ನೀರು ಒದಗಿಸದಿದ್ದರೆ ಪುರಸಭೆ ಮುಂದೆ ಧರಣಿ

0
21
loading...

ರಾಮದುರ್ಗ: ಪಟ್ಟಣದ ಭಾಗ್ಯನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿಯಾಗಿದ್ದು, ಕೂಡಲೆ ಬಗೆಹರಿಸಬೇಕು. ಇಲ್ಲದಿದ್ದರೆ ಪುರಸಭೆಯ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಸಿಪಿಎಂ ಮುಖಂಡರಾದ ಗೈಬು ಜೈನೆಖಾನ ಹಾಗೂ ನಾಗಪ್ಪ ಸಂಗೊಳ್ಳಿ ಎಚ್ಚರಿಕೆ ನೀಡಿದ್ದಾರೆ.
2015 ರ ಜೂನ್‌ ತಿಂಗಳಲ್ಲಿ ಸರಕಾರದ ಅಧಿಸೂಚನೆಯಂತೆ ಭಾಗ್ಯನಗರ ಪ್ರದೇಶವು ತುರನೂರ ಪಂಚಾಯತಿಯಿಂದ ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಪುರಸಭೆಗೆ ವ್ಯಾಪ್ತಿಗೆ ಒಳಪಟ್ಟ ನಂತರ ನೀರಿನ ಅಭಾವ ಹೆಚ್ಚಾಗಿದೆ. ಅಧಿಕಾರಿಗಳು ಒಂದೆರಡು ಸಲ ಬಂದು ಪರಿಶೀಲಿಸಿ ಅಲ್ಲಿಯ ಜನರಿಗೆ ನೀರು ಕೊಟ್ಟರಾದರೂ ಮೇಲಿಂದ ಮೇಲೆ ನೀರಿನ ಅಭಾವ ಉಂಟಾಗುತ್ತಲೇ ಇದೆ.
ಭಾಗ್ಯನಗರದಲ್ಲಿ ಸುಮಾರು 4000 ಜನಸಂಖ್ಯೆ ಇದೆ. ಇಲ್ಲಿಯ ಜನ ಶೇ.90 ರಷ್ಟು ಕೂಲಿಕಾರ್ಮಿಕರು ಇರುವುದರಿಂದ ಮುಂಜಾನೆಯಿಂದ ಸಂಜೆವರೆಗೆ ಕೂಲಿ ಕೆಲಸ ಬಿಟ್ಟು ನೀರಿಗಾಗಿ ಅಲೆದಾಡುವಂತಾಗಿದೆ. ಇದೆಲ್ಲ ಅಧಿಕಾರಿಗಳಿಗೆ ಚುನಾಯಿತ ಪ್ರತಿನಿಧಿಳಿಗೆ ಗೊತ್ತಿದ್ದರೂ ಮೌನ ವಹಿಸಿದ್ದಾರೆ. ಕೇಳಿದರೆ ಪೈಪ್‌ ಹಾಕುವ ಕೆಲಸ ನೆಡೆದಿದೆ. ಇನ್ನೇನು ನಾಳೆ, ನಾಡಿದ್ದು ನೀರು ಬರುತ್ತದೆ ಅಂತಾ ಸಮಾಧಾನದ ಮಾತು ಹೇಳಿ ಜಾರಿಕೊಳ್ಳುತ್ತಾರೆಂದು ಅವರು ಆರೋಪಿಸಿದರು.
ಭಾಗ್ಯನಗರದಲ್ಲಿ 200 ಕುಟುಂಬಗಳಿಗೆ ಮನೆಗಳಿಗೆ ನೆಲ್ಲಿಯ ವ್ಯವಸ್ಥೆ ಇದೆ. ಉಳಿದ ಕುಟಂಬಗಳು ಸಾರ್ವಜನಿಕ ನೆಲ್ಲಿಯಿಂದ ನೀರು ತುಂಬಬೇಕಾಗುತ್ತದೆ. ಇತ್ತಿಚೆಗೆ ಸಾರ್ವಜನಿಕ ನೆಲ್ಲಿಯಿಂದ ನಾಲ್ಕು ತಿಂಗಳಿಂದ ನೀರು ಬಂದಿಲ್ಲ. ಆದ್ದರಿಂದ ಸರಿಯಾಗಿ ನೀರು ಪೂರೈಕೆ ಆಗದೇ ಇದ್ದಲ್ಲಿ ಹೋರಾಟ ಅನುವಾರ್ಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

loading...