ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಹುಕ್ಕೇರಿ ಮತ ಕ್ಷೇತ್ರದಲ್ಲಿ ಕಳೆದ 40 ವರುಷದಿಂದ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ಪ್ರಾದಿನಿದ್ಯ ದೊರೆತಿಲ್ಲ ಹುಕ್ಕೇರಿ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿವೆ.ಆದ್ದರಿಂದ ಸತತ ಹತ್ತು ವರುಷದಿಂದ ಕಾಂಗ್ರೆಸ್ ಪಕ್ಷದಲ್ಲಿ ನಾನು ಪ್ರಾಮಾಣಿಕವಾಗಿ ದುಡಿದಿದ್ದೆನೆ,ಕಳೆದ ಐದು ವರುಷದಿಂದ ಸಂಕೇಶ್ವರ ಪುರಸಭೆಗೆ ನಾಮ ನಿರ್ಧೆಶನ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದೆನೆ. ಈ ಬಾರಿ ಮುಸ್ಲಿಂ ಅಭ್ಯರ್ಥಿಗಳಿಗೆ ಬೆಳಗಾವಿ ಜಿಲ್ಲೆ ಕನಿಷ್ಠ ಮೂರು ಟಿಕೇಟ್ ಕಾಂಗ್ರೆಸ್ ಪಕ್ಷದಿಂದ ನೀಡ ಬೇಕು ಹುಕ್ಕೇರಿ ಕ್ಷೇತ್ರದಲ್ಲಿ ಸ್ಪರ್ಧೆಗೆ ನಾನು  ಕೂಡ ಟಿಕೇಟಿ ಆಕಾಂಕ್ಷಿಯಾಗಿದ್ದಿನೆ.ಈ ಬಾರಿ ಹುಕ್ಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ವಾತಾವರಣೆವಿದ್ದ ಪಕ್ಷದ ನಾಯಕರು ಸೂಕ್ತ ಗೆಲ್ಲುವ ಅಭ್ಯರ್ಥಿಗೆ ಟಿಕೇಟ್ ನೀಡಬೆಕು ಎಂದು ಪತ್ರಿಕಾ  ಪ್ರಕಟಣೆಗೆ ತಿಳಿಸಿದರು.

loading...