ಪರಿಸರದ ಸ್ವಚ್ಛತೆ ಎಲ್ಲರ ಸಾಮಾಜಿಕ ಹೊಣೆಗಾರಿಕೆ: ಬಸವಪ್ರಸಾದ

0
28
loading...

ಕನ್ನಡಮ್ಮ ಸುದ್ದಿ ಚಿಕ್ಕೋಡಿ 09: ನಮ್ಮ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಪ್ರತಿಯೊಬ್ಬರು ಪಟ್ಟಣದಲ್ಲಿ ಶುಚಿತ್ವ ಕಾಪಾಡಲು ಶ್ರಮಿಸಬೇಕಿರುವುದು ಎಲ್ಲರ ಸಾಮಾಜಿಕ ಹೊಣೆಗಾರಿಕೆ ಎಂದು ಬಸವಜ್ಯೋತಿ ಯುಥ್‌ ಫೌಂಡೇಶನ್‌ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು. ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಎಸ್‌ಎಫ್‌ಸಿ ಯೋಜನೆಯಡಿ 10 ಲಕ್ಷ ವೆಚ್ಚದಲ್ಲಿ ಬಸವವೃತ್ತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರಕಾರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶದಲ್ಲಿ ಸ್ವಚ್ಛತೆ ಆರಂಭಿಸಿದ್ದು, ಅಭಿವೃದ್ಧಿಪರ ದೇಶಗಳಲ್ಲಿ ಸ್ವಚ್ಛತೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಭಾರತದಲ್ಲಿಯೂ ಸ್ವಚ್ಛತೆಯ ಮೂಲಕ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ ಎಂದರು. ಮುಂದುವರೆದ ಅವರು, ಯಕ್ಸಂಬಾ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪಟ್ಟಣದ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸರಕಾರದಿಂದ ದೊರೆಯುವ ಸಹಾಯಧನ ಪಡೆದು ಪ್ರತಿಯೊಬ್ಬರು ಶೌಚಾಲಯ ನಿರ್ಮಿಸಿಕೊಂಡು ಪಟ್ಟಣವನ್ನು ಬಯಲು ಶೌಚಮುಕ್ತವನ್ನಾಗಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಮಂಜುಶ್ರೀ ಕಟ್ಟಿಕರ, ಅನ್ವರ ದಾಡಿವಾಲೆ, ಕಲ್ಲಪ್ಪ ಜಾಧವ, ಸುರೇಶ ಸಲಗರೆ, ಮಹಾದೇವ ಅಂಕಲೆ, ಶಿವರಾಜ ಜೊಲ್ಲೆ, ಅನೀಲ ಜೊಲ್ಲೆ, ಸದಸ್ಯರಾದ ರೂಪಾ ಬಾಕಳೆ, ಮಹಾದೇವಿ ಮಠಪತಿ, ಆರತಿ ಪೋತದಾರ, ಗೀತಾ ನಾಯಿಕ, ರಜನಿಕಾಂತ ಪಾಂಗಮ, ದಯಾನಂದ ಕಾಡಾಪುರೆ, ಜಯಾನಂದ ಜಾಧವ, ಕಲ್ಲಪ್ಪಾ ಜಾಧವ, ಬಾಬು ಬಾಕಳೆ, ರಾಜು ಬಾಳಕೆ, ಎಂ.ಕೆ.ಹುನ್ನರಗಿ, ರಾಮಚಂದ್ರ ಬಾಕಳೆ, ಬಸು ವಸ್ತ್ರದ, ಶಂಕರ ಬಾಕಳೆ,ಯಾಸೀನ ತಾಂಬುಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...