ಪೋಲಿಸರಿಗೆ 11 ಸಾವಿರ ವಸತಿ ಗೃಹ ನಿರ್ಮಾಣ: ರಾಮಲಿಂಗಾರೆಡ್ಡಿ

0
27
loading...

ಕನ್ನಡಮ್ಮ ಸುದ್ದಿಚಿಕ್ಕೋಡಿ 12: ಕಳೆದ ಐದು ವರ್ಷಗಳ ಅವಧಿಯಲ್ಲಿ ಪೋಲಿಸ ಸಿಬ್ಬಂದಿ ವಸತಿ ಕೊರತೆ ನೀಗಿಸಲು 2223 ಕೋಟಿ ವೆಚ್ಚದಲ್ಲಿ 11,000 ಮನೆಗಳನ್ನು ನಿರ್ಮಿಸಲು ಕ್ರಮ ಕೈಕೊಳ್ಳಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ತಾಲೂಕಿನ ಸದಲಗಾ ಪಟ್ಟಣದ ನೂತನ ಬಸ್‌ ನಿಲ್ದಾಣದ ಶಂಕು ಸ್ಥಾಪನೆ ಹಾಗೂ ಪೋಲಿಸ ಠಾಣೆ ಶಂಕುಸ್ಥಾಪನೆ ನೆರವೇರಿಸಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ 2000 ಮನೆ ನಿರ್ಮಿಸಲಾಗಿದ್ದು, ಪ್ರಸಕ್ತ ವರ್ಷದಲ್ಲಿ 4 ಸಾವಿರ ಮನೆ ನಿರ್ಮಿಲಿದ್ದು, 11000 ಸಾವಿರ ಮನೆ ನಿರ್ಮಿಸಿ ಪೊಲೀಸರ ವಸತಿ ಸಮಸ್ಯೆ ನೀಗಿಸಲಾಗಿದೆ ಎಂದರು.ಕಳೆದ ಐದು ವರ್ಷ ಹಿಂದೆ 12 ಸಾವಿರ ಸಿಬ್ಬಂದಿ ನೇಮಕ ಮಾಡಲಾಗಿತ್ತು. 32 ಸಾವಿರ ಸಿಬ್ಬಂದಿ ನೇಮಕ ಮಾಡಲಾಗಿದೆ. ದೇಶದಲ್ಲಿ ಉತ್ತಮ ಕೆಲಸ ನಿರ್ವಹಣೆ ಕರ್ನಾಟಕ ಪೊಲೀಸ ಪಡೆ ಮುಂದಿದೆ. ಬಿಜೆಪಿ ವಿನಾಕಾರಣ ಟೀಕೆ ಮಾಡುತ್ತಲಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ ಎಂದರು. ನನ್ನ ಆಡಳಿತಕ್ಕೂ ಮುಂಚೆ ಇದ್ದ ಪರಿಸ್ಥಿತಿಗಿಂತ ಈಗ ಸುಧಾರಣೆಯಾಗಿದೆ.ಮಂತ್ರಿಯಾಗಿದ್ದಾಗಲು ಸಂಸದ ಪ್ರಕಾಶ ಹುಕ್ಕೇರಿ ಸಚಿವರ ಕಛೇರಿಗಳಿಗೆ ತೆರಳಿ ಕಾಮಗಾರಿ ಮಂಜೂರಿ ಮಾಡಿಸುತ್ತಾರೆ. ಹೇಳಿದ ಕೆಲಸ ಬಿಡುವುದಿಲ್ಲ. ಚಿಕ್ಕೋಡಿ ವಿಭಾಗೀಯ ಕಛೇರಿ ವ್ಯಾಪ್ತಿಯಲ್ಲಿ 50 ಕೋಟಿಗಿಂತಲೂ ಹೆಚ್ಚು ಕೆಲಸ ಸಂಸದ ಪ್ರಕಾಶ ಹುಕ್ಕೇರಿ ತಂದಿದ್ದಾರೆ. ಯಕ್ಸಂಬಾದಲ್ಲಿ ಪೊಲೀಸ ಠಾಣೆ ನಿರ್ಮಿಸಲಾಗುವುದು ಎಂದರು. ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಮಾತನಾಡಿ, ಪ್ರಕಾಶ ಹುಕ್ಕೇರಿ ನನಗೆ ರೊಟ್ಟಿ ರುಚಿ ತೋರಿಸಿ ಪರಿಚಯವಾದವರು. ಏನಾದರೂ ಕೆಲಸ ಬೇಕಾದರೆ ಹಟ ಹಿಡಿದರೆ ಬಿಡಲ್ಲ. ಜಿಲ್ಲೆಯ ಉಸ್ತುವಾರಿಯಾಗಿ 7 ವರ್ಷ ಕೆಲಸ ಮಾಡಿದ ಅನುಭವದಲ್ಲಿ ಪ್ರಕಾಶ ಹುಕ್ಕೇರಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಭಾರತದಲ್ಲಿ ಉತ್ತಮ ಸಾರಿಗೆ ನೀಡುವ ಮೂಲಕ 207 ಪ್ರಶಸ್ತಿ ಪಡೆದುಕೊಂಡಿದೆ. ದೇಶದಲ್ಲಿ ಉತ್ಪಾದನೆಯಾಗುವ ಹೊಸ ಬಸ್‌ಗಳನ್ನು ಸಾರಿಗೆ ನಿಗಮಕ್ಕೆ ಕರೆತರಲಾಗಿದೆ. 