ನ್ಯಾಮ್ಮಯಸತವಾಗಿ ಮತಚಲಾಯಿಸಿ: ಕಟ್ಟಿ

0
25
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ನಮ್ಮ ಭಾರತೀಯ ಸಂವಿಧಾನದಲ್ಲಿ 18 ವಯಸ್ಸು ತುಂಬಿದ ಪ್ರತಿಯೊಬ್ಬರು ಮತದಾನ ಮಾಡುವ ಹಕ್ಕನ್ನು ಹೊಂದಿರುತ್ತಾರೆ. 18 ವಯಸ್ಸು ತಿಂಬಿದ ಎಲ್ಲ ಯುವ ಸಮುದಾಯದವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿಕೊಂಡು ತಮ್ಮಗೆ ದೊರೆತಿರುವ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ತಹಶೀಲ್ದಾರ ಆರ್‌.ವಿ ಕಟ್ಟಿ ತಿಳಿಸಿದರು.

ಸ್ಥಳೀಯ ಆಯ್‌. ಎಸ್‌. ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೆಸಿಐ ಸಂಸ್ಥೆ ಹಾಗೂ ತಾಲೂಕಾ ಆಡಳಿತಗಳ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾದರ ದಿನಾಚರಣೆ ದಿನದಂದು ಕಾಲೇಜಿನ ಯುವ ಮತದಾರರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ನಾವು ನಮ್ಮ ಪ್ರತಿನಿಧಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡುವುದರಿಂದ ಯುವಕರು ಮತದಾನ ಮಾಡುವುದರಿಂದ ವಂಚಿತರಾಗಬಾರದು ಹಾಗೂ ಮತದಾನ ಮಾಡದೇ ತಮ್ಮ ಬಹುದೊಡ್ಡ ಜವಾಬ್ದಾರಿಯಿಂದ ನುನುಚಿಕೊಳ್ಳಬಾರದು ಎಂದರು. ಮತದಾನದಲ್ಲಿ ಎಲ್ಲರೂ ನ್ಯಾಯಸಮ್ಮತ ಹಾಗೂ ನಿರ್ಭಿತಿಯಿಂದ ಮತಚಲಾಯಿಸುವುದರಿಂದ ಮತದಾನದ ಸರಾಸರಿ ಪ್ರಮಾಣ ಹೆಚ್ಚಾಗಿ ಜವಾಬ್ದಾರಿಯುತ ಹಾಗೂ ಯೋಗ್ಯ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆಂದು ತಿಳಿಸಿದರು.
ಜೆಸಿಐ ಅಧ್ಯಕ್ಷರಾದ ಡಾ. ಮಹಾಂತೇಶ ಹೊಳಿಮಠ ಮಾತನಾಡಿ,ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಯುವಜನತೆಯನ್ನು ಹೊಂದಿದ ನಮ್ಮ ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರವಾಗಿದೆ. ಎಲ್ಲಾ ಯುವ ಮತದಾರರು ಸ್ವತಂತ್ರವಾಗಿ ಆಲೋಚನೆ ಮಾಡಿ ಎಲ್ಲರೂ ಕಡ್ಡಾಯವಾಗಿ ಮತದಾನ ಪಾಲ್ಗೊಳ್ಳಬೇಕು ಎಂದು ಹೇಳಿದರು. ಪ್ರಾಂಶುಪಾಲ ಡಾ. ಆನಂದಕುಮಾರ ಲಾಲಸಂಗಿ ಮಾತನಾಡಿ ,ನಮ್ಮ ದೇಶವನ್ನು ಸಧೃಡವಾಗಿ ಕಟ್ಟಬೇಕಾಗಿರುವುದರಿಂದ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜೆಸಿಐ ವಲಯ 24 ರ ಉಪಾಧ್ಯಕ್ಷ ಡಾ. ಕುಮಾರಗೌಡ ಪಾಟೀಲ, ರವಿ ಹರವಿ, ಸುರೇಶ ಹುಚ್ಚನ್ನವರ, ಮಂಜುಳಾ ಕಣವಿ, ಲಕ್ಮೀ ಕಠಾರಿ ವಿದ್ಯಾಥಿ ಪ್ರತಿನಿಧಿ ಬಿ.ಎಲ್‌. ರಾಯನಗೌಡರ, ವಿದ್ಯಾರ್ಥಿನಿ ಪ್ರತಿನಿಧಿ ಕುಮಾರಿ ಅಶ್ವಿನಿ ಮಂಗ್ರಾಣಿ ಮತ್ತಿತರರು ಭಾಗವಹಿಸಿದ್ದರು. ಶಂಕರ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರೊ. ಮಹಾಂತೇಶ ಪುರಾಣಿಕಮಠ ಸ್ವಾಗತಿಸಿದರು. ಡಾ. ಜಗದೀಶ ತಳವಾರ ಪರಿಚಯಿಸಿದರು. ಮಂಜು ಬಿ.ಎಚ್‌.ಜೆಸಿವಾಣಿ ವರದಿವಾಚನ ಮಾಡಿದರು, ಜಿರಂಕಳಿ ಕಾರ್ಯಕ್ರಮ ನಿರೂಪಿಸಿದರು. ಡಾ. ಚಂದ್ರು ಎಂ. ತಳವಾರ ಜೆಸಿಐ ಕಾರ್ಯದರ್ಶಿ ವಿಜಯಮಹಾಂತೇಶ ಎಸ್‌. ಜಿನಗಾ ವಂದಿಸಿದರು.

loading...