ನೀರಿನ ಸಮಸ್ಯೆ: ಜವಳದ ನಿವಾಸಿಗಳಿಂದ ಮನವಿ

0
21
loading...

ಕುಕನೂರ: ಪಟ್ಟಣದ ಜವಳ ಕಾಲೋನಿಯಲ್ಲಿರುವ ನೀರಿನ ಟ್ಯಾಂಕ್‌ಗೆ ನೀರು ಏರುತ್ತಿಲ್ಲ ಹಾಗು ವಾರ್ಡಿನಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದೆ, ಸಮಸ್ಯೆ ಬಗೆಹರಿಸಬೇಕು ಎಂದು ಜವಳದ ಕಾಲೋನಿಯ ನಿವಾಸಿಗಳು ಸೋಮವಾರ ಮನವಿ ಸಲ್ಲಿಸಿದರು.
ಪಟ್ಟಣದ 15ನೇ ವಾರ್ಡ ಜವಳ ಕಾಲೋನಿಯಲ್ಲಿ ಎರಡು ನೀರಿನ ಟ್ಯಾಂಕ್‌ಗಳು ಇದ್ದು, ನೀರಿನ ಟ್ಯಾಂಕ್‌ಗಳಿಗೆ ಸದ್ಯ ನೀರು ಏರುತ್ತಿಲ್ಲ. ಇದರಿಂದ ವಾರ್ಡಿನಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಅದಲ್ಲದೆ ಜವಳ ಕಾಲೋನಿಯಲ್ಲಿ ಈ ಹಿಂದೆ ಜವಳದ ಬಾವಿ ಹತ್ತಿರ ನಿರಂತರವಾಗಿ 24 ತಾಸು ನೀರು ಪೂರೈಕೆಗೆ ಇದ್ದ ನೀರಿನ ನಲ್ಲಿಗೆ ಈಗ ನೀರಿನ ಪೂರೈಕೆ ಸ್ಥಗೀತವಾಗಿದೆ. ಇದರಿಂದ ವಾರ್ಡಿನಲ್ಲಿ ಅತೀವ ನೀರಿನ ಸಮಸ್ಯೆ ಉಲ್ಬಣವಾಗಿದ್ದು, ಕೂಡಲೇ ಅಧಿಕಾರಿ ವರ್ಗÀದವರು ಮುತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸಿಕೊಡಬೇಕು. ಜವಳ ಬಾವಿಯ ಹತ್ತಿರ ನಲ್ಲಿ ನೀರನ್ನು ನಿರಂತವಾಗಿ ಒದಗಿಸಿಕೊಡಬೇಕು. ಟ್ಯಾಂಕ್‌ಗಳಿಗೆ ನೀರು ಏರುವಂತೆ ಕ್ರಮ ಕೈಗೊಳ್ಳಬೇಕು ಎಂದು ವಾರ್ಡಿನ ನಿವಾಸಿಗಳಾದ ಶಶಿ ಭಜೇಂತ್ರಿ, ಮಾರುತಿ ಭಜೇಂತ್ರಿ, ಆನಂದ ಜಿ.ಕೆ, ಅರ್ಜುನ ವಡ್ಡರ್‌, ಹಂಚಾಳಪ್ಪ, ಶ್ರೀಕಾಂತ, ಶಬ್ಬೀರ್‌, ಯಮನೂರಪ್ಪ ವಾಲ್ಮೀಕಿ, ಬಾಳಪ್ಪ ಮುಂತಾದವರು ಮನವಿ ಸಲ್ಲಿಸಿದರು.

loading...