ನೂತನ ತಂತ್ರಜ್ಞಾನದ ಮೂಲಕ ರಸ್ತೆಗಳ ಅಭಿವೃದ್ಧಿ: ಪಿ.ರಾಜೀವ್‌

0
23
loading...

ಕನ್ನಡಮ್ಮ ಸುದ್ದಿಹಾರೂಗೇರಿ 17: ನನ್ನ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ರಸ್ತೆಗಳನ್ನು ಈಗಾಗಲೇ ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗಿದ್ದು, ಇನ್ನಿತರ ಕೆಲವೇ ಕೆಲವು ಗ್ರಾಮೀಣ ರಸ್ತೆಗಳು ಉಳಿದಿದ್ಧು, ಅವುಗಳ ಅಭಿವೃದ್ಧಿಗೆ ಶೀಘ್ರದಲ್ಲಿಯೇ ಚಾಲನೆ ನೀಡುವ ಜೊತೆಗೆ ಕುಡಚಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧನೆಂದು ಶಾಸಕ ಪಿ.ರಾಜೀವ್‌ ಹೇಳಿದರು. ಹಾರೂಗೇರಿ ಪುರಸಭೆ ವ್ಯಾಪ್ತಿಯ ಕುರಬಗೋಡಿ ಹತ್ತಿರ ಕರ್ನಾಟಕ ನೀರಾವರಿ ನಿಗಮ ನಬಾರ್ಡ ಯೋಜನೆಯಡಿ ಅಂದಾಜುಮೊತ್ತ 1.08 ಕೋಟಿ ವೆಚ್ಚದಲ್ಲಿ ಬೀರಪ್ಪನ ಮಡ್ಡಿಯಿಂದ ಹಿಡಕಲ್‌ ರಸ್ತೆಯವರೆಗಿನ ರಸ್ತೆ ಸುಧಾರಣೆ ಮಾಡುವ ಕಾಮಗಾರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕುಡಚಿ ಮತಕ್ಷೇತ್ರದ ಹಿಡಕಲ್‌ ಬಸ್ತವಾಡ ರಸ್ತೆ ಕಾಮಗಾರಿಗೆ ಈಗಾಗಲೇ 4.31 ಕೋಟಿ ಅನುದಾನ ಮಂಜೂರಾಗಿದ್ದು, ಈ ರಸ್ತೆಯು ವಿಶೇಷವಾಗಿ ನೂತನ ತಂತ್ರಜ್ಞಾನ ಕಾವೇರಿ ಪಾಲಿಮರ್‌ ರಾಸಾಯಿನಿಕದಿಂದ ಕೂಡಿರಲಿದೆ ಎಂದು ಶಾಸಕ ಪಿ.ರಾಜೀವ್‌ ತಿಳಿಸಿದರು.ಈ ಸಂದರ್ಭದಲ್ಲಿ ಜೆಎಲ್‌ಬಿಸಿ ಸಹಾಯಕ ಕಾರ್ಯನಿರ್ವಾಹಕ ಇಂಜೀನಿಯರ ಎಮ್‌.ಟಿ ನೇಮಗೌಡ, ಗುತ್ತಿಗೆದಾರ ಹಣಮಂತ ವೈ, ಸೊನ್ನದ, ಪುರಸಭೆ ಸದಸ್ಯ ಸಂತೋಷ ಶಿಂಗಾಡಿ, ಹುಸೇನಸಾಬ ಜಮಾದರ, ಬಸವರಾಜ ಠಕ್ಕಣ್ಣವರ, ರಾಮಣ್ಣಾ ಕುರಿ, ಹಣಮಂತ ಯಲಶೆಟ್ಟಿ, ಬುರಾನಸಾಬ ಶೇಖ, ಭುಜಬಲಿ ಚಿಮ್ಮಡ, ಹಣಮಂತ ಕುರಿ, ಭೀಮು ಹಾಡಕಾರ, ಕಲ್ಲಪ್ಪ ಬನಾಜ, ಶಿಂಗಾಡಿ ಹಾಡಕಾರ, ನಿಂಗಪ್ಪ ಜಂಬಗಿ, ಅಜ್ಜಪ್ಪ ಕುರಿ, ಬನಪ್ಪ ಅಸ್ಕಿ, ತಮ್ಮಾಣಿ ಕುರಿ, ಮಾಳು ಹಾಡಕಾರ, ಕರೆಪ್ಪಾ ಕನಕಿಕೋಡಿ, ಯಲ್ಲವ್ವ ಹಾಡಕಾರ, ರೂಪಾ ಘಂಟಿ, ಸಹದೇವ ಲಾಳಿ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

loading...