460 ಬಸ್‌ಗಳನ್ನು ನೀಡಲಾಗಿದೆ. 10 ಇಂದಿರಾ ಕ್ಯಾಂಟಿನ್‌ ಹಾಗೂ ಇಂದಿರಾ ಕ್ಲಿನಿಕ್‌ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿರುವ ಸ್ಪರ್ಶ ಬಸ್‌ನಲ್ಲಿಯೇ ಆಪರೇಶನ್‌ ವ್ಯವಸ್ಥೆ ಮಾಡುವ ಬಸ್‌ ನಿರ್ಮಿಸಲಾಗಿದೆ ಹುಬ್ಬಳ್ಳಿಗೂ ಈ ಯೋಜನೆ ವಿಸ್ತರಿಸಲಾಗುವುದು ಎಂದರು. 20 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ ವಿತರಣೆ ಮೂಲಕ ಪ್ರಥಮ ಸ್ಥಾನ ಪಡೆದಿದೆ. ರಸ್ತೆ ಸುರಕ್ಷತೆಗಾಗಿ ಟ್ರಕ್‌ ಟರ್ಮಿನಲ್‌ ನಿರ್ಮಿಸಲಾಗಿದೆ. ಮಹಿಳೆಯರಿಗೆ ಚಾಲನೆ ಪರವಾನಗಿ ನೀಡಲಾಗುವುದು ಎಂದರು. ಬಸ್‌ ನಿಲ್ದಾಣಗಳಿಗೆ 2200 ಕೋಟಿ ಅನುದಾನ ದೊರೆತಿದೆ ಎಂದರು. ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ಸರಕಾರ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ 28 ಕೋಟಿ ವೆಚ್ಚದಲ್ಲಿ ಹೈಟೆಕ್‌ ಬಸ್‌ ನಿಲ್ದಾಣಗಳಿಗೆ ಅನುದಾನ ನೀಡಿದ್ದು, ಚಿಕ್ಕೋಡಿ ತಾಲೂಕಿನಲ್ಲಿ 60 ಪೋಲಿಸ ವಸತಿ ಗೃಹ ನಿರ್ಮಿಸಲಾಗಿದೆ. ಶ್ರವಣಬೆಳಗೋಳಕ್ಕೆ ಜೈನ ಸಮುದಾಯ ಜನ ಹೋಗಲು ಸರಕಾರ ಆರ್ಧದಷ್ಟು ರಿಯಾಯತಿ ನೀಡಬೇಕೆಂದರು. ಅಲ್ಲದೇ ಯಕ್ಸಂಬಾದಲ್ಲಿ ಪೊಲೀಸ ಠಾಣೆ ಮಂಜೂರಾತಿ ನೀಡಬೇಕು ಹಾಗೂ ಇತ್ತೀಚಿನ ಗಲಭೆ ಪ್ರಕರಣದ ಹಿಂಪಡೆಯಬೇಕೆಂದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಸಂಸದೀಯ ಕಾರ್ಯದರ್ಶಿ, ಸರಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮ ಅಧ್ಯಕ್ಷ ಸದಾನಂದ ಡಂಗನವರ, ಅಜಯ ಸೂರ್ಯವಂಶಿ, ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಕೆ.ಪಿ. ಮಗೆನ್ನವರ, ಲಕ್ಷ್ಮಣರಾವ ಚಿಂಗಳೆ, ಅಣ್ಣಾಸಾಹೇಬ ಗುಂಡಕಲ್ಲೆ ಉಪಸ್ಥಿತರಿದ್ದರು. ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ರವಿ ಮಿರ್ಜೆ ಸ್ವಾಗತಿಸಿದರು.

loading...