ಪುರುಷರ ದೌರ್ಜನ್ಯ ತಡೆ ಅವಶ್ಯ: ಭಾರತಿ ಶೆಟ್ಟರ

0
38
loading...

ರಾಯಬಾಗ 20: ಜಿಲ್ಲೆಯಲ್ಲಿ ಸುಮಾರು 114 ಮಕ್ಕಳ ಮೇಲೆ ಲೈಗಿಂಕ ದೌರ್ಜನ್ಯಗಳು ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ ಮತ್ತು ಇತ್ತೀಚಿಗೆ ಗಂಡುಮಕ್ಕಳ ಮೇಲೆಯೇ ಹೆಚ್ಚು ಅತ್ಯಾಚಾರ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು ಹೆಣ್ಣುಮಕ್ಕಳನ್ನು ರಕ್ಷಿಸುವಂತೆ ಗಂಡು ಮಕ್ಕಳನ್ನು ಕೂಡಾ ಲೈಗಿಂಕ ದೌರ್ಜನ್ಯದಿಂದ ರಕ್ಷಿಸುವುದು ಬಹಳ ಅವಶ್ಯವಿದೆ ಎಂದು ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಭಾರತಿ ಶೆಟ್ಟರ ಹೇಳಿದರು.ರಾಯಬಾಗ ಪಟ್ಟಣದಲ್ಲಿ ಜನಮಾನ್ಯ ವ್ಹಿ.ಎಲ್‌.ಪಾಟೀಲ (ಅಭಾಜಿ) ಫೌಂಡೇಶನ್‌ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹೆಣ್ಣು ಮಕ್ಕಳ ಅತ್ಯಾಚಾರ ತಡೆಗಟ್ಟುವ ಜನಜಾಗೃತಿ ಕಾರ್ಯಾಗರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 2007-8 ರಲ್ಲಿ ಕೇಂದ್ರ ಸರಕಾರ ಮಾಡಿದ ಸಮೀಕ್ಷೆ ಪ್ರಕಾರ ಗಂಡುಮಕ್ಕಳ ಮೇಲೆ ಶೇಕಡಾ 53 ರಷ್ಟು ಹಾಗೂ ಹೆಣ್ಣುಮಕ್ಕಳ ಮೇಲೆ ಶೇ.43 ರಷ್ಟು ಅತ್ಯಾಚಾರಗಳು ನಡೆಯುತ್ತಿವೆ ಎಂದು ಹೇಳಿದರು. ಂiÀiರಾÀದರೂ ಬಾಲ್ಯ ವಿವಾಹ ಮಾಡುತ್ತಿದ್ದರೆ ಕೂಡಲೇ ಯಾರು ಬೇಕಾದರೂ 1098 ಕ್ಕೆ ಉಚಿತ ಕರೆಮಾಡಿದರೆ ಸಾಕು ಮದುವೆಗೆ ಒತ್ತಾಯಿಸಿದ ಪಾಲಕರ ಮೇಲೆ ಸೂಕ್ತ ಪ್ರಕರಣ ದಾಖಲಿಸುತ್ತೇವೆ ಮತ್ತು ಮದುವೆಯಾಗುವ ಗಂಡು ಅಥವಾ ಹೆಣ್ಣು ಅವರ ವಯಸ್ಸಿಗೆ ಒಂದೆ ದಿನ ಕಡಿಮೆ ಇದ್ದರೂ ಕೂಡಾ ಅದು ಬಾಲ್ಯವಿವಾಹ ಅಂತ ಪರಿಗಣಿಸಿ ಅದಕ್ಕೆ ಕೂಡಾ ಶಿಕ್ಷೆಯಾಗುತ್ತದೆ ಎಂದು ಹೇಳಿದರು. ಮಕ್ಕಳ ಮೇಲೆ ಯಾರೇ ದೌರ್ಜನ್ಯ ವೆಸಗಿದರೂ ಪಾಲಕರು ಕೂಡಲೇ ಪೋಲೀಸ್‌ ಠಾಣೆಯಲ್ಲಿ ಅಂತಹವರ ಮೇಲೆ ದೂರು ನೀಡಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕೆಂದು ಹೇಳಿದರು.ಜಿ.ಪಂ ಸದಸ್ಯ ಹಾಗೂ ಅಭಾಜಿ ಫೌಂಡೇಶನ ಅಧ್ಯಕ್ಷ ಪ್ರಣಯ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.ಈ ಸಂದರ್ಭದಲ್ಲಿ ಸಮಾಜ ಸೇವಕ ಪ್ರದೀಪ ಮಾಳಗಿ, ವಕೀಲರ ಸಂಘದ ಅಧ್ಯಕ್ಷ ಪಿ.ಆರ್‌.ಗುಡೋಡಗಿ, ಮಹಾದೇವ ಕೋಕಾಟೆ, ಸಂಜಯ ತಳವಾಲ್ಕರ, ಶಾಂತಿನಾಥ ಶೆಟ್ಟಿ, ಡಾ: ಸುರೇಶ ಬೆಳಗಾಂವಕರ, ಪಿ.ಎಂ.ಪಾಟೀಲ, ಅಶೋಕ ಅಂಗಡಿ, ಸುನೀಲ ಪಾಟೀಲ, ಅಶೋಕ ಅಂಗಡಿ, ಗಣೇಶ ಕಾಂಬಳೆ, ರಾಜು ಕಾಂಬಳೆ, ಅಪ್ಪು ಪವಾರ ಸೇರದಂತೆ ಮೊದಲಾದವರು ಇದ್ದರು.

loading...