ನೇರನೋಟ ಎರಡು ಕೃತಿಗಳ ಲೋಕಾರ್ಪಣೆ

0
18
ಬೆಳಗಾವಿ : ಮಲಿಯಾಳಿ ಮನೋರಮ ಹಾಗೂ ಮಾತೃಭೂಮಿ ಇತ್ಯಾದಿ ದಿನಪತ್ರಿಕೆಗಳು ದಿನವೊಂದಕ್ಕೆ ಹತ್ತರಿಂದ ಹನ್ನೆರಡು ಲಕ್ಷಗಳವರೆಗೆ ಮಾರಾಟವಾಗುತ್ತವೆ. ನಮ್ಮ ಕನ್ನಡ ಪತ್ರಿಕೆಗಳು ಈ ದಿಶೆಯಲ್ಲಿ ಕನ್ನಡಿಗರಿಂದಲೇ ಕಡೆಗಣಿಸಲ್ಪಟ್ಟಿರುವುದು ವಿಪರ್ಯಾಸವೆಂದು ಅಂಕಣ ಬರಹಗಾರ ದು.ಗು.ಲಕ್ಷ್ಮಣ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ನೇರನೋಟ ಭಾಗ 4 ಮತ್ತು 5 ಈ ಎರಡು ಕೃತಿಗಳ ಲೋಕಾರ್ಪಣಾ, 2018ರ ಮೌಲ್ಯಸಂಪದ ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಅವರು ಸಾಮಾಜಿಕ ಪಥದಲ್ಲಿ ‘ಪುಸ್ತಕ ಸಂಸ್ಕøತಿ ಸಾಹಿತ್ಯ ಮತ್ತು ಪತ್ರಿಕೋದ್ಯಮ’ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು. ಟಿವ್ಹಿ ಸಿರಿಯಲ್‍ಗಳು ಈಗ ಮೊದಲಿನಂತೆ ಮೌಲ್ಯಭರಿತವಾಗಿ ಉಳಿದಿಲ್ಲ. ಈಗ ಅವು ಮನಸ್ಸು ಹಾಗೂ ಮನೆಗಳನ್ನು ಒಡೆಯುವಂತಹುದಕ್ಕೆ ಪುಷ್ಟಿ ನೀಡುವಂತಿವೆ. ಪತ್ರಿಕೆಗಳಲ್ಲಿಯೂ ವಸ್ತುನಿಷ್ಠತೆ ಹಾಗೂ ನೈಜತೆ ಕಡಿಮೆಯಾಗಿ ಅದು ಕೇವಲ ಒಂದು ಉದ್ಯಮದ ಭಾವದಲ್ಲಿ ಬೆಳವಣಿಗೆ ಹೊಂದುತ್ತಿರುವುದು ಸಮಾಜ ಹಾಗೂ ದೇಶಕ್ಕೆ ಮಾರಕ ಎಂದು ಅವರು ಹೇಳಿದರು. ರಾಮದುರ್ಗದ ಮೌಲ್ಯಸಂಪದ ಸ್ವಯಂ ಸೇವಾ ಸಂಸ್ಥೆ ಪತ್ರಿಕಾ ಬಳಗ ಹಾಗೂ ಸ್ಥಳೀಯ ವಿಜಯನಗರದ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನಗಳು ಜಂಟಿಯಾಗಿ ಕಾರ್ಯಕ್ರಮ ಜರುಗಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಎಲ್.ಎಸ್. ಶಾಸ್ತ್ರಿ, ವೇದಿಕೆಯ ಮೇಲೆ ಸಾಹಿತಿ ಸಿ.ಕೆ. ಜೋರಾಪೂರ, ಮುಖ್ಯ ಅತಿಥಿಯಾಗಿ ರಾಮದುರ್ಗದ ಚು.ಸಾ.ಪ. ಅಧ್ಯಕ್ಷ ಆರ್.ಎಸ್. ಪಾಟೀಲ ಹಾಗೂ ಸಮಾಜ ಸೇವಕ ವೈದ್ಯ ಡಾ. ಕೆ.ವ್ಹಿ. ಪಾಟೀಲ  ಸೇರಿದಂತೆ ಇತರರು ಇದ್ದರು. ಮೊದಲಿಗೆ ಶಿಕ್ಷಕ ಬಸವರಾಜ ಸುಣಗಾರ ಸಮಾಜ ಸೇವಕ ಅಶೋಕ ಕೇಸ್ತಿ ಸ್ವಾಗತಿಸಿದರು. ಮೌಲ್ಯಸಂಪದ ಸಂಪಾದಕ ಸೋಮಶೇಖರ ವೀ. ಸೊಗಲದ ನಿರೂಪಿಸಿದರು. ರಾಜೇಂದ್ರ ಗೋಶಾನಟ್ಟಿ ವಂದಿಸಿದರು.
loading...