ನಿವಾಸಿಗಳ ಹೆಸರಿಗೆ ಆಸ್ತಿ ನೊಂದಣಿ ಮಾಡುವಂತೆ ಒತ್ತಾಯ

0
33
loading...

ನಿವಾಸಿಗಳ ಹೆಸರಿಗೆ ಆಸ್ತಿ ನೊಂದಣಿ ಮಾಡುವಂತೆ ಒತ್ತಾಯ
ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಸಂತ ರೋಹಿದಾಸ ನಗರ,ಲಿಡಕರ್ ಕಾಲನಿ, ಉದ್ಯಮಭಾಗದಲ್ಲಿ ಕಳೆದ 35 ವರ್ಷಗಳಿಂದ ರಹವಾಸಿಯಾಗಿದ್ದು ಸದರಿ ಆಸ್ತಿಗಳನ್ನು ನಮ್ಮ ಹೆಸರಿಗೆ ಮಾಡಿಕೊಂಡಬೇಕೆಂದು ಆಗ್ರಹಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಾಬು ಜಗಜೀವನರಾವ ಕೈಗಾರಿಕಾ ಅಭಿವೃದ್ಧಿ ನಿಗಮ ವತಿಯಿಂದ ಕಳೆದ 35 ವರ್ಷಗಳಿಂದ ಚಾಂಬಾರ ಉದ್ಯೋಗಿಗಳಾದ ನಮಗೆ ಮನೆಗಳನ್ನು ಕೋಟಿದ್ದಾರೆ. ಆದರೆ ಸದರಿ ಮನೆ ಜಾಗೆಯನ್ನು ಇದುವರೆಗೂ ನಮ್ಮ ಹೆಸರಿನಲ್ಲಿ ಮಾಡಿಕೊಟ್ಟಿರುವುದಿಲ್ಲ. ಇದಕ್ಕೆ ಸಂಬಂಧ ಪಟ್ಟಂತೆ ನಾವು ಅಭಿವೃದ್ಧಿ ನಿಗಮದವರನ್ನು ವಿಚಾರಣೆ ಮಾಡಿದರೆ ಮೊದಲು ನೀವು ಬುಡಾ ಕಚೇರಿಯಿಂದ ಎನ್‍ಓಸಿ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಿದ್ದಾರೆ. ಆದ ಕಾರಣ ಪರಿಶಿಷ್ಠ ಜಾತಿ ಹಾಗೂ ಕಾನೂನು ಪ್ರಕಾರ ಆಸ್ತಿಗಳನ್ನು ನಮ್ಮ ಹೆಸರಿಗೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಬುಡಾ ಆಯುಕ್ತರಿಗೆ ಸದರಿ ಆಸ್ತಿಯ ಕುರಿತು ಎನ್ ಓಸಿ ನೀಡಲು ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಹವಾಸಿಗಳಾದ ದುರ್ಗೇಶ ಮೇತ್ರಿ, ಶ್ರೀನಾಥ ಬಳವಡಿ, ಸಂಜಯ ಪವಾರ, ಅಮೀತ ಚವ್ಹಾಣ, ಮೋಹನ ಪವಾರ, ಪರಶರಾಮ್ ಜಾಧವ, ಪಾಂಡುರಂಗ ಪವಾರ, ಸುಭಾಷ ಕಾಳೆ, ಸಾರೀಕಾ ಸೇವಾಳೆ, ಸಂಜು ಕಾಂಬಳೆ ಸೇರಿದಂತೆ ಇತರರು ಹಾಜರಿದ್ದರು.

loading